Advertisement

ಶ್ರೀ ಕೃಷ್ಣ ವಿಟ್ಠಲ ಪ್ರತಿಷ್ಠಾನ: ಧಾರ್ಮಿಕ, ಸಾಂಸ್ಕೃತಿಕ ಉತ್ಸವ

04:49 PM Dec 18, 2018 | Team Udayavani |

ಮುಂಬಯಿ: ಶ್ರೀ ಕೃಷ್ಣ ವಿಟ್ಠಲ ಪ್ರತಿಷ್ಠಾನ ಮುಂಬಯಿ ಇದರ 21 ನೇ ವಾರ್ಷಿಕ ಧಾರ್ಮಿಕ , ಸಾಂಸ್ಕೃತಿಕ ಉತ್ಸವವು ಡಿ. 16 ರಂದು ಮುಂಜಾನೆ 6 ರಿಂದ ಅಪರಾಹ್ನ 3 ರವ ರೆಗೆ ಅಂಧೇರಿ ಪ. ಎಸ್‌. ವಿ. ರೋಡ್‌, ಫಾಯರ್‌ ಬ್ರಿಗೇಡ್‌ ಸಮೀಪದ ಶ್ರೀ ಅದಮಾರು ಮಠದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಅಷೊuàತ್ತರ ಶತ ನಾಲಿಕೇರ ಗಣಪತಿ ಯಾಗ ಹಾಗೂ ಶ್ರೀ ಲಕ್ಷ್ಮೀನಾರಾಯಣ ಮಹಾಪೂಜೆಯನ್ನು  ಪರಮಪೂಜ್ಯ ಶ್ರೀ ಪೇಜಾವರ ಶ್ರೀಗಳ ಆಶೀರ್ವಾದ ಗಳೊಂದಿಗೆ ಸಂಸ್ಥೆಯ ಸಂಸ್ಥಾಪಕಾಧ್ಯಕ್ಷ ವಿದ್ವಾನ್‌ ಕೈರಬೆಟ್ಟು ವಿಶ್ವನಾಥ ಭಟ್‌ ಅವರ ನೇತೃತ್ವದಲ್ಲಿ ಯೋಗ್ಯ ವಿಪ್ರವೃಂದದೊಂದಿಗೆ ನಡೆಯಿತು. ಮುಂಜಾನೆ 6 ರಿಂದ ಮಧ್ಯಾಹ್ನ 12 ರವರೆಗೆ ಮಹಾಯಾಗ ಮತ್ತು ಪೂಜೆ, ಮಧೆÌàಶ ಭಜನಾ ಮಂಡಳಿ, ವಾಗೆªàವಿ ಭಜನಾ ಮಂಡಳಿ ಹಾಗೂ ಶ್ರೀ ಕೃಷ್ಣ ವಿಟuಲ ಭಜನಾ ಮಂಡಳಿಯ ಸದಸ್ಯೆಯರಿಂದ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇದೇ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಂಧೇರಿ ವಾರ್ಡ್‌ 82 ರ ನಗರ ಸೇವಕ ಜಗದೀಶ್‌ ಕುಟ್ಟಿ ಅಮೀನ್‌, ಬಿಎಸ್‌ಕೆಬಿ ಅಸೋಸಿಯೇಶನ್‌ ಅಧ್ಯಕ್ಷ ಡಾ| ಸುರೇಶ್‌ ರಾವ್‌, ಸೋನಿ ಅಪ್ಲೈಯನ್ಸಸ್‌ ಇದರ ಪಾಂಡುರಂಗ ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಹೊಟೇಲ್‌ ಉದ್ಯಮಿ ಜಗದೀಶ್‌ ಶ್ರೀನಿವಾಸ್‌ ಶೆಟ್ಟಿ, ಅಪೆಕ್ಸ್‌ ಗ್ರೂಪ್‌ ಮುಂಬಯಿ ಯಶವಂತ್‌ ಶೆಟ್ಟಿ ಬನ್ನಂಜೆ, ದಕ್ಷಿಣ ಮುಂಬಯಿ ಬಿಜೆಪಿ ಅಧ್ಯಕ್ಷ ಸುಧೀರ್‌ ಕೆ. ಶೆಟ್ಟಿ ಅವರು ಆಗಮಿಸಿದ್ದರು.

ಬಂಟರ ಸಂಘ ನೂತನ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್‌. ಪಯ್ಯಡೆ, ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಸಮಾಜ ಸೇವಕ ವಿರಾರ್‌ ಶಂಕರ್‌ ಬಿ. ಶೆಟ್ಟಿ, ಸಂಗೀತ ಕ್ಷೇತ್ರದ ಸಾಧಕ ಡಾ| ಬಿ. ಇ. ಕಮಲ್‌ ಕುಮಾರ್‌ ಬೆಂಗಳೂರು, ಧಾರ್ಮಿಕ ಕ್ಷೇತ್ರದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಸಮಾಜ ಸೇವಕ ರಮೇಶ್‌ ಡಿ. ಸಾವಂತ್‌, ಧಾರ್ಮಿಕ ಚಿಂತಕ ರಮೇಶ್‌ ಗುರುಸ್ವಾಮಿ ಅಪ್ಪಾಜಿಬೀಡು ಇವರನ್ನು ಗಣ್ಯರ ಸಮ್ಮುಖದಲ್ಲಿ ಬಿರುದು ಪ್ರದಾನಿಸಿ ಗೌರವಿಸಲಾಯಿತು.

ರಂಗಕಲಾವಿದ ಅಶೋಕ್‌ ಪಕ್ಕಳ, ಕಲಾ ಸಂಘಟಕ ಕರ್ನೂರು ಮೋಹನ್‌ ರೈ, ಸುಶೀಲಾ ದೇವಾಡಿಗ ಇವರು ಕಾರ್ಯಕ್ರಮ ನಿರ್ವಹಿಸಿದರು. ಮಧ್ಯಾಹ್ನ 1.30 ರಿಂದ ಮಹಾ ಅನ್ನಸಂತರ್ಪಣೆ ನಡೆಯಿತು. ತುಳು-ಕನ್ನಡಿಗರು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕು| ಐಶ್ವರ್ಯಾ ಸುಭಾಶ್‌ ಇವರಿಂದ ಭರತನಾಟ್ಯ ಹಾಗೂ ಡಾ| ಬಿ. ಇ. ಕಮಲ್‌ ಕುಮಾರ್‌ ಅವರಿಂದ ಭಜನ ಸಂಗೀತ ಕಾರ್ಯಕ್ರಮ ನೆರವೇರಿತು.
ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಪೆರ್ಮುದೆ ಅಶೋಕ್‌ ಕುಮಾರ್‌ ಶೆಟ್ಟಿ, ಕೋಶಾಧಿಕಾರಿ ಅವಿನಾಶ್‌ ಶಾಸ್ತಿÅà, ಟ್ರಸ್ಟಿಗಳಾದ ವಿರಾರ್‌ ಶಂಕರ್‌ ಬಿ. ಶೆಟ್ಟಿ, ಗೋಪಾಲ್‌ ಎಸ್‌. ಪುತ್ರನ್‌, ರಮೇಶ್‌ ಡಿ. ಸಾವಂತ್‌, ಸುಮಾ ವಿ. ಭಟ್‌, ಸುರೇಂದ್ರ ಎ. ಪೂಜಾರಿ, ಜತೆ ಕಾರ್ಯದರ್ಶಿಗಳಾದ ಶಶಿಧರ ಬಿ. ಶೆಟ್ಟಿ, ಕುಕ್ಕೆಹಳ್ಳಿ ಸದಾನಂದ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಂದಾ ಎಸ್‌. ಉಪಾಧ್ಯಾಯ, ಕಾರ್ಯದರ್ಶಿ ಸುಶೀಲಾ ದೇವಾಡಿಗ, ಯುವ ವಿಭಾಗದ ಸಂಚಾಲಕ ನವೀನ್‌ ಪಡುಇನ್ನ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾ ಗದ ಸದಸ್ಯೆಯರ ಉಪಸ್ಥಿತಿಯಲ್ಲಿ ಸಮಾರಂಭವು ಜರಗಿತು. 

Advertisement

ಚಿತ್ರ-ವರದಿ : ಸುಭಾಷ್‌  ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next