Advertisement
ಶ್ರಿಕೃಷ್ಣದೇವರಿಗೆ 108 ಕಲಶಗಳ ಅಭಿಷೇಕಗಳು ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ನಡೆಯಲಿದೆ. ಅನಂತರ ಮಹಾಪೂಜೆ ಸಂಪನ್ನಗೊಳ್ಳಲಿದೆ. ಪರ್ಯಾಯ ಶ್ರಿಪಲಿಮಾರು ಮಠದ ಶ್ರಿವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಸಹಿತ ವಿವಿಧ ಮಠಾಧೀಶರೇ ಈ ಕಲಶಾಭಿಷೇಕವನ್ನು ನಡೆಸಲಿದ್ದಾರೆ. ಕಲಶಗಳ ಪೂಜೆಗಳನ್ನು ಗರ್ಭಗುಡಿ ಹೊರ ಪ್ರಾಕಾರದಲ್ಲಿ ನಡೆಸಲಾಗುತ್ತದೆ. ಇದೇ ವೇಳೆ ಬೆಂಗಳೂರಿನ ರಾಮಕೃಷ್ಣ ಭಜನಾ ಸಭಾ, ಶ್ರೀರಂಗಂನ ಶ್ರೀನಾಮಸಂಕೀರ್ತನ ವೃಂದ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದವರು ನಡೆಸಿಕೊಡಲಿದ್ದಾರೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಅನ್ನಸಂತರ್ಪಣೆಯನ್ನು ಹೊರನಾಡು ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಷಿಯವರು ಉದ್ಘಾಟಿಸುವರು. ಸಂಜೆ ನಡೆಯುವ ಸಭೆಯಲ್ಲಿ ಶ್ರೀಪೇಜಾವರ ಶ್ರೀಗಳ ಅಧ್ಯಕ್ಷತೆಯಲ್ಲಿ ಶ್ರೀಉತ್ತರಾದಿ ಮಠದ ಶ್ರೀಸತ್ಯಾತ್ಮತೀರ್ಥ ಶ್ರೀಪಾದರು ಸಮರ್ಪಣ ಸಂದೇಶ ನೀಡುವರು. ತಿರುವಾಂಕೂರು ಮಹಾರಾಜ ಪದ್ಮನಾಭದಾಸರು ಭಾಗವಹಿಸುವರು. ಕಳೆದ ಹತ್ತು ದಿನಗಳಿಂದ ಸ್ಥಳೀಯ ಮತ್ತು ಪರ ಊರಿನ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಜೂ. 10ರಂದು ಸಮರ್ಪಣೋತ್ಸವ ಸಮಾರೋಪ ಸಮಾರಂಭ ಜರಗಲಿದೆ.
Advertisement
ಶ್ರೀ ಕೃಷ್ಣ ಮಠ: ಇಂದು ಬ್ರಹ್ಮ ಕಲಶೋತ್ಸವ
08:51 PM Jun 08, 2019 | Team Udayavani |