ಕೊಲೊಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಹಣಕಾಸು ಬಿಕ್ಕಟ್ಟು ಮತ್ತು ತೈಲ ಕೊರತೆ ಕೈಮೀರಿರುವಂತೆಯೇ ಅಲ್ಲಿನ ಸಂಸತ್ ಅಧಿವೇಶನವನ್ನು ಎರಡು ದಿನಕ್ಕೆ ಇಳಿಕೆ ಮಾಡಲಾಗಿದೆ. ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಂಗಳವಾರ ಮತ್ತು ಬುಧವಾರ ಮಾತ್ರ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ ಎಂದು ಸದನ ನಾಯಕ ದಿನೇಶ್ ಗುಣವರ್ಧನೆ ತಿಳಿಸಿದ್ದಾರೆ.
ಪ್ರತಿಪಕ್ಷ ಸಮಾಜ ಜನ ಬಾಲವೇಗಯ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಮಾತನಾಡಿ ಲಂಕಾ ಸರ್ಕಾರಕ್ಕೆ ಸದ್ಯ ಎದುರಾಗಿರುವ ಬಿಕ್ಕಟ್ಟು ನಿರ್ವಹಿಸಲು ಯಾವುದೇ ಕಾರ್ಯಯೋಜನೆ ಇಲ್ಲ ಎಂದು ದೂರಿದ್ದಾರೆ.
ಇದನ್ನೂ ಓದಿ:“ಮಹಾ” ರಾಜಕೀಯ ಬಿಕ್ಕಟ್ಟು: ಶಿವಸೇನಾ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಶಿಂಧೆಗೆ ಗೇಟ್ ಪಾಸ್
ಸೋಮವಾರ ನಡೆದಿದ್ದ ಬೆಳವಣಿಗೆಯಲ್ಲಿ ದ್ವೀಪ ರಾಷ್ಟ್ರದ ಸರ್ಕಾರ ಶ್ರೀಲಂಕಾ ಅಧ್ಯಕ್ಷರ ಪರಮಾಧಿಕಾರವನ್ನು ಮೊಟಕುಗೊಳಿಸುವ ಸಂವಿಧಾನ ತಿದ್ದುಪಡಿಯನ್ನು ಅಂಗೀಕರಿಸುವ ಬಗ್ಗೆ ತೀರ್ಮಾನ ಕೈಗೊಂಡಿತ್ತು.