ಇಲ್ಲಿ 14 ಚಿಕ್ಕ ಅಂಗಡಿಗಳು ಜೋಪಡಿ ಗಳಂತೆ ಇದ್ದವು. ಎಲ್ಲ ಅಂಗಡಿಗಳೂ ಒಂದೇ ರೀತಿ ಇದ್ದರೆ ಉತ್ತಮವಾಗಿ ತೋರುತ್ತದೆ. ಬಂದ ಪ್ರವಾಸಿಗರಿಗೂ ಉತ್ತಮ ಗುಣಮಟ್ಟದ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಶ್ರೀಕೃಷ್ಣಮಠ ಪರಿಸರ ಪ್ರತಿಷ್ಠಾನ ಹೊಸ ಏಕರೂಪಿ ಅಂಗಡಿಗಳನ್ನು ನಿರ್ಮಿಸಿ ಕೊಡಲು ನಿರ್ಧರಿಸಿದೆ.
Advertisement
ಇಲ್ಲಿ ವಿವಿಧ ಪಾನೀಯ, ಹಣ್ಣು, ತಿನಿಸುಗಳ ಅಂಗಡಿಗಳಿವೆ. ಪುನಾರಚಿತ ಅಂಗಡಿಗಳಿಗೆ ವಿದ್ಯುತ್, ನೀರಿನ ಸಂಪರ್ಕವನ್ನು ಕಲ್ಪಿಸುವುದಿಲ್ಲ. ಇದುವರೆಗೆ ಇವರು ದಿನಕ್ಕೆ 100 ರೂ. ಬಾಡಿಗೆ ಕೊಡುತ್ತಿದ್ದರೆ, ಮುಂದೆ 150 ರೂ. ನಿಗದಿಪಡಿಸಿದ್ದಾರೆ. ಸುಮಾರು ಒಂದು ತಿಂಗಳಿಂದ ಕೆಲಸ ನಡೆಯುತ್ತಿದ್ದು ಹತ್ತು ದಿನಗಳ ಹಿಂದೆ ಕೆಲವರು ನಗರಸಭೆಗೆ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ದೂರು ನೀಡಿದ ಕಾರಣ ನಗರಸಭೆಯವರು ಕಾಮಗಾರಿಯನ್ನು ನಿಲ್ಲಿಸಿದ್ದಾರೆ. ಈ ವಿಷಯ ನಗರಸಭೆ ಅಧಿವೇಶನದಲ್ಲಿಯೂ ಪ್ರಸ್ತಾವಗೊಂಡಿತು. ಇದರ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಲಾಗಿದೆ ಎಂದು ನಗರಸಭಾಧ್ಯಕ್ಷರು ತಿಳಿಸಿದ್ದರು.