Advertisement

ಸಾಲ ತೀರಿಸಲು ಚೀನಾಕ್ಕೆ ಲಂಕೆಯ ಬಂದರು ಲೀಸ್‌

07:35 AM Dec 10, 2017 | Harsha Rao |

ಕೊಲೊಂಬೋ: ಬಂದರು ಅಭಿವೃದ್ಧಿ ಕಾರ್ಯಕ್ಕಾಗಿ ಚೀನಾದಿಂದ ಭಾರಿ ಮೊತ್ತದ ಸಾಲ ಮಾಡಿದ್ದ ಶ್ರೀಲಂಕಾ, ಸಾಲ ತೀರಿಸಲಾಗದೇ ಹಂಬಂತೋಟ ಬಂದರನ್ನು ಚೀನಾಗೆ ಅಧಿಕೃತವಾಗಿ 99 ವರ್ಷಗಳವರೆಗೆ ಹಸ್ತಾಂತರಿಸಿದೆ. ಭಾರತಕ್ಕೆ ರಾಜತಾಂತ್ರಿಕವಾಗಿ ಅತ್ಯಂತ ಮಹತ್ವದ ಈ ಬಂದರು ಚೀನಾ ಕೈವಶವಾಗಿದ್ದು, ಭದ್ರತಾ ಆತಂಕಕ್ಕೆ ಕಾರಣವಾಗಿದೆ. ಚೀನಾದ ಎರಡು ಸಂಸ್ಥೆಗಳಾದ ಹಂಬಂತೋಟ ಇಂಟರ್‌ನ್ಯಾಷನಲ್‌ ಪೋರ್ಟ್‌ ಗ್ರೂಪ್‌ ಮತ್ತು ಹಂಬಂತೋಟ ಇಂಟರ್‌ನ್ಯಾಷನಲ್‌ ಪೋರ್ಟ್‌ ಸರ್ವೀಸಸ್‌ ಈ ಬಂದರಿನ ಮಾಲೀಕತ್ವ ಹೊಂದಿರಲಿವೆ. ಶ್ರೀಲಂಕಾ ಬಂದರು ಪ್ರಾಧಿಕಾರವು ಈ ಬಂದರಿನ ಸುತ್ತಲಿನ ಹೂಡಿಕೆ ವಲಯದ ಮಾಲೀಕತ್ವ ಹೊಂದಿರಲಿದೆ. 

Advertisement

ಶ್ರೀಲಂಕಾ ಈಗಾಗಲೇ 50 ಸಾವಿರ ಕೋಟಿ ರೂ. ಸಾಲದ ಸುಳಿಯಲ್ಲಿ ಸಿಲುಕಿದೆ. ಇದಕ್ಕೆ ಬಡ್ಡಿ ಕೂಡ ವಿಪರೀತವಾಗಿದ್ದು, ಸಾಲ ತೀರಿಸಲು ಚೀನಾ ಇತ್ತೀಚಿನ ದಿನಗಳಲ್ಲಿ ಒತ್ತಡ ಹೇರಿತ್ತು ಎನ್ನಲಾಗಿದೆ. ಇದರ ಬದಲಿಗೆ ಚೀನಾಗೆ ಬಂದರು ಮಾರಾಟ ಮಾಡುವ ಪ್ರಸ್ತಾವಕ್ಕೆ ಶ್ರೀಲಂಕಾ ಸಮ್ಮತಿಸಿದೆ. ಲಂಕಾ ಸರಕಾರದ ಕ್ರಮವನ್ನು ಪ್ರತಿಪಕ್ಷಗಳು ಟೀಕಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next