ಕೊಲಂಬೋ: ಚೀನದ ಗೂಢಾಚಾರಿ ಹಡಗು ಎಂದು ಕರೆಸಿಕೊಳ್ಳುವ ಯುವಾನ್ ವಾಂಗ್-5 ಹಡಗಿಗೆ ಶ್ರೀಲಂಕಾದ ಬಂದರಿಗೆ ಪ್ರವೇಶಿಸುವುದಕ್ಕೆ ಶ್ರೀಲಂಕಾ ಅನುಮತಿ ಕೊಟ್ಟಿದೆ.
ಇದರಿಂದ ಭಾರತಕ್ಕೆ ತೊಂದರೆಯುಂಟಾಗಬಹುದು ಎಂದು ಭಾರತ ಕಳವಳ ವ್ಯಕ್ತಪಡಿಸಿದ್ದರೂ, ಅದನ್ನು ಲೆಕ್ಕಿಸದೆ ಶ್ರೀಲಂಕಾ ಇಂತಹ ನಿರ್ಧಾರ ಕೈಗೊಂಡಿದೆ.
ಯುವಾನ್ ವಾಂಗ್-5 ಹಡಗನ್ನು ಅಂತಾರಾಷ್ಟ್ರೀಯ ಶಿಪ್ಪಿಂಗ್ ಮತ್ತು ಅನಾಲಿಟಿಕ್ಸ್ ಸಂಸ್ಥೆಗಳು ಸಂಶೋಧನಾ ಹಡಗು ಎಂದು ಕರೆದಿವೆ.
ಆದರೆ ಈ ಹಡಗು ಭಾರತೀಯ ಸೇನೆಯ ನಿಯೋಜನೆ ಬಗ್ಗೆ ಗೂಢಚಾರಿಕೆ ಮಾಡುವಂಥದ್ದು ಎಂದು ಭಾರತ ಹೇಳಿತ್ತು. ಈ ಬಗ್ಗೆ ನೇರವಾಗಿ ಲಂಕೆಯ ಅಧ್ಯಕ್ಷ ರನಿಲ್ ವಿಕ್ರಮ್‌ಸಿಂಘೆ ಅವರಿಗೇ ಮಾಹಿತಿ ಕೊಡಲಾಗಿತ್ತು. ಆದರೆ ಭಾರತ ಸೂಕ್ತ ಕಾರಣ ಕೊಟ್ಟಿಲ್ಲ ಎಂದಿರುವ ಲಂಕೆ, ಹಡಗಿನ ಪ್ರವೇಶಕ್ಕೆ ಅನುಮತಿ ಕೊಟ್ಟಿದೆ.
ಶ್ರೀಲಂಕಾದಲ್ಲಿ ಚೀನ ಹಂಬಂಟೋಟ ಬಂದರನ್ನು 99 ವರ್ಷಗಳಿಗೆ ಲೀಸ್‌ಗೆ ಪಡೆದಿದೆ. ಇದೇ ಬಂದರನ್ನು ಹಡಗು ಆ.16ರಂದು ಹಡಗು ಪ್ರವೇಶಿಸಲಿದೆ ಎಂದಿದ್ದ ಚೀನ, ಅದಕ್ಕೆಂದು ಲಂಕೆಯ ಸರ್ಕಾರದ ಬಳಿ ಆ.12ರಂದು ಅನುಮತಿ ಕೋರಿತ್ತು. ಶ್ರೀಲಂಕಾ ಆ.13ರಂದು ಅನುಮತಿ ಕೊಟ್ಟಿರುವುದಾಗಿ ತಿಳಿಸಿದೆ.