Advertisement

ಶ್ರೀ ಕೃಷ್ಣಮಠಕ್ಕೆ ಹಸುರು ಹೊರೆಕಾಣಿಕೆ ಸಮರ್ಪಣೆ

08:25 PM Jun 04, 2019 | sudhir |

ಉಡುಪಿ: ಶ್ರೀ ಕೃಷ್ಣಮಠದ ಸುವರ್ಣ ಗೋಪುರ ಸಮರ್ಪಣೋತ್ಸವದ ಅಂಗವಾಗಿ ಮಂಗಳವಾರ ವಿವಿಧ ಸಂಘ-ಸಂಸ್ಥೆ, ಸಂಘಟನೆಗಳ ಆಶ್ರಯದಲ್ಲಿ ಶ್ರೀ ಕೃಷ್ಣಮಠಕ್ಕೆ ಹಸುರು ಹೊರೆಕಾಣಿಕೆ ಸಮರ್ಪಣೆ ನಡೆಯಿತು.

Advertisement

ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಹಸುರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.

ಜೋಡುಕಟ್ಟೆಯಿಂದ ಆರಂಭ ಗೊಂಡ ಮೆರವಣಿಗೆಯು ಕವಿ ಮುದ್ದಣ
ಮಾರ್ಗದ ಮೂಲಕ ಸಂಸ್ಕೃತ ಕಾಲೇಜು, ರಥಬೀದಿ ಮೂಲಕ ಶ್ರೀ ಕೃಷ್ಣಮಠಕ್ಕೆ ತೆರಳಿತು.

ರಥಬೀದಿ ವ್ಯಾಪಾರಸ್ಥರು, ಕಾಪು ಮಹಿಷಮರ್ದಿನಿ ಸಮೂಹ ಸಂಸ್ಥೆ, ಮಹಾಲಿಂಗೇಶ್ವರ ಗೆಳೆಯರ ಬಳಗ ಬ್ರಹ್ಮಾವರ, ವಿಶ್ವಕರ್ಮ ಒಕ್ಕೂಟ ಉಡುಪಿ, ದ.ಕ., ಸಹಿತ ಮೈಸೂರು, ಮಂಗಳೂರು, ಸುರತ್ಕಲ್‌, ಸಾಸ್ತಾನ, ನೀಲಾವರ, ಬ್ರಹ್ಮಾವರ ಬೈಕಾಡಿಯ ಸುಮಾರು 125ಕ್ಕೂ ಅಧಿಕ ವಾಹನಗಳು ಮೆರವಣಿಗೆಯಲ್ಲಿ ಸಾಗಿ ಬಂದವು.

ಗಮನ ಸೆಳೆದ ಅಂಶ
– ಪೇಜಾವರ ಮುಸ್ಲಿಂ ಅಭಿಮಾನಿ ಬಳಗದ ವತಿಯಿಂದ 6 ಸಾವಿರ ಲೀಟರ್‌ ಕುಡಿಯುವ ನೀರು ಹಾಗೂ ವಿವಿಧ ಬಗೆಯ ತರಕಾರಿಗಳನ್ನು ಎರಡು ವಾಹನಗಳಲ್ಲಿ ತರಲಾಯಿತು.

Advertisement

– ಪೂರ್ಣಪ್ರಜ್ಞ ಕಾಲೇಜಿನ ವತಿಯಿಂದ ಪ್ರಥಮ ಬಾರಿಗೆ 77 ಚೀಲ ಅಕ್ಕಿ ಹಾಗೂ ವಿದ್ಯೋದಯ ಶಾಲೆಯ ವತಿಯಿಂದ 50 ಚೀಲ ಅಕ್ಕಿಯನ್ನು ಹೊರೆಕಾಣಿಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

– ಮಟ್ಟುಗುಳ್ಳವನ್ನು ಪಲ್ಲಕಿಯಲ್ಲಿ ಹೊತ್ತು ತರಲಾಯಿತು.

ಅಂಗವಿಕಲರಿಂದ ಹೊರೆಕಾಣಿಕೆ
ಜಗದೀಶ್‌ ಭಟ್‌ ನೇತೃತ್ವದಲ್ಲಿ ಸುಮಾರು 15ರಷ್ಟು ಅಂಗವಿಕಲರು ದ್ವಿಚಕ್ರ ವಾಹನಗಳ‌ಲ್ಲಿ ಹೊರೆಕಾಣಿಕೆಯನ್ನು ಸಮರ್ಪಿಸಿದರು. ಮೆರವಣಿಗೆಯ ಮುಂದಿದ್ದ ಆನೆ ಸುಭದ್ರೆಯ ಹಿಂಭಾಗದಲ್ಲಿ ಚೆಂಡೆ, ಭಜನೆ, ನಾಸಿಕ್‌ ಬ್ಯಾಂಡ್‌ ಸಹಿತ ತೆರೆದ ವಾಹನಗಳು ಗಮನಸೆಳೆದವು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next