Advertisement
ಜೂ. 3 ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಪಣತೊಟ್ಟಿರುವ ಏಕೈಕ ಸರಕಾರೇತರ ಸಂಸ್ಥೆಯಾಗಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ ವತಿಯಿಂದ ಆಯೋಜಿಸಲಾಗಿದ್ದ ಕೊಂಕಣ ರೈಲ್ವೆಯ ರೂವಾರಿ, ನಿಷ್ಠಾವಂತ ರಾಜಕಾರಣಿ, ಕಾರ್ಮಿಕ ವರ್ಗದ ಮುಂದಾಳು ಜಾರ್ಜ್ ಫೆರ್ನಾಂಡಿಸ್ ಅವರ 88 ನೇ ಹುಟ್ಟುಹಬ್ಬ ಆಚರಣೆಯನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಕೈಗಾರಿಕಾ ಸಚಿವರಾಗಿ, ಟೆಲಿಕಾಂ ಸಚಿವರಾಗಿ ಅವರು ಮಾಡಿದ ಸೇವೆ ಅನುಪಮವಾಗಿದೆ. ಕೇಂದ್ರ ರಕ್ಷಣ ಸಚಿವರಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದ ಅವರು ದೇಶದ ಹಿಮಪ್ರದೇಶವಾಗಿರುವ ಸಿಯಾಚಿನ್‌ಗೆ 17 ಬಾರಿ ಭೇಟಿ ನೀಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ದೇಶದ ರಕ್ಷಣ ಪಡೆಗಳ, ಸೈನಿಕರ ವಲಯದಲ್ಲಿ ಬದಲಾವಣೆಗಳನ್ನು ತಂದವರು ಅವರಾಗಿದ್ದಾರೆ. ಅವರು ಕೇಂದ್ರ ರಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಗೆ, ಜಿಲ್ಲೆಯ ಬೆಳವಣಿಗೆಗೆ ಸಹಕಾರಿಯಾಗಿ ಬೆನ್ನೆಲುಬಾಗಿ ನಿಂತಿದ್ದರು. ಅವಿಭಜಿತ ಜಿಲ್ಲೆಯ ಇತರ ಸಚಿವರೊಂದಿಗೆ ಜಾರ್ಜ್ ಫೆರ್ನಾಂಡಿಸ್ ಅವರು ಸಮಿತಿಯ ಮುಖಾಂತರ ಜಿಲ್ಲೆಯ ಸರ್ವಾತೋಮುಖ ಯಶಸ್ಸಿಗೆ ಸಹಕರಿಸಿದರು. ಅವರ ಮಾರ್ಗದರ್ಶನದೊಂದಿಗೆ ಇಂದಿಗೂ ಸಮಿತಿಯು ಅಭಿವೃದ್ಧಿಪರ ಕಾರ್ಯಗಳನ್ನು ಮಾಡುತ್ತಿದೆ ಎನ್ನಲು ಸಂತೋಷವಾಗುತ್ತಿದೆ. ಜಾರ್ಜ್ ದೇಶ ಕಂಡ ಅಪ್ರತಿಮ ಹೋರಾಟಗಾರರಾಗಿದ್ದು, ಪ್ರಸ್ತುತ ನೆನಪಿನ ಶಕ್ತಿಯ ಕೊರತೆಯಿಂದ ಅನಾರೋಗ್ಯದಿಂದಿರುವುದು ನಮ್ಮ ಸಮಿತಿಗೆ ಬಹುದೊಡ್ಡ ನಷ್ಟವಾಗಿದೆ. ಅವರಿಗೆ ಮತ್ತೆ ಆರೋಗ್ಯ ಭಾಗ್ಯವನ್ನು ದೇವರು ಕರುಣಿಸಿ, ಅವರ ಮಾರ್ಗದರ್ಶನ ಸಮಿತಿಗೆ ಸದಾ ದೊರೆಯುವಂತಾಗಲಿ ಎಂದರು.
ತೀಯಾ ಸಮಾಜ ಮುಂಬಯಿ ಇದರ ಗೌರವಾಧ್ಯಕ್ಷ ರೋಹಿದಾಸ್ ಬಂಗೇರ ಅವರು ಮಾತನಾಡಿ, ಜಾರ್ಜ್ ಫೆರ್ನಾಂಡಿಸ್ ಅವರೊಂದಿಗೆ ಇದ್ದ ಸಂಬಂಧವನ್ನು ಮೆಲುಕು ಹಾಕಿ, ಜಾರ್ಜ್ ಫೆರ್ನಾಂಡಿಸ್ ಅವರಂತಹ ರಾಜಕೀಯ ಧುರೀಣರು ಇರುವುದು ಬಹಳ ಕಡಿಮೆ. ಅವರಿಂದ ಇನ್ನಷ್ಟು ಅಭಿವೃದ್ಧಿಪರ ಕಾರ್ಯಗಳು ಆಗಲು ಅವರಿಗೆ ಆರೋಗ್ಯವನ್ನು ದೇವರು ಕರುಣಿಸಲಿ ಎಂದರು.
Related Articles
Advertisement
ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಬೆಳ್ಚಡ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಧ್ಯೇಯೋದ್ಧೇಶಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಸಮಿತಿಯ ಉಪಾಧ್ಯಕ್ಷರುಗಳಾದ ಎಲ್. ವಿ. ಅಮೀನ್, ನಿತ್ಯಾನಂದ ಡಿ. ಕೋಟ್ಯಾನ್, ಪುತ್ತೂರು ಧನಂಜಯ ಶೆಟ್ಟಿ, ಚಿತ್ರಾ ಆರ್. ಶೆಟ್ಟಿ ಕಲ್ಯಾಣ್, ಕಾರ್ಯದರ್ಶಿಗಳಾದ ಜಿ. ಟಿ. ಆಚಾರ್ಯ, ಹಿರಿಯಡ್ಕ ಮೋಹನ್‌ದಾಸ್, ತೋನ್ಸೆ ಸಂಜೀವ ಪೂಜಾರಿ, ಜತೆ ಕೋಶಾಧಿಕಾರಿ ಹ್ಯಾರಿ ಸಿಕ್ವೇರ ಉಪಸ್ಥಿತರಿದ್ದರು.
ಇತರ ಪದಾಧಿಕಾರಿಗಳಾದ ವಿಶ್ವನಾಥ ಮಾಡಾ, ಡಾ| ಪ್ರಭಾಕರ ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ, ರಾಮಚಂದ್ರ ಗಾಣಿಗ, ಚಿತ್ರಾಪು ಕೆ. ಎಂ. ಕೋಟ್ಯಾನ್, ಎಸ್. ಕೆ. ಶ್ರೀಯಾನ್ ಉಪಸ್ಥಿತರಿದ್ದರು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಚಂದ್ರಶೇಖರ ಬೆಳ್ಚಡ ಅವರು ವಂದಿಸಿದರು. ಇದೇ ಸಂದರ್ಭದಲ್ಲಿ ರೋಹಿದಾಸ್ ಬಂಗೇರ, ಪತ್ರಕರ್ತ ದಯಾ ಸಾಗರ್ ಚೌಟ ಮೊದಲಾದವರನ್ನು ಸಮಿತಿಯ ವತಿಯಿಂದ ಸಂಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ಪುಷ್ಪಗುತ್ಛವನ್ನಿತ್ತು ಸ್ವಾಗತಿಸಿ ಅಭಿನಂದಿಸಿ ಶುಭಹಾರೈಸಿದರು.
ದೇಶ ಕಂಡ ಅಪರೂಪದ ವ್ಯಕ್ತಿ ಜಾರ್ಜ್ ಫೆರ್ನಾಂಡಿಸ್ ಅವರು 88 ಸಂವತ್ಸರಗಳನ್ನು ಪೂರೈಸಿಕೊಂಡ ತುಳು-ಕನ್ನಡಿಗರ ಹೆಮ್ಮೆಯ ವ್ಯಕ್ತಿ. ಅವರು ತುಳು-ಕನ್ನಡಿಗರಿಗೆ ಆದರ್ಶಪ್ರಾಯರಾಗಿದ್ದಾರೆ. ನಾಯಕತ್ವ ಏನೆಂಬುವುದನ್ನು ಅವರು ದೇಶಕ್ಕೆ ತೋರಿಸಿಕೊಟ್ಟಿದ್ದಾರೆ. ಅವರು ಆರೋಗ್ಯವಂತರಾಗಿ ಅವರ ಮಾರ್ಗದರ್ಶನದಲ್ಲಿ ಇನ್ನಷ್ಟು ಅಭಿವೃದ್ಧಿಪರ ಕಾರ್ಯಗಳು ನಡೆಯಬೇಕು. ಪರಿಸರ ಪ್ರೇಮಿ ಹೋರಾಟ ಸಂದರ್ಭದಲ್ಲೂ ಸದಾ ಮಾರ್ಗದರ್ಶನ, ಸಹಕಾರ ನೀಡಿದ ಮಹಾನ್ ಶಕ್ತಿ ಅವರಾಗಿದ್ದಾರೆ. ಅವರ ಮಾರ್ಗದರ್ಶನ ಸಮಿತಿಗೆ ಸದಾ ಬೇಕಾಗಿದೆ. ಮುಂದಿನ ಪೀಳಿಗೆಗೆ ಅವರ ಸಾಧನೆಗಳ ಬಗ್ಗೆ ಅರಿವು ಮೂಡಿಸಬೇಕಾದ ಅನಿವಾರ್ಯದೆ ಇದೆ – ಧರ್ಮಪಾಲ ಯು. ದೇವಾಡಿಗ (ಅಧ್ಯಕ್ಷರು : ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ).