Advertisement

ಲಂಕಾದಲ್ಲಿ ಗೋಹತ್ಯೆ ನಿಷೇಧ

07:37 AM Sep 30, 2020 | Hari Prasad |

ಕೊಲೊಂಬೋ: ಶ್ರೀಲಂಕಾದಲ್ಲಿ ಇನ್ನು ಜಾನುವಾರುಗಳ ಹತ್ಯೆ ಮಾಡುವುದು ಅಪರಾಧ. ಗೋಹತ್ಯೆ ನಿಷೇಧಿಸುವ ಪ್ರಸ್ತಾವಕ್ಕೆ ಮಂಗಳವಾರ ಶ್ರೀಲಂಕಾ ಸರಕಾರ ಒಪ್ಪಿಗೆ ನೀಡಿದೆ.

Advertisement

ಆದರೆ ಗೋಮಾಂಸ ಸೇವನೆ ಮಾಡುವವರ ಅನುಕೂಲಕ್ಕಾಗಿ ಗೋಮಾಂಸವನ್ನು ಆಮದು ಮಾಡಿಕೊಂಡು ರಿಯಾಯಿತಿ ದರದಲ್ಲಿ ಮಾರಾಟ ಮಾಡಲೂ ಸಂಪುಟ ನಿರ್ಧರಿಸಿದೆ.

ಈ ಮಾಹಿತಿಯನ್ನು ಲಂಕಾ ಸಂಪುಟದ ವಕ್ತಾರ ಕೆಹೆಲಿಯಾ ರಾಮ್‌ಬುಕ್‌ವೆಲ್ಲಾ ತಿಳಿಸಿದ್ದಾರೆ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ತತ್‌ಕ್ಷಣವೇ ಪ್ರಾಣಿಗಳ ಕಾಯ್ದೆ, ಜಾನುವಾರು ಹತ್ಯೆ ಅಧ್ಯಾದೇಶ ಮತ್ತು ಅದಕ್ಕೆ ಸಂಬಂಧಿಸಿದ ಇತರ ಕಾನೂನುಗಳಿಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಲಿದೆ ಎಂದೂ ಅವರು ಹೇಳಿದ್ದಾರೆ.

Advertisement

ಆದರೆ, ಲಂಕಾ ಸರಕಾರದ ಈ ನಿರ್ದಾರ ದೇಶದಲ್ಲಿರುವ ಬೌದ್ಧ ಸಮುದಾಯವನ್ನು ತುಷ್ಟೀಕರಿಸುವ ಪ್ರಯತ್ನವಾಗಿದ್ದು ಇದರಿಂದ ಇಲ್ಲಿನ ಹೈನೋದ್ಯಮದಾರರಿಗೆ ಹೊಡೆತ ಬೀಳಲಿದೆ ಎಂಬ ಆಕ್ಷೇಪವೂ ಇದೀಗ ದ್ವೀಪ ರಾಷ್ಟ್ರದಲ್ಲಿ ಜೋರಾಗಿಯೇ ಕೇಳಿಬರಲಾರಂಭಿಸಿದೆ.

ಇಲ್ಲಿನ ಸರಕಾರದ ವರದಿಗಳ ಪ್ರಕಾರ ದೇಶದ ಒಟ್ಟು ಹಾಲಿನ ಬೇಡಿಕೆಯ 45% ಮಾತ್ರ ಸ್ಥಳಿಯವಾಗಿ ಪೂರೈಕೆಯಾಗುತ್ತಲಿದ್ದು 270 ಮಿಲಿಯನ್ ಡಾಲರ್ ಮೌಲ್ಯದ ಹಾಲಿನ ಪುಡಿಯ ಆಮದು 2018ರಲ್ಲಿ ನಡೆದಿತ್ತು.

ಹಾಗೆಯೇ ಶ್ರೀಲಂಕಾದಲ್ಲಿ 2018ರಲ್ಲಿ ಒಂದು ಸಾವಿರ ಟನ್ ಹಾಗೂ 2019ರಲ್ಲಿ 29 ಸಾವಿರ ಟನ್ ದನದ ಮಾಂಸ ಉತ್ಪಾದನೆಯಾಗಿತ್ತು ಎಂದು ವರದಿಗಳು ಹೇಳುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next