Advertisement

ಬೃಹತ್‌ ಮೊತ್ತದಲ್ಲಿ ಶ್ರೀಲಂಕಾ ಜಯಭೇರಿ

10:05 AM Jul 04, 2019 | Sriram |

ಚೆಸ್ಟರ್‌ ಲೀ ಸ್ಟ್ರೀಟ್‌: ಕೂಟದಿಂದ ಹೊರಬಿದ್ದವರ ದೊಡ್ಡ ಮೊತ್ತದ ಮುಖಾಮುಖೀಯಲ್ಲಿ ಶ್ರೀಲಂಕಾ ತಂಡವು ವೆಸ್ಟ್‌ಇಂಡೀಸ್‌ ತಂಡವನ್ನು 23 ರನ್ನುಗಳಿಂದ ಸೋಲಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ ತಂಡವು 6 ವಿಕೆಟಿಗೆ 338 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಈ ಪಂದ್ಯಾವಳಿಯಲ್ಲಿ ಲಂಕಾ 250ರ ಗಡಿ ದಾಟಿದ್ದು ಇದೇ ಮೊದಲು. ಜವಾಬಿತ್ತ ವೆಸ್ಟ್‌ ಇಂಡೀಸ್‌ ನಿಕೋಲಸ್‌ ಪೂರನ್‌ ಅವರ ಶತಕದ ಹೊರತಾಗಿಯೂ 9 ವಿಕೆಟಿಗೆ 315 ರನ್‌ ಪೇರಿಸಿ ಶರಣಾಯಿತು.

ವಿಂಡೀಸ್‌ ಚೇಸಿಂಗ್‌ ವೇಳೆ ನಿಕೋಲಸ್‌ ಪೂರನ್‌ ಶತಕ ಸಿಡಿಸಿ ಸಂಭ್ರಮಿಸಿದರು. 103 ಎಸೆತಗಳಿಂದ 118 ರನ್‌ ಗಳಿಸಿದರು. ಆದರೆ ಅವರಿಗೆ ಇತರ ಆಟಗಾರರು ಸಮರ್ಥ ರೀತಿಯಲ್ಲಿ ಬೆಂಬಲ ನೀಡಲು ವಿಫ‌ಲರಾದರು.

ತಂಡದ ಅಗ್ರ ಕ್ರಮಾಂಕದ ಅಷ್ಟೂ ಮಂದಿ ಆಟಗಾರರು ವಿಂಡೀಸ್‌ ದಾಳಿಗೆ ದಿಟ್ಟ ಉತ್ತರ ನೀಡಿದ್ದು ಲಂಕಾ ಸರದಿಯ ವಿಶೇಷವಾಗಿತ್ತು. ಇವರಲ್ಲಿ ವನ್‌ಡೌನ್‌ ಬ್ಯಾಟ್ಸ್‌ಮನ್‌ ಆವಿಷ್ಕ ಫೆರ್ನಾಂಡೊ ಆಕರ್ಷಕ ಶತಕ ಬಾರಿಸಿ ಮೆರೆದರು. 103 ಎಸೆತ ನಿಭಾಯಿಸಿದ ಫೆರ್ನಾಂಡೊ 9 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 104 ರನ್‌ ಬಾರಿಸಿದರು. ಇದು ಪ್ರಸಕ್ತ ಕೂಟದಲ್ಲಿ ಶ್ರೀಲಂಕಾ ಆಟಗಾರನಿಂದ ದಾಖಲಾದ ಮೊದಲ ಶತಕವಷ್ಟೇ ಅಲ್ಲ, ಫೆರ್ನಾಂಡೊ ಅವರ ಚೊಚ್ಚಲ ಶತಕವೂ ಹೌದು.

ಆವಿಷ್ಕ ಫೆರ್ನಾಂಡೊ ಮೂರು ಉಪಯುಕ್ತ ಜತೆಯಾಟಗಳಲ್ಲಿ ಕಾಣಿಸಿಕೊಂಡರು. ಕುಸಲ್‌ ಮೆಂಡಿಸ್‌ ಜತೆ 3ನೇ ವಿಕೆಟಿಗೆ 85 ರನ್‌, ಏಂಜೆಲೊ ಮ್ಯಾಥ್ಯೂಸ್‌ ಜತೆ 4ನೇ ವಿಕೆಟಿಗೆ 58 ರನ್‌ ಮತ್ತು ಲಹಿರು ತಿರಿಮನ್ನೆ ಜತೆ 5ನೇ ವಿಕೆಟಿಗೆ 67 ರನ್‌ ಒಟ್ಟುಗೂಡಿಸಿ ಲಂಕಾ ಸರದಿಯನ್ನು ಬೆಳೆಸಿದರು.

Advertisement

ಸ್ಕೋರ್‌ ಪಟ್ಟಿ
ಶ್ರೀಲಂಕಾ
ದಿಮುತ್‌ ಕರುಣರತ್ನೆ ಸಿ ಹೋಪ್‌ ಬಿ ಹೋಲ್ಡರ್‌ 32
ಕುಸಲ್‌ ಪೆರೆರ ರನೌಟ್‌ 64
ಆವಿಷ್ಕ ಫೆರ್ನಾಂಡೊ ಸಿ ಅಲೆನ್‌ ಬಿ ಕಾಟ್ರೆಲ್‌ 104
ಕುಸಲ್‌ ಮೆಂಡಿಸ್‌ ಸಿ ಮತ್ತು ಬಿ ಅಲೆನ್‌ 39
ಮ್ಯಾಥ್ಯೂಸ್‌ ಬಿ ಹೋಲ್ಡರ್‌ 26
ಲಹಿರು ತಿರಿಮನ್ನೆ ಔಟಾಗದೆ 45
ಇಸುರು ಉದಾನ ಸಿ ಹೋಲ್ಡರ್‌ ಬಿ ಥಾಮಸ್‌ 3
ಧನಂಜಯ ಡಿ ಸಿಲ್ವ ಔಟಾಗದೆ 6
ಇತರ 19
ಒಟ್ಟು (50 ಓವರ್‌ಗಳಲ್ಲಿ 6 ವಿಕೆಟಿಗೆ) 338
ವಿಕೆಟ್‌ ಪತನ: 1-93, 2-104, 3-189, 4-247, 5-314, 6-327.
ಬೌಲಿಂಗ್‌: ಶೆಲ್ಡನ್‌ ಕಾಟ್ರೆಲ್‌ 10-0-69-1; ಒಶೇನ್‌ ಥಾಮಸ್‌ 10-1-58-1; ಶಾನನ್‌ ಗ್ಯಾಬ್ರಿಯಲ್‌ 5-0-46-0; ಜಾಸನ್‌ ಹೋಲ್ಡರ್‌ 10-0-59-2; ಬ್ರಾತ್‌ವೇಟ್‌ 7-0-53-0; ಫ್ಯಾಬಿಯನ್‌ ಅಲೆನ್‌ 8-0-44-1

ವೆಸ್ಟ್‌ ಇಂಡೀಸ್‌
ಕ್ರಿಸ್‌ ಗೇಲ್‌ ಸಿ ವಾಂಡರ್ಸೆ ಬಿ ರಜಿತ 35
ಸುನೀಲ್‌ ಆ್ಯಂಬ್ರಿಸ್‌ ಸಿ ಪೆರೆರ ಬಿ ಮಾಲಿಂಗ 5
ಶೈ ಹೋಪ್‌ ಬಿ ಮಾಲಿಂಗ 5
ಶಿಮ್ರನ್‌ ಹೆಟ್‌ಮೈರ್‌ ರನೌಟ್‌ 29
ನಿಕೋಲಸ್‌ ಪೂರನ್‌ ಸಿ ಪೆರೆರ ಬಿ ಮ್ಯಾಥ್ಯೂಸ್‌ 118
ಜಾಸನ್‌ ಹೋಲ್ಡರ್‌ ಸಿ ಜೆ.ಮೆಂಡಿಸ್‌ ಬಿ ವಾಂಡರ್ಸೆ 26 ಬ್ರಾತ್‌ವೇಟ್‌ ರನೌಟ್‌ 8
ಫ್ಯಾಬಿಯನ್‌ ಅಲೆನ್‌ ರನೌಟ್‌ 51
ಶೆಲ್ಡನ್‌ ಕಾಟ್ರೆಲ್‌ ಔಟಾಗದೆ 7
ಒಶಾನೆ ಥಾಮಸ್‌ ಎಲ್‌ಬಿಡಬ್ಲ್ಯು ಬಿ ಮಾಲಿಂಗ 1
ಶಾನನ್‌ ಗ್ಯಾಬ್ರಿಯೆಲ್‌ ಔಟಾಗದೆ 3
ಇತರ 27
ಒಟ್ಟು (50 ಓವರ್‌ಗಳಲ್ಲಿ 9 ವಿಕೆಟಿಗೆ) 315
ವಿಕೆಟ್‌ ಪತನ: 1-12, 2-22, 3-71, 4-84, 5-145, 6-199, 7-282, 8-308, 9-311
ಬೌಲಿಂಗ್‌: ಲಸಿತ ಮಾಲಿಂಗ 10-0-55-3
ಧನಂಜಯ ಡಿ ಸಿಲ್ವ 10-0-49-0
ಇಸುರು ಉದಾನ 10-0-67-0
ಕಸುನ್‌ ರಜಿತ 10-0-76-1
ಜೆಫ್ರಿ ವಾಂಡರ್ಸೆ 7-0-50-1
ದಿಮುತ್‌ ಕರುಣರತ್ನೆ 1-0-7-0
ಏಂಜೆಲೂ ಮ್ಯಾಥ್ಯೂಸ್‌ 2-0-6-1

Advertisement

Udayavani is now on Telegram. Click here to join our channel and stay updated with the latest news.

Next