Advertisement
ಶುಕ್ರವಾರ ಮೆಲ್ಬರ್ನ್ನಲ್ಲಿ ನಡೆದ ಈ ರೋಮಾಂಚಕಾರಿ ಸೆಣಸಾಟದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 6 ವಿಕೆಟಿಗೆ 168 ರನ್ ಗಳಿಸಿ ಸವಾಲೊಡ್ಡಿತು. ಇದನ್ನು ದಿಟ್ಟ ರೀತಿಯಲ್ಲಿ ಸ್ವೀಕರಿಸಿದ ಶ್ರೀಲಂಕಾ ಸರಿಯಾಗಿ 20 ಓವರ್‌ಗಳಲ್ಲಿ 5 ವಿಕೆಟಿಗೆ 172 ರನ್ ಬಾರಿಸಿತು; ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸಿ ಜಯಭೇರಿ ಮೊಳಗಿಸಿತು.
Related Articles
ನಾಯಕ ಆರನ್ ಫಿಂಚ್ ಮತ್ತು ಮೊದಲ ಟಿ-20 ಪಂದ್ಯ ಆಡಲಿಳಿದ ಮೈಕಲ್ ಕ್ಲಿಂಜರ್ ಆಸ್ಟ್ರೇಲಿಯಕ್ಕೆ ಉತ್ತಮ ಆರಂಭ ಒದಗಿಸಿದರು. ಇವರಿಂದ 10.3 ಓವರ್‌ಗಳಲ್ಲಿ 76 ರನ್ ಒಟ್ಟುಗೂಡಿತು. ವನ್‌ಡೌನ್‌ನಲ್ಲಿ ಬಂದ ಟ್ರ್ಯಾವಿಸ್ ಹೆಡ್ ಕೂಡ ಇದೇ ಲಯದಲ್ಲಿ ಸಾಗಿದರು.
Advertisement
34 ಎಸೆತಗಳಿಂದ 43 ರನ್ ಹೊಡೆದ ಫಿಂಚ್ ಅವರದೇ ಆಸೀಸ್ ಸರದಿಯ ಸರ್ವಾಧಿಕ ಸ್ಕೋರ್ (34 ಎಸೆತ, 2 ಬೌಂಡರಿ, 2 ಸಿಕ್ಸರ್). 36ರ ಹರೆಯದಲ್ಲಿ ಟಿ-20 ಪಾದಾರ್ಪಣೆ ಮಾಡಿದ ವಿಕ್ಟೋರಿಯಾದ ಕ್ಲಿಂಜರ್ 32 ಎಸೆತ ಎದುರಿಸಿ 38 ರನ್ ಮಾಡಿದರು (4 ಬೌಂಡರಿ). ಹೆಡ್ ಗಳಿಕೆ 25 ಎಸೆತಗಳಿಂದ 31 ರನ್. ಇದರಲ್ಲಿ ಒಂದು ಸಿಕ್ಸರ್ ಮಾತ್ರ ಒಳಗೊಂಡಿತ್ತು.
ಮೊದಲ ಟಿ-20 ಆಡಿದ ಮತ್ತೂಬ್ಬ ಬ್ಯಾಟ್ಸ್‌ಮನ್ ಆ್ಯಶrನ್ ಟರ್ನರ್ 18, ಮೊಸಸ್ ಹೆನ್ರಿಕ್ಸ್ 17 ರನ್ ಮಾಡಿದರು.
ಶ್ರೀಲಂಕಾ ಬೌಲಿಂಗ್ ಸರದಿಯಲ್ಲಿ ಮಿಂಚಿದವರು ವೇಗಿ ಲಸಿತ ಮಾಲಿಂಗ (29ಕ್ಕೆ 2). ಮಾಲಿಂಗ ಸರಿಯಾಗಿ ಒಂದು ವರ್ಷದ ಬಳಿಕ ಟಿ-20 ಆಡಲಿಳಿದಿದ್ದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-6 ವಿಕೆಟಿಗೆ 168 (ಫಿಂಚ್ 43, ಕ್ಲಿಂಜರ್ 38, ಹೆಡ್ 31, ಮಾಲಿಂಗ 29ಕ್ಕೆ 2). ಶ್ರೀಲಂಕಾ-20 ಓವರ್‌ಗಳಲ್ಲಿ 5 ವಿಕೆಟಿಗೆ 172 (ಗುಣರತ್ನೆ 52, ಮುನವೀರ 44, ಡಿಕ್ವೆಲ್ಲ 30, ಟರ್ನರ್ 12ಕ್ಕೆ 2, ಝಂಪ 26ಕ್ಕೆ 2). ಪಂದ್ಯಶ್ರೇಷ್ಠ: ಅಸೇಲ ಗುಣರತ್ನೆ.
ಸರಣಿಯ 2ನೇ ಪಂದ್ಯ ರವಿವಾರ ಗೀಲಾಂಗ್‌ನಲ್ಲಿ ನಡೆಯಲಿದೆ.