Advertisement

ಫಾಲೋಆನ್‌ನಿಂದ ಪಾರಾದ ವಿಂಡೀಸ್‌

11:10 PM Nov 23, 2021 | Team Udayavani |

ಗಾಲೆ: ಗಾಲೆ ಟೆಸ್ಟ್‌ ಪಂದ್ಯದ 3ನೇ ದಿನ ಮಳೆಯೇ ಆಟವಾಡಿದೆ. ಇದರಿಂದ ವೆಸ್ಟ್‌ ಇಂಡೀಸ್‌ಗೆ ತಾತ್ಕಾಲಿಕ ರಕ್ಷಣೆ ಸಿಕ್ಕಿದೆ. ಜತೆಗೆ ಫಾಲೋಆನ್‌ನಿಂದಲೂ ಅದು ಪಾರಾಗಿದೆ.

Advertisement

6 ವಿಕೆಟಿಗೆ 113 ರನ್‌ ಮಾಡಿ ತೀವ್ರ ಸಂಕಟದಲ್ಲಿದ್ದ ವೆಸ್ಟ್‌ ಇಂಡೀಸ್‌ ಮಂಗಳವಾರದ ಕೆಲವೇ ಅವಧಿಯ ಆಟದಲ್ಲಿ 9ಕ್ಕೆ 224 ರನ್‌ ಗಳಿಸಿದೆ. ಶ್ರೀಲಂಕಾ ಮೊತ್ತಕ್ಕಿಂತ ಇನ್ನೂ 162 ರನ್ನುಗಳ ಹಿನ್ನಡೆಯಲ್ಲಿದೆ. ಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 386 ರನ್‌ ಮಾಡಿದೆ.

ಕೈಲ್‌ ಮೇಯರ್ (45) ಮತ್ತು ಜಾಸನ್‌ ಹೋಲ್ಡರ್‌ (36) 7ನೇ ವಿಕೆಟಿಗೆ 63 ರನ್‌ ಒಟ್ಟುಗೂಡಿಸಿ ತಂಡವನ್ನು ಫಾಲೋಆನ್‌ ಸಂಕಟದಿಂದ ಬಚಾವ್‌ ಮಾಡಿದರು. ಬಳಿಕ ರಖೀಂ ಕಾರ್ನ್ವಾಲ್‌ 39 ರನ್‌ ಮಾಡಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.

ಇದನ್ನೂ ಓದಿ:ಡಬ್ಲ್ಯುಬಿಬಿಎಲ್‌ ಟೂರ್ನಿಯ ತಂಡ: ಹರ್ಮನ್‌ಪ್ರೀತ್‌ಗೆ ಸ್ಥಾನ

ಶ್ರೀಲಂಕಾ ಪರ ಪ್ರವೀಣ್‌ ಜಯವಿಕ್ರಮ ಮತ್ತು ರಮೇಶ್‌ ಮೆಂಡಿಸ್‌ ತಲಾ 3 ವಿಕೆಟ್‌ ಉರುಳಿಸಿದರು.

Advertisement

ಸಂಕ್ಷಿಪ್ತ ಸ್ಕೋರ್‌
ಶ್ರೀಲಂಕಾ-386 (ಕರುಣಾರತ್ನೆ 147, ಧನಂಜಯ 61, ನಿಸ್ಸಂಕ 56, ಚಂಡಿಮಾಲ್‌ 45, ಚೇಸ್‌ 83ಕ್ಕೆ 5, ವ್ಯಾರಿಕ್ಯಾನ್‌ 87ಕ್ಕೆ 3). ವೆಸ್ಟ್‌ ಇಂಡೀಸ್‌-9 ವಿಕೆಟಿಗೆ 224 (ಮೇಯರ್ 45, ಬ್ರಾತ್‌ವೇಟ್‌ 41, ಕಾರ್ನವಾಲ್‌ 39, ಜಯವಿಕ್ರಮ 38ಕ್ಕೆ 3, ಮೆಂಡಿಸ್‌ 75ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next