Advertisement

ಉಡುಪಿ ಶ್ರೀಕೃಷ್ಣಾಷ್ಟಮಿಯಂದು ಭಕ್ತರಿಗೆ ದರ್ಶನಾವಕಾಶ : ಭರದಿಂದ ನಡೆಯುತ್ತಿದೆ ತಯಾರಿ

07:34 PM Aug 28, 2021 | Team Udayavani |

ಉಡುಪಿ : ಶ್ರೀಕೃಷ್ಣ ಜನ್ಮಾಷ್ಟಮಿ ತಯಾರಿ ಭರದಿಂದ ನಡೆಯುತ್ತಿದೆ. ಆ. 30 ರಂದು ಬೆಳಗ್ಗೆ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಲಕ್ಷತುಳಸಿ ಅರ್ಚನೆ ನಡೆಸುವರು. ತುಳಸಿ ಪುಷ್ಪ ನೀಡುವವರು ಆ. 29ರ ಒಳಗೆ ಒಪ್ಪಿಸಬಹುದು.

Advertisement

ಜನ್ಮಾಷ್ಟಮಿ ಪ್ರಯುಕ್ತ ಗರ್ಭಗುಡಿಯಲ್ಲಿ ಸ್ಯಾಕ್ಸೋಫೋನ್, ನಾಗಸ್ವರ, ವೇಣುವಾದನ ಕಛೇರಿ ನಡೆಯಲಿದೆ. ಆ. 30ರ ಮಧ್ಯರಾತ್ರಿ 12.30ರ ಬಳಿಕ ಅರ್ಘ್ಯ ಪ್ರದಾನಕ್ಕೆ ಭಕ್ತರಿಗೆ ಕನಕನ ಕಿಂಡಿ ಎದುರು ಮತ್ತು ವಸಂತ ಮಂಟಪದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕೃಷ್ಣಾಷ್ಟಮಿ ಮತ್ತು ಲೀಲೋತ್ಸವ (ವಿಟ್ಲಪಿಂಡಿ) ದಿನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆ. 30ರಂದು ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ, ಆ. 31ರ ಬೆಳಗ್ಗೆ 7.30ರಿಂದ ಮಧ್ಯಾಹ್ನ 1ರ ವರೆಗೆ, ರಥೋತ್ಸವದ ಬಳಿಕ ಸುಮಾರು 5 ಗಂಟೆಯಿಂದ ದರ್ಶನಾವಕಾಶವಿದೆ.

ಇದನ್ನೂ ಓದಿ :ದ.ಕ. ಜಿಲ್ಲೆಯಲ್ಲಿ ಶೇ.1.83ಕ್ಕೆ ಇಳಿಕೆಯಾದ ಪಾಸಿಟಿವಿಟಿ ದರ : 207 ಮಂದಿಯಲ್ಲಿ ಸೋಂಕು ಪತ್ತೆ

ಭಕ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ದರ್ಶನ ನಡೆಸಬೇಕೆಂದು ಮಠದ ವ್ಯವಸ್ಥಾಪಕರು ಕೋರಿದ್ದಾರೆ.

Advertisement

ಯಾತ್ರಾರ್ಥಿಗಳು ವಿಶ್ವಪಥದ ಮೂಲಕ, ಸುದರ್ಶನ ಪ್ರವೇಶ ಪತ್ರ ಹೊಂದಿದ ಸ್ಥಳೀಯರು ಉತ್ತರ ಮತ್ತು ದಕ್ಷಿಣ ದ್ವಾರದಿಂದ ದರ್ಶನ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next