Advertisement
ರಾಜಪಕ್ಸ ದೇಶಬಿಟ್ಟು ಪರಾರಿಯಾಗಿದ್ದಾರೆ ಎಂದು ಗೊತ್ತಾಗುತ್ತಲೇ ಜನರು ಶ್ರೀಲಂಕೆ ಯಾದ್ಯಂತ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ಅವರನ್ನು ಚದುರಿಸುವ ನಿಟ್ಟಿನಲ್ಲಿ ಪೊಲೀಸರು ಮತ್ತು ದ್ವೀಪ ರಾಷ್ಟ್ರದ ಯೋಧರು ಕಾರ್ಯಪ್ರವೃತ್ತ ರಾಗಿದ್ದಾರೆ, ಅಶ್ರು ವಾಯು ಸೆಲ್‌ಗಳನ್ನೂ ಸಿಡಿಸಿದ್ದಾರೆ. ಇದರ ಹೊರತಾಗಿಯೂ ಅವರು “ನೀವು ನಮ್ಮಿಂದ ಕಿತ್ತುಕೊಂಡಿರುವ ದುಡ್ಡು ವಾಪಸ್ ಮಾಡಿ’ ಎಂದು ಘೋಷಣೆ ಕೂಗಿದ್ದಾರೆ.
Related Articles
Advertisement
ಮಾಲ್ಡೀವ್ಸ್‌ನಲ್ಲಿ ಆಕ್ಷೇಪ: ಶ್ರೀಲಂಕೆಯ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರಿಗೆ ಸರ್ಕಾರಿ ಮಟ್ಟದ ಸ್ವಾಗತ ನೀಡಿ, ಆಶ್ರಯ ನೀಡಿದ್ದಕ್ಕೆ ಮಾಲ್ಡೀವ್ಸ್‌ನ ನ್ಯಾಷನಲ್ ಪಾರ್ಟಿ ಆಕ್ಷೇಪ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಕ್ಷದ ನಾಯಕ ದುನ್ಯಾ ಮೌಮೂನ್ ದ್ವೀಪ ರಾಷ್ಟ್ರದ ಜನರ ಭಾವನೆಗಳಿಗೆ ಚ್ಯುತಿ ತಂದಂತೆ ಆಗಿದೆ ಎಂದಿದ್ದಾರೆ. ಆ ದೇಶದ ಸಂಸತ್‌ನ ಸ್ಪೀಕರ್ ಮೊಹಮ್ಮದ್ ನಶೀದ್ ಗೊಟಬಯ ಪರಾರಿಯಾಗಲು ನೆರವು ನೀಡಿದ್ದಾರೆ ಎಂಬ ವರದಿಗಳೂ ಇವೆ. ಜತೆಗೆ ಒಟ್ಟಾರೆ ಬೆಳವಣಿಗೆ ಬಗ್ಗೆ ಅಲ್ಲಿನ ಸರ್ಕಾರ ಮೌನ ವಹಿಸಿದೆ.
ಬಾರದ ಚೀನ ನೆರವುಕಷ್ಟ ಕಾಲದಲ್ಲಿ ಸಾಲ ಕೊಡುತ್ತೇನೆ ಎಂದು ಹೇಳಿದ್ದ ಚೀನ ಹಿಂದೇಟು ಹಾಕಿದ ಘಟನೆ ಬೆಳಕಿಗೆ ಬಂದಿದೆ. 73 ಮಿಲಿಯನ್ ಅಮೆರಿಕನ್ ಡಾಲರ್ ನೆರವಿನ ಪೈಕಿ ಕೊಲೊಂಬೋ ತಲುಪಿದ್ದು ಒಂದು ದೊಡ್ಡ ಹಡಗಿನಲ್ಲಿ ಬಂದ ಅಕ್ಕಿ ಮಾತ್ರ. ಉಳಿದಂತೆ ಎಲ್ಲವೂ ಭರವಸೆಯ ಮಾತುಗಳೇ ಎಂದು ಈಗ ವ್ಯಕ್ತವಾಗಿದೆ. ಇದು ಕೂಡ ಬಿಕ್ಕಟ್ಟಿಗೆ ಕಾರಣ ಎಂದು ಹೇಳಲಾಗುತ್ತಿದೆ. ಮತ್ತೊಂದು ಬೆಳವಣಿಗೆಯಲ್ಲಿ ಸದ್ಯ ಉಂಟಾಗಿರುವ ಬಿಕ್ಕಟ್ಟು ಚೀನದ ಹೂಡಿಕೆ ಮತ್ತು ದ್ವಿಪಕ್ಷೀಯ ಬಾಂಧವ್ಯಗಳಿಗೆ ಪ್ರತಿಕೂಲವಾಗಿ ಪರಿಣಮಿಸಲಿದೆ ಎಂದೂ ರಾಜಕೀಯ ಕ್ಷೇತ್ರದ ಪರಿಣತರು ಅಭಿಪ್ರಾಯಪಡಲಾರಂಭಿಸಿದ್ದಾರೆ. ಆದರೆ ಚೀನ ಸರಕಾರ ಬೆಳವಣಿಗೆಗಳ ಬಗ್ಗೆ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ.