ಕೊಲಂಬೊ: ಆಸ್ಟ್ರೇಲಿಯ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಗಾಗಿ ಶ್ರೀಲಂಕಾ 21 ಸದಸ್ಯರ ತಂಡವನ್ನು ಪ್ರಕಟಿಸಿದೆ.
ನಿವೃತ್ತಿಯಿಂದ ಹಿಂದೆ ಸರಿದ ಭನುಕ ರಾಜಪಕ್ಸ ತಂಡಕ್ಕೆ ಮರಳಿದ್ದಾರೆ. ದುನಿತ್ ವೆಲ್ಲಗಲೆ ಮೊದಲ ಸಲ ರಾಷ್ಟ್ರೀಯ ತಂಡಕ್ಕೆ ಕರೆ ಪಡೆದಿದ್ದಾರೆ.
ಆರಂಭದಲ್ಲಿ 26 ಸದಸ್ಯರ ಪ್ರಾಥಮಿಕ ತಂಡವನ್ನು ಪ್ರಕಟಿಸಲಾಗಿತ್ತು. ಬಳಿಕ ಇದನ್ನು 21ಕ್ಕೆ ಇಳಿಸಲಾಯಿತು. ಸರಣಿಯ ಮೊದಲ ಪಂದ್ಯ ಜೂ. 14ರಂದು ನಡೆಯಲಿದೆ. ದಸುನ್ ಶಣಕ ನಾಯಕರಾಗಿದ್ದಾರೆ.
ಭನುಕ ರಾಜಪಕ್ಸ ಕಳೆದ ಸೆಪ್ಟಂಬರ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊಲಂಬೋದಲ್ಲಿ ಕೊನೆಯ ಸಲ ಏಕದಿನ ಪಂದ್ಯವಾಡಿದ್ದರು. 19 ವರ್ಷದ ವೆಲ್ಲಲಗೆ ಈವರೆಗೆ 34 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ.
ಶ್ರೀಲಂಕಾ-ಆಸ್ಟ್ರೇಲಿಯ ನಡುವಿನ ಟಿ20 ಸರಣಿ ಶನಿವಾರ ಪಲ್ಲೆಕೆಲೆಯಲ್ಲಿ ಮುಗಿದಿದ್ದು, ಬಳಿಕ ಇಲ್ಲಿಯೇ ಮೊದಲೆರಡು ಏಕದಿನ ಪಂದ್ಯಗಳು ನಡೆಯುತ್ತವೆ.