Advertisement

ಕೇರಳಕ್ಕೆ ಭೇಟಿ ನೀಡಿದ ಲಂಕಾ ಪ್ರಧಾನಿ

03:22 PM Jul 27, 2019 | keerthan |

ಬದಿಯಡ್ಕ: ಶ್ರೀಲಂಕಾ ಪ್ರಧಾನಿ ರಣಿಲ್‌ ವಿಕ್ರಮ ಸಿಂಘೆ ಅವರು ಇಂದು ಕೇರಳಕ್ಕೆ ಭೆಟಿ ನೀಡಿದ್ದು, ಕುಂಬಳೆಯ ಬೇಳ ಕುಮಾರ ಮಂಗಲ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು.

Advertisement

ಲಂಕಾ ಪ್ರಧಾನಿಗಳ ಖಾಸಗಿ ಭೇಟಿ ಇದಾಗಿದ್ದು, ಶುಕ್ರವಾರ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇಂದು ಕುಂಬಳೆ ನೀರ್ಚಾಲು ಬಳಿಯ ಬೇಳ ಕುಮಾರ ಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಖಾಸಗಿ ಕಾರ್ಯಕ್ರಮವಾದ ಕಾರಣ ಪತ್ರಕರ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು.

ಕಾಸರಗೋಡು ಬೇಕಲದ ಲಲಿತ್‌ ರೆಸಾರ್ಟ್‌ ಹೆಲಿಪ್ಯಾಡ್‌ ನಿಂದ ಮಂಗಳೂರಿಗೆ ಹೊರಟ ರಣಿಲ್‌ ವಿಕ್ರಮ್‌ ಸಿಂಘೆ ಅವರನ್ನು ಕಾಸರಗೋಡು ಜಿಲ್ಲಾಧಿಕಾರಿ ಸಜಿತ್‌ ಬಾಬು ಬೀಳ್ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next