Advertisement

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶ್ರೀಪಾಲಿ ವೀರಕೋಡಿ ವಿದಾಯ

11:00 AM Jul 24, 2020 | mahesh |

ಕೊಲಂಬೊ: ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡದ ವೇಗದ ಬೌಲರ್‌ ಶ್ರೀಪಾಲಿ ವೀರಕೋಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. “ಅಂತಾರಾಷ್ಟ್ರೀಯ ಕ್ರಿಕೆಟ್‌ ಕೂಟಗಳಿಗೆ ನಾನು ನಿವೃತ್ತಿ ನೀಡಲು ಇದು ಸೂಕ್ತ ಸಮಯ ಎಂದು ಭಾವಿಸಿದ್ದೇನೆ, ಇದು ನನ್ನ ವೈಯಕ್ತಿಕ ನಿರ್ಧಾರವಾಗಿದೆ’ ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿಗೆ ನೀಡಿರುವ ವಿದಾಯ ಪತ್ರದಲ್ಲಿ ತಿಳಿಸಿದ್ದಾರೆ. 2006ರಲ್ಲಿ ಶ್ರೀಪಾಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 34 ವರ್ಷದ ಶ್ರೀಪಾಲಿ 2018ರಲ್ಲಿ ಕೊನೆಯದಾಗಿ ಲಂಕಾ ಪರ ಕ್ರಿಕೆಟ್‌ ಆಡಿದ್ದರು. 2013 ಹಾಗೂ 2017 ರಲ್ಲಿ ನಡೆದಿದ್ದ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಲಂಕಾ ತಂಡವನ್ನು ಪ್ರತಿನಿಧಿಸಿದ್ದರು.

Advertisement

2014ರಲ್ಲಿ ಏಷ್ಯನ್‌ ಗೇಮ್ಸ್‌ ಗೆದ್ದ ಲಂಕಾ ತಂಡದ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಶ್ರೀಪಾಲಿ 89 ಏಕದಿನ ಪಂದ್ಯವನ್ನಾಡಿ 58 ವಿಕೆಟ್‌, 58 ಟಿ20 ಪಂದ್ಯವನ್ನಾಡಿ 31 ವಿಕೆಟ್‌ ಉರುಳಿಸಿ ದ್ದಾರೆ. ಕಳೆದ ತಿಂಗಳಷ್ಟೇ ಆಸ್ಟ್ರೇಲಿಯದ ಫಿಟ್ನೆಸ್‌ ಸಂಸ್ಥೆ ಯಿಂದ ತರಬೇತುದಾರರಾಗಿ ಶ್ರೀಪಾಲಿ ಆಯ್ಕೆಯಾಗಿದ್ದರು, ಹೀಗೆ ಆಯ್ಕೆಯಾದ ಲಂಕಾದ ಮೊದಲ ಕ್ರಿಕೆಟ್‌ ಆಟಗಾರ್ತಿ ಆಗಿದ್ದರು ಎನ್ನುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next