Advertisement
ಇದೊಂದು ವಾರ್ಷಿಕ ವಿಶೇಷ ಪೂಜೆ. ಒಂದು ತಿಂಗಳ ಈ ಪೂಜೆ ಮುಗಿದ ಮರುದಿನ ಉತ್ಥಾನದ್ವಾದಶಿಯಂದು ಶ್ರೀಕೃಷ್ಣಮಠದಲ್ಲಿ ಉತ್ಸವಾದಿಗಳು ಆರಂಭವಾಗುವುದು.
Related Articles
Advertisement
ಪಶ್ಚಿಮ ಜಾಗರ ಪೂಜೆ ಅನಂತರ ಉಧ್ವರ್ತನ, ಕಲಶ ಪೂಜೆ, ತೀರ್ಥಪೂಜೆ, ಅಲಂಕಾರ ಪೂಜೆ, ಅನಂತರ ಲಕ್ಷ ತುಳಸಿ ಅರ್ಚನೆ, ಮಹಾಪೂಜೆಗಳು ನಡೆಯುತ್ತವೆ. ಪಶ್ಚಿಮ ಜಾಗರ ಪೂಜೆ ಇಷ್ಟು ವಿಸ್ತೃತವಾಗಿಯಲ್ಲದಿದ್ದರೂ ಕೆಲವು ದೇವಾಲಯಗಳಲ್ಲಿ ವಿಶೇಷವಾಗಿ ಮಠ ಪರಂಪರೆಯ ದೇವಸ್ಥಾನಗಳಲ್ಲಿ ನಡೆಯುತ್ತದೆ.
ಇದನ್ನೂ ಓದಿ:ಸಿಸಿ ಕ್ಯಾಮರಾ, ಸಾಮಾಜಿಕ ಜಾಲತಾಣಗಳಿಂದ ನಾಯಿಮರಿ ಪತ್ತೆ!
ಆಷಾಢಶುದ್ಧ ಏಕಾದಶಿ ಯಿಂದ ಭಗವಂತ ಯೋಗನಿದ್ರೆಯಲ್ಲಿದ್ದಾನೆಂಬ ನಂಬಿಕೆ. ಈ ಒಂದು ತಿಂಗಳು ಬೆಳಗ್ಗೆ ಅಪೂರ್ವ ವಾದ್ಯಘೋಷ, ಬಳಿಕ ಪಶ್ಚಿಮಜಾಗರ ಪೂಜೆ ನಡೆಯುತ್ತದೆ. ಯೋಗನಿದ್ರೆಯಿಂದ ಭಗವಂತನನ್ನು ಎಚ್ಚರಿಸಲು ಭಕ್ತರು ಮಾಡುವ ಸೇವೆ ಇದು. ಜಾಗರ= ನಿದ್ರೆ, ಪಶ್ಚಿಮಜಾಗರ= ರಾತ್ರಿಯ ಕೊನೆಯ ಭಾಗ ಅಂದರೆ ಪ್ರಾತಃ ಕಾಲ. ಇದನ್ನು ಪಶ್ಚಿಮ ಯಾಮದ ಪೂಜೆ ಎಂದೂ ಕರೆಯುತ್ತಾರೆ. ಯಾಮ=ಜಾವ. ರಾತ್ರಿಯ ಕೊನೆಯ ಯಾಮವೇ ಮುಂಜಾವದ ಅವಧಿ. ಪಕ್ಷಿಗಳು ಮುಂಜಾವ ಎದ್ದು ಚಿಲಿಪಿಲಿಗುಟ್ಟುವ ಸಮಯವಾದ ಕಾರಣ ಕೆಲವರು ಪಕ್ಷಿಜಾಗರ ಪೂಜೆ ಎಂದದ್ದೂ ಇದೆ. ಆದರೆ ಇದು ಶಾಸ್ತ್ರೀಯ ಹೆಸರಲ್ಲ. ಪ್ರಬೋಧೋತ್ಸವ ಪೂಜೆ ಎಂದೂ ಶಾಸ್ತ್ರೀಯವಾಗಿ ಕರೆಯಲಾಗುತ್ತದೆ. ಈ ಪೂಜಾ ಆಚರಣೆಯನ್ನು ಮಧ್ವಾಚಾರ್ಯರು ವರಾಹ ಪುರಾಣದಿಂದ ಉಲ್ಲೇಖೀಸಿ ಚಾಲ್ತಿಗೆ ತಂದಿದ್ದಾರೆ.
ವಾದ್ಯಗಳ ಪಟ್ಟಿಗೆ ವೇಣು, ವೀಣೆ, ಪಿಟೀಲಿಗೂ ಅವಕಾಶಪಶ್ಚಿಮ ಜಾಗರ ಪೂಜೆ ಬೆಳಗ್ಗೆ ಸುಮಾರು 5.45ಕ್ಕೆ ನಡೆಯುತ್ತದೆ. ಬೆಳಗ್ಗೆ 3.45ರಿಂದ 5.45ರ ವರೆಗೆ ಶ್ರೀಮಠದಲ್ಲಿ ನಿತ್ಯ ಉಪಯೋಗಿಸುವಂತಹ ವಾದ್ಯಗಳಲ್ಲದೆ ಕೆಲವೊಂದು ವಿಶೇಷ ವಾದ್ಯಗಳ ವಾದನ ನಡೆಯುತ್ತದೆ. ಶಂಖನಾದ, ನಗಾರಿ, ಬಾರ್ ತಂಬೂರಿ, ರಣಕಹಳೆ, ಡೋಲು, ದಮಣಿ, ತ್ರಾಸೆ, ಉಡುಕು ನಾಗಸ್ವರ, ಸೂರ್ಯವಾದ್ಯ, ಸ್ಯಾಕ್ಸೋಫೋನ್ ಅದೇ ರೀತಿಯಲ್ಲಿ ನಮ್ಮ ಸುತ್ತಮುತ್ತಲಿನ ಕೊಳಲು, ವೀಣೆ, ವಯಲಿನ್ ವಾದನ ನುಡಿಸುವ ಯುವ ಪ್ರತಿಭೆಗಳಿಗೆ ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅವಕಾಶ ಕಲ್ಪಿಸಿದ್ದಾರೆ. ಯುವಪ್ರತಿಭೆಗಳ ಕಾರ್ಯಕ್ರಮಗಳು ಬೆಳಗ್ಗೆ ಸುಮಾರು 4.50 ಗಂಟೆಯಿಂದ 25 ನಿಮಿಷಗಳ ಕಾಲ ಗರ್ಭಗುಡಿ ಎದುರು ಚಂದ್ರಶಾಲೆಯಲ್ಲಿ ನಡೆಯಲಿದೆ. ನ. 16ರ ವರೆಗೆ ಯುವ ಪ್ರತಿಭೆಗಳ ಕಾರ್ಯಕ್ರಮಗಳು ನಿಗದಿಯಾಗಿವೆ.