ಕಾಪು: ದೇವರ ಪೂಜೆಯಲ್ಲಿ ಭೇದವಿರಬಾರದು. ಭಕ್ತಿಪೂರ್ವಕವಾಗಿ ನಮಿಸುವ ಪ್ರತಿಯೊಬ್ಬನಿಗೂ ದೇವರ ಅನುಗ್ರಹವಿರುತ್ತದೆ. ಕರಾವಳಿಯ ದೇಗುಲಗಳನ್ನು ನೆಮ್ಮದಿ ನೀಡುವ ನೆಲೆಗಳನ್ನಾಗಿಸುವ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಮುಂದುವರಿಯಬೇಕಿದೆ ಎಂದು ಇತಿಹಾಸ ತಜ್ಞ,ಧಾರ್ಮಿಕ ಚಿಂತಕ ಡಾ| ವೈ. ಎನ್. ಶೆಟ್ಟಿ ಹೇಳಿದರು.
ಜಲಂಚಾರು ಶ್ರೀ ಮಹಾಲಿಂಗೇಶ್ವರ – ಮಹಾಗಣಪತಿ ದೇವಸ್ಥಾನದಲ್ಲಿ ಗುರುವಾರ ಜರಗಿದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಸಮಾರೋಪ ಭಾಷಣ ಮಾಡಿದರು.
ಕಾಪು ಬಂಟರ ಸಂಘದ ಗೌರವಾಧ್ಯಕ್ಷ ಬಿ. ಸಚ್ಚಿದಾನಂದ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬಹುಭಾಷಾ ವಿಜ್ಞಾನಿ ಡಾ| ಯು.ಪಿ. ಉಪಾಧ್ಯಾಯ, ಮುಂಬಯಿಯ ಚರಿಷ್ಮಾ ಬಿಲ್ಡರ್ನಸುಧೀರ್ ವಿ. ಶೆಟ್ಟಿ, ಮುಂಬಯಿಯ ಉದ್ಯಮಿ ಮನೋಹರ್ ಜೆ. ಶೆಟ್ಟಿ, ಮುಂಬಯಿ ಕೃಷ್ಣ ಪ್ಯಾಲೇಸ್‌ನ ಕೃಷ್ಣ ವೈ. ಶೆಟ್ಟಿ, ನ್ಯಾಯವಾದಿ ರತ್ನಾಕರ ಶೆಟ್ಟಿ ಮುಂಬಯಿ, ಸಾಯಿರಾಧಾ ಗ್ರೂಪ್‌ನ ಕಾಪು ಮನೋಹರ ಶೆಟ್ಟಿ, ಕರ್ನಾಟಕ ಬ್ಯಾಂಕ್ ಎಜಿಎಂ ಸತೀಶ್ ಶೆಟ್ಟಿ, ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ, ಪ್ರವೀಣ್ ಶೆಟ್ಟಿ ಪುತ್ತೂರು, ಅನಿಲ್ ಕುಮಾರ್ ಶೆಟ್ಟಿ ಪಡುಬಿದ್ರಿ, ಮಣಿಪಾಲ ಪ್ರಸನ್ನ ಗಣಪತಿ ದೇಗುಲ ಮೊಕ್ತೇಸರ ಬೆಳ್ಳಿಪ್ಪಾಡಿ ಹರಿಪ್ರಸಾದ್ ರೈ, ಗಣ್ಯರಾದ ಹರಿಪ್ರಸಾದ್ ತಂತ್ರಿ, ವಿಠಲದಾಸ್ ತಂತ್ರಿ, ಸುಬ್ರಹ್ಮಣ್ಯ ಐತಾಳ್ ಪಾದೂರು, ಮಾಧವ ಶೆಟ್ಟಿ ಪುಣೆ, ಭಾಸ್ಕರ ಶೆಟ್ಟಿ ಹಾವಂಜೆ, ಮುದ್ದು ಪೂಜಾರಿ ಕರಂದಾಡಿ, ಜಗನ್ನಾಥ ಶೆಟ್ಟಿ ಕನ್ಯಾನಗುತ್ತು, ನಿರಂಜನ್ ಶೆಟ್ಟಿ ಕರಂದಾಡಿ, ವಸಂತ ದೇವಾಡಿಗ ಜಲಂಚಾರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಘುರಾಮ ಎ. ಶೆಟ್ಟಿ, ಕಾರ್ಯದರ್ಶಿ ವೇಣುಗೋಪಾಲ ತಂತ್ರಿ, ಕೋಶಾಧಿಕಾರಿ ಅರುಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸಮ್ಮಾನ: ಸುಮಾರು 4.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಶಿಲಾಮಯ ದೇಗುಲದ ಪಂಚಾಂಗದ ಕೆಲಸ ನಿರ್ವಹಿಸಿದ ನಿಯಾಮತ್‌ಅಲಿ, ದೇಗುಲ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಘುರಾಮ ಎ. ಶೆಟ್ಟಿ, ಕಾರ್ಯಾಧ್ಯಕ್ಷ ಪಂಜಿತ್ತೂರುಗುತ್ತು ರವಿರಾಜ ಶೆಟ್ಟಿ ಸಹಿತ ಕೆಲಸ ಕಾರ್ಯಗಳನ್ನು ನಿರ್ವಹಿಸಿದವರನ್ನು, ದಾನಿಗಳನ್ನು ಮತ್ತು ಸಹಕರಿಸಿದವರನ್ನು ಸಮ್ಮಾನಿಸಲಾಯಿತು.
ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ರವಿರಾಜ್ ಶೆಟ್ಟಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಜಲಂಚಾರು ರಘುಪತಿ ತಂತ್ರಿ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಲೀಲಾಧರ ಜಿ. ಶೆಟ್ಟಿ ಕರಂದಾಡಿ ವಂದಿಸಿದರು. ನಿರ್ಮಲ್ ಕುಮಾರ್ ಹೆಗ್ಡೆ ನಿರೂಪಿಸಿದರು.