Advertisement

ಶ್ರೀಲಂಕಾ: ಸೋಂಕಿನಿಂದ ಮೃತಪಟ್ಟವರ ದಹನ ಕಡ್ಡಾಯ

03:25 PM Apr 16, 2020 | mahesh |

ಕೊಲಂಬೊ: ಶ್ರೀಲಂಕದಲ್ಲಿ ಕೋವಿಡ್‌- 19 ವೈರಸ್‌ನಿಂದ ಸಾವಿಗೀಡಾದವರನ್ನು ಕಡ್ಡಾಯವಾಗಿ ದಹನ ಮಾಡಬೇಕೆಂಬ ನಿಯಮವನ್ನು ಜಾರಿಗೆ ತಂದಿದೆ. ಆರೋಗ್ಯ ಮತ್ತು ಸ್ಥಳೀಯ ವೈದ್ಯಕೀಯ ಸೇವೆಗಳ ಸಚಿವರು ಈ ಸಂಬಂಧ ಹೊಸ ನಿಯಮಗಳ ಕುರಿತ ಮಾಹಿತಿಯನ್ನು ಬಿಡುಗಡೆ ಮಾಡಿದೆ.
ಬಹಳ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದ್ದು, ಇದನ್ನು ಯಾರೂ ಮೀರುವಂತಿಲ್ಲ ಎಂದು ಸರಕಾರವು ಆದೇಶಿಸಿದೆ.

Advertisement

ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಕನಿಷ್ಟ 45 ನಿಮಿಷದಿಂದ ಒಂದು ಗಂಟೆಯವರೆಗೆ 800 ರಿಂದ 1,200 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ದಹಿಸಬೇಕು ಎಂದು ಸೂಚಿಸಲಾಗಿದೆ. ಶ್ಮಶಾನದಲ್ಲಿ ಅಥವಾ ಸರಿಯಾದ ಪ್ರಾಧಿಕಾರದಿಂದ ಅನುಮೋದಿತ ಸ್ಥಳದಲ್ಲಿ ಸರಕಾರಿ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಅಂತ್ಯಕ್ರಿಯೆ ನಡೆಯಬೇಕು. ಸೋಂಕಿತ ಮೃತ ವ್ಯಕ್ತಿಯ ಶರೀರವನ್ನು ಸಂಬಂಧಪಟ್ಟ ಕುಟುಂಬಕ್ಕೆ ಹಸ್ತಾಂತರಿಸಲಾಗುವುದಿಲ್ಲ. ಪ್ರಾಧಿಕಾರದಿಂದ ಶವ ಸಂಸ್ಕಾರದ ಅಗತ್ಯ ಕಾರ್ಯ ನೆರವೇರಿಸುವ ನಾಮನಿರ್ದೇಶಿತ ವ್ಯಕ್ತಿ ಹೊರತು ಪಡಿಸಿ ಬೇರೆಯವರು ಇರುವಂತಿಲ್ಲ ಎಂದು ಸೂಚಿಸಲಾಗಿದೆ. ಇದಲ್ಲದೆ ಅಂತ್ಯಕ್ರಿಯೆ ನೆರವೇರಿಸುವ ವ್ಯಕ್ತಿಗಳು ಬಳಸುವ ಉಡುಪು ಮತ್ತು ಮರುಬಳಕೆ ಮಾಡಲಾದ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಶವಪೆಟ್ಟಿಗೆಯೊಂದಿಗೇ ಇರಿಸಿ ಸುಡಲಾಗುತ್ತದೆ. ಮೃತಪಟ್ಟ ವ್ಯಕ್ತಿಯ ರಕ್ತಸಂಬಂಧಿಗಳ ಕೋರಿಕೆಯ ಮೇರೆಗೆ ಚಿತಾಭಸ್ಮವನ್ನು ಹಸ್ತಾಂತರಿಸಬಹುದು ಎಂದು ಸಚಿವಾಲಯ ಹೇಳಿದೆ.

ದೇಶದಲ್ಲಿ ಈವರೆಗೆ ಕೋವಿಡ್‌-19 ನಿಂದ ಏಳು ಜನ ಮೃತಪಟ್ಟಿದ್ದು, 200 ಕ್ಕೂ ಹೆಚ್ಚು ಮಂದಿ ಸೋಂಕಿತ ಪ್ರಕರಣಗಳಿವೆ. ಲಾಕ್‌ಡೌನ್‌ ನಿಯಮವನ್ನೂ ಇಲ್ಲಿ ಜಾರಿಗೊಳಿಸಲಾಗಿದೆ. ವಿಮಾನ ಸಂಚಾರ ಸೇವೆಯೂ ಎ. 30 ರವರೆಗೆ ರದ್ದುಗೊಂಡಿದೆ. ಗುಣಸಿಂಘಪುರದಲ್ಲಿ ಕೋವಿಡ್‌-19 ಸೋಂಕು ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರೆನ್ನಲಾದ 100 ಮಂದಿಯನ್ನು ಗೃಹಬಂಧನಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next