Advertisement

‘ಕೃಷ್ಣ ಅಟ್‌ ಜಿಮೇಲ್‌.ಕಾಮ್‌’ಟ್ರೇಲರ್‌ನಲ್ಲಿ ಮಿಂಚಿದ ಡಾರ್ಲಿಂಗ್‌ ಕೃಷ್ಣ

12:23 PM Oct 03, 2021 | Team Udayavani |

ಸಂದೇಶ್‌ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗಿರುವ “ಕೃಷ್ಣ ಅಟ್‌ ಜಿಮೇಲ್‌.ಕಾಮ್‌’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ನೋಡುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರವನ್ನ ನಾಗಶೇಖರ್‌ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಡಾರ್ಲಿಂಗ್‌ ಕೃಷ್ಣ ಹೀರೋ ಆಗಿ ನಟಿಸಿದ್ದು, ಭಾವನಾ ನಾಯಕಿ.

Advertisement

ಇನ್ನು, ಈ ಚಿತ್ರ ವಿಜಯ ದಶಮಿ ಯಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಬೃಂದಾ ಎನ್‌. ಜಯರಾಂ ಈ ಚಿತ್ರದ ಸಹ ನಿರ್ಮಾಪಕರು. ನಿರ್ದೇಶಕ ನಾಗಶೇಖರ್‌ ಈ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದಿದ್ದು ಚಿತ್ರಕಥೆಯನ್ನು ನಾಗಶೇಖರ್‌ ಹಾಗೂ ಪ್ರೀತಂ ಗುಬ್ಬಿ ಬರೆದಿದ್ದಾರೆ.

ಇದನ್ನೂ ಓದಿ:ಇಂದು ರಚಿತಾ ರಾಮ್‌ - ಅಭಿಷೇಕ್‌ ಬರ್ತ್‌ ಡೇ

ಚಿತ್ರದಲ್ಲಿ ಡಾರ್ಲಿಂಗ್‌ ಕೃಷ್ಣ ಅವರಿಗೆ ನಾಯಕಿಯಾಗಿ ಭಾವನಾ ಮೆನನ್‌ ನಟಿಸಿದ್ದಾರೆ. ಚಂದನ್‌ ಗೌಡ ದ್ವಿತೀಯ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ಅತಿಥಿ ಪಾತ್ರದಲ್ಲಿ ನಿರ್ದೇಶಕ, ನಾಯಕ ರಿಷಭ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ದತ್ತಣ್ಣ, ಸಾಧುಕೋಕಿಲ, ಅಚ್ಯುತ್‌ ರಾವ್‌, ಸಾತ್ವಿಕ್‌ ನಟಿಸಿದ್ದಾರೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. ಕವಿರಾಜ್‌ ಗೀತರಚನೆ ಮಾಡಿದ್ದು, ಸತ್ಯ ಹೆಗಡೆ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next