Advertisement

Udupi ಶ್ರೀ ಕೃಷ್ಣ ಮಠದಲ್ಲಿ ವೈಚಾರಿಕ ವೈಭವ

01:40 AM Aug 22, 2024 | Team Udayavani |

ಉಡುಪಿ: ಶ್ರೀ ಕೃಷ್ಣಮಠ ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆಯುತ್ತಿರುವ ಶ್ರೀ ಕೃಷ್ಣ ಮಾಸೋತ್ಸವದ ಅಂಗವಾಗಿ ಆ.23ರಿಂದ 26ರವರೆಗೆ ರಾಜಾಂಗಣದಲ್ಲಿ ಸಂಜೆ 5 ಗಂಟೆಯಿಂದ ವೈಚಾರಿಕ ವೈಭವ ನಡೆಯಲಿದೆ.

Advertisement

ಆ.23ರಂದು ಪೂರ್ಣ ಪ್ರಜ್ಞ ಕಾಲೇಜಿನ ಕನ್ನಡ ಪ್ರಾಧ್ಯಾಪಿಕೆ ಡಾ| ಪ್ರಜ್ಞಾ ಮಾರ್ಪಳ್ಳಿ ಅವರು ವಿದ್ಯಾರ್ಥಿ ಜೀವನಕ್ಕೆ ಭಗವದ್ಗೀತೆಯ ಮಾರ್ಗದರ್ಶನ ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ.

ಆ.24ರಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರು ದ್ವೇಷಾಸೂಯೆ ಹಿಂಸೆಗಳನ್ನು ಗೀತಾಚಾರ್ಯ ಬೋಧಿಸಿದನೇ? ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ.

ಆ.25ರಂದು ಆಹಾರ ತಜ್ಞೆ ಡಾ| ಎಚ್‌.ಎಸ್‌. ಪ್ರೇಮಾ ಅವರು ಭಗವದ್ಗೀತೆ ಹೇಳಿದ ಆಹಾರಕ್ರಮ ಎಷ್ಟು ಪ್ರಸ್ತುತ? ಎಂಬ ವಿಷಯದಲ್ಲಿ ವಿಚಾರ ಮಂಡನೆ ಮಾಡಲಿದ್ದಾರೆ. ಆ.26ರಂದು ರಂಗಕರ್ಮಿ, ನಿರ್ದೇಶಕ ಎಸ್‌.ಎನ್‌. ಸೇತುರಾಮ್‌ ಅವರು ಕೃಷ್ಣನ ವ್ಯಕ್ತಿತ್ವದ ಪ್ರಸ್ತುತತೆ ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next