Advertisement

ಲಂಕಾ ತಂಡಕ್ಕೆ ಮತ್ತೆ ಮಾಲಿಂಗ ನಾಯಕ

10:25 PM Oct 17, 2019 | Sriram |

ನವದೆಹಲಿ: ಮುಂಬರುವ ಆಸ್ಟ್ರೇಲಿಯ ಪ್ರವಾಸಕ್ಕಾಗಿ ಟಿ20 ತಂಡವನ್ನು ಪ್ರಕಟಿಸಿರುವ ಶ್ರೀಲಂಕಾ, ಲಸಿತ ಮಾಲಿಂಗ ಅವರಿಗೆ ಮರಳಿ ನಾಯಕತ್ವ ವಹಿಸಿದೆ. ಮಾಲಿಂಗ ಗೈರಲ್ಲಿ ಕಳೆದ ಪಾಕ್‌ ಪ್ರವಾಸದ ವೇಳೆ ಇಸುರು ಉದಾನ ಲಂಕಾ ತಂಡದ ನಾಯಕರಾಗಿದ್ದರು. ಆ ಸರಣಿಯನ್ನು ಲಂಕಾ ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡಿತ್ತು.

Advertisement

ಪಾಕ್‌ ಪ್ರವಾಸದಿಂದ ಹಿಂದೆ ಸರಿದ 10 ಮಂದಿ ಆಟಗಾರರಲ್ಲಿ ನಾಲ್ವರನ್ನಷ್ಟೇ ಲಂಕಾ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಉಳಿದ ಮೂವರೆಂದರೆ ನಿರೋಷನ್‌ ಡಿಕ್ವೆಲ್ಲ, ಕುಸಲ್‌ ಪೆರೆರ ಮತ್ತು ಕುಸಲ್‌ ಮೆಂಡಿಸ್‌. ಸರಣಿಯ ಮೊದಲ ಪಂದ್ಯ ಅ. 27ರಂದು ಅಡಿಲೇಡ್‌ನ‌ಲ್ಲಿ ನಡೆಯಲಿದೆ.

ಶ್ರೀಲಂಕಾ ತಂಡ: ಲಸಿತ ಮಾಲಿಂಗ (ನಾಯಕ), ಕುಸಲ್‌ ಪೆರೆರ, ಕುಸಲ್‌ ಮೆಂಡಿಸ್‌, ದನುಷ್ಕ ಗುಣತಿಲಕ, ಆವಿಷ್ಕ ಫೆರ್ನಾಂಡೊ, ನಿರೋಶನ್‌ ಡಿಕ್ವೆಲ್ಲ, ದಸುನ್‌ ಶಣಕ, ಶೇಹಾನ್‌ ಜಯಸೂರ್ಯ, ಭನುಕ ರಾಜಪಕ್ಷ, ಒಶಾದ ಫೆರ್ನಾಂಡೊ, ವನಿಂದು ಹಸರಂಗ, ಲಕ್ಷಣ ಸಂದಕನ್‌, ನುವಾನ್‌ ಪ್ರದೀಪ್‌, ಲಹಿರು ಕುಮಾರ, ಇಸುರು ಉದಾನ, ಕಸುನ್‌ ರಜಿತ.

Advertisement

Udayavani is now on Telegram. Click here to join our channel and stay updated with the latest news.

Next