Advertisement

Sri Lanka; ವಿಶ್ವದ ಅತಿ ದೊಡ್ಡ ಕಿಡ್ನಿ ಸ್ಟೋನ್; ಗಿನ್ನೆಸ್‌ ದಾಖಲೆಗೆ ಸೇರ್ಪಡೆ

09:06 PM Jun 14, 2023 | Team Udayavani |

ಕೊಲೊಂಬೊ: ಶ್ರೀಲಂಕಾ ರಾಜಧಾನಿ ಕೊಲೊಂಬೋದಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲಿನ ವೈದ್ಯರು ಜಗತ್ತಿನ ಅತ್ಯಂತ ಹೆಚ್ಚಿನ ತೂಕದ ಕಿಡ್ನಿ ಸ್ಟೋನ್‌ ಅನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.

Advertisement

ಇದು ಗಿನ್ನೆಸ್‌ ದಾಖಲೆಗೆ ಸೇರ್ಪಡೆಯಾಗಿದೆ. ಅದರ ತೂಕ 801 ಗ್ರಾಮ್‌ ಇದೆ. ಅದು 13.37 ಸೆಮೀ ಉದ್ದವಿದೆ ಎಂದು ಆಸ್ಪತ್ರೆ ತಿಳಿಸಿದೆ.

ಈ ಮೂಲಕ 2004ರಲ್ಲಿ ಭಾರತದ ವೈದ್ಯರು ವ್ಯಕ್ತಿಯೊಬ್ಬರ ದೇಹದಿಂದ ಹೊರತೆಗೆದಿದ್ದ ಕಿಡ್ನಿ ಸ್ಟೋನ್‌ನ ತೂಕದ ದಾಖಲೆಯನ್ನು (13 ಸೆಮೀ ಉದ್ದ)ಅಳಿಸಿ ಹಾಕಿದೆ.

2008ರಲ್ಲಿ ಪಾಕಿಸ್ತಾನದ ವೈದ್ಯರು ನಡೆಸಿದ್ದ ಶಸ್ತ್ರ ಚಿಕಿತ್ಸೆ ವೇಳೆ 620 ಗ್ರಾಂ ತೂಕದ ಮೂತ್ರಪಿಂಡದ ಕಲ್ಲು ಪತ್ತೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next