Advertisement
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು 33 ಓವರ್ ಮುಗಿದಾಗ ಮಳೆ ಸುರಿ ಯಿತು. ಆಗ ಶ್ರೀಲಂಕಾ 8 ವಿಕೆಟಿಗೆ 180 ರನ್ ಗಳಿಸಿತ್ತು. ಮಳೆಯಿಂದ ಒಂದೂವರೆ ತಾಸು ಆಟ ನಷ್ಟವಾಯಿತು. ಹೀಗಾಗಿ ಓವರ್ ಸಂಖ್ಯೆಯನ್ನು 41ಕ್ಕೆ ಇಳಿಸಲಾಗಿತ್ತು. ಮೊಹಮ್ಮದ್ ನಬಿ ಮತ್ತು ರಶೀದ್ ಖಾನ್ ಅವರ ನಿಖರ ದಾಳಿಗೆ ಕುಸಿದ ಶ್ರೀಲಂಕಾ ತಂಡವು 36.5 ಓವರ್‌ಗಳಲ್ಲಿ 201 ರನ್ನಿಗೆ ಆಲೌಟಾಯಿತು.
Related Articles
Advertisement
ಕರುಣರತ್ನೆ ಔಟಾದ ಬಳಿಕ ಪೆರೆರ ಅವ ರನ್ನು ಸೇರಿಕೊಂಡ ಲಹಿರು ತಿರಿಮನ್ನೆ ಕೂಡ ವೇಗವಾಗಿ ರನ್ ಪೇರಿಸತೊಡಗಿದರು. ಇವರಿಬ್ಬರ ರನ್‌ವೇಗವನ್ನು ಗಮನಿಸಿದಾಗ ಶ್ರೀಲಂಕಾದ ಮೊತ್ತ 300ರ ಗಡಿ ದಾಟಬಹು ದೆಂದು ಭಾವಿಸಲಾಗಿತ್ತು.
ನಾಟಕೀಯ ಕುಸಿತ
ತಿರುಮನ್ನೆ ಔಟಾಗುತ್ತಲೇ ಲಂಕಾದ ಕುಸಿತ ಮೊದಲ್ಗೊಂಡಿತು. 144ರ ಮೊತ್ತಕ್ಕೆ ಎರಡನೇ ವಿಕೆಟ್ ಉರುಳಿತ್ತು. ಮೊತ್ತ 180 ತಲುಪಿದಾಗ ಶ್ರೀಲಂಕಾ 8 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ವಿಕೆಟ್‌ನ ಒಂದು ಕಡೆ ಆಸರೆಯಾಗಿ ನಿಂತಿದ್ದ ಪೆರೆರ 78 ರನ್ ಗಳಿಸಿ ಎಂಟನೆಯವರಾಗಿ ಔಟಾಗಿದ್ದರು. 81 ಎಸೆತ ಎದುರಿಸಿದ್ದ ಅವರು 8 ಬೌಂಡರಿ ಬಾರಿಸಿದ್ದರು.