Advertisement

ಭಾರತಕ್ಕೆ ಶ್ರೀಲಂಕಾ ಮೊದಲ ಎದುರಾಳಿ

09:58 AM Oct 26, 2019 | sudhir |

ದುಬಾೖ: ಮುಂದಿನ ವರ್ಷದ ಜನವರಿ 17ರಿಂದ ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆಯಲಿರುವ 13ನೇ ಆವೃತ್ತಿಯ ಅಂಡರ್‌- 19 ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಹಾಲಿ ಹಾಗೂ 4 ಬಾರಿಯ ಚಾಂಪಿಯನ್‌ ಭಾರತ “ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಜ. 19ರಂದು ಬ್ಲೋಮ್‌ಫಾಂಟೈನ್‌ನಲ್ಲಿ ನಡೆಯುವ ತನ್ನ ಮೊದಲ ಮುಖಾಮುಖೀ ಯಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ.

Advertisement

ನ್ಯೂಜಿಲ್ಯಾಂಡ್‌ ಮತ್ತು ಮೊದಲ ಸಲ ಕಣಕ್ಕಿಳಿಯಲಿರುವ ಜಪಾನ್‌ “ಎ’ ವಿಭಾಗದಲ್ಲಿರುವ ಉಳಿದೆರಡು ತಂಡಗಳು. ಜಪಾನ್‌ ವಿರುದ್ಧ ಜ. 21, ನ್ಯೂಜಿಲ್ಯಾಂಡ್‌ ವಿರುದ್ಧ ಜ. 24ರಂದು ಭಾರತ ಲೀಗ್‌ ಪಂದ್ಯಗಳನ್ನಾಡಲಿದೆ.
ಕಳೆದ ಸಲದ ರನ್ನರ್‌ ಅಪ್‌ ಹಾಗೂ 3 ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯ “ಬಿ’ ವಿಭಾಗದ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸನ್ನು ಎದುರಿಸಲಿದೆ. ಇಲ್ಲಿನ ಉಳಿದೆರಡು ತಂಡಗಳೆಂದರೆ ಇಂಗ್ಲೆಂಡ್‌ ಮತ್ತು ನೈಜೀರಿಯಾ.

ಜಪಾನ್‌ನಂತೆ ನೈಜೀರಿಯಾಕ್ಕೂ ಇದು ಮೊದಲ ವಿಶ್ವಕಪ್‌ ಸಂಭ್ರಮವಾಗಿದೆ. “ಡಿ’ ವಿಭಾಗದಲ್ಲಿರುವ ಆತಿಥೇಯ ಹಾಗೂ 2014ರ ಚಾಂಪಿಯನ್‌ ದಕ್ಷಿಣ ಆಫ್ರಿಕಾ ಜ. 17ರಂದು ಅಫ್ಘಾನಿಸ್ಥಾನ ವಿರುದ್ಧ ಅಭಿಯಾನ ಆರಂಭಿಸಲಿದೆ.
ಲೀಗ್‌ ಹಂತದಲ್ಲಿ ಮೊದಲೆರಡು ಸ್ಥಾನ ಪಡೆದ ಪ್ರತೀ ಗುಂಪಿನ ತಂಡಗಳು ಸೂಪರ್‌ ಲೀಗ್‌ನಲ್ಲಿ ಸೆಣಸಲಿವೆ. ಉಳಿದ ತಂಡಗಳು ಪ್ಲೇಟ್‌ ವಿಭಾಗದಲ್ಲಿ ಆಡುತ್ತವೆ. ಬೆನೋನಿ, ಪೊಚೆಫ್ಸೂóಮ್‌ ಮತ್ತು ಕಿಂಬರ್ಲಿ ಉಳಿದ 3 ತಾಣಗಳಾಗಿವೆ. 16 ತಂಡಗಳು ಪಾಲ್ಗೊಳ್ಳಲಿ ರುವ ಈ ಪಂದ್ಯಾವಳಿಯ ಫೈನಲ್‌ ಫೆ. 9ರಂದು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next