Advertisement

ಲಂಕಾ –ಇಂಗ್ಲೆಂಡ್‌ ಟೆಸ್ಟ್‌ ಸರಣಿ

11:59 PM Oct 25, 2019 | Team Udayavani |

ಕೊಲಂಬೊ: ಮುಂದಿನ ಮಾರ್ಚ್‌ ತಿಂಗಳಲ್ಲಿ ಶ್ರೀಲಂಕಾ ಪ್ರವಾಸಗೈಯಲಿರುವ ಇಂಗ್ಲೆಂಡ್‌ ಕ್ರಿಕೆಟ್‌ ತಂಡ 2 ಟೆಸ್ಟ್‌ ಪಂದ್ಯಗಳ ಕಿರು ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಪಂದ್ಯಗಳ ತಾಣ ಗಾಲೆ ಮತ್ತು ಕೊಲಂಬೊ.

Advertisement

ಇಂಗ್ಲೆಂಡ್‌ ತಂಡ ಇದೇ ಮೊದಲ ಬಾರಿಗೆ ಕೊಲಂಬೊದ “ಆರ್‌. ಪ್ರೇಮದಾಸ ಸ್ಟೇಡಿಯಂ’ನಲ್ಲಿ ಟೆಸ್ಟ್‌ ಆಡುವುದು ವಿಶೇಷ. ಈ ಪಂದ್ಯ ಮಾ. 27ರಿಂದ 31ರ ತನಕ ನಡೆಯಲಿದೆ. ಗಾಲೆ ಟೆಸ್ಟ್‌ ಪಂದ್ಯ ಮಾ. 19ರಿಂದ 23ರ ತನಕ ಸಾಗಲಿದೆ.

ಟೆಸ್ಟ್‌ ಪಂದ್ಯಗಳಿಗೂ ಮುನ್ನ ಇಂಗ್ಲೆಂಡ್‌ 2 ತ್ರಿದಿನ ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಲಂಕಾ ಕ್ರಿಕೆಟ್‌ ಮಂಡಳಿ ಅಧ್ಯಕ್ಷರ ಇಲೆವೆನ್‌ ವಿರುದ್ಧದ ಈ ಪಂದ್ಯಗಳ ಆತಿಥ್ಯ ಕಾಟುನಾಯಕೆ ಮತ್ತು ಕೊಲಂಬೊ (ಪಿ. ಸಾರಾ ಓವಲ್‌) ಪಾಲಾಗಿದೆ.
ಕಳೆದ ಸಲ ಶ್ರೀಲಂಕಾ ಪ್ರವಾಸಗೈದ ವೇಳೆ ಇಂಗ್ಲೆಂಡ್‌ 3 ಪಂದ್ಯಗಳ ಸರಣಿಯನ್ನು ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next