Advertisement

ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇಗುಲಕ್ಕೆ ಸಿದ್ಧಗೊಂಡಿದೆ ಆಕರ್ಷಕ ರಥ

12:50 AM Feb 12, 2021 | Team Udayavani |

ಕಾರ್ಕಳ: ಪುರಾಣ ಪ್ರಸಿದ್ಧ ಕಾರ್ಕಳದ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ನೂತನ ರಥ ಹೊಂದುವ ಭಕ್ತರ ಕನಸು ಕೊನೆಗೂ ನನಸಾಗುತ್ತಿದೆ. ಇದೇ ತಿಂಗಳ ಫೆ.17ರಂದು 8.15ಕ್ಕೆ ರಥ ಭೂ ಸ್ಪರ್ಶವಾಗಲಿದೆ.

Advertisement

ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಸುಮಾರು ಹನ್ನೊಂದು ಶತಮಾನಗಳ ಇತಿಹಾಸವಿದೆ. ಸಾನ್ನಿಧ್ಯದಲ್ಲಿ ಈ ಹಿಂದೆ ಇರಿಸಲಾಗಿದ್ದ ಪ್ರಶ್ನೆ ಚಿಂತನೆಗಳ ಸಂದರ್ಭ, ದೇಗುಲಕ್ಕೆ ರಥ ಇರುವುದೊಳಿತು ಎಂದು ದೈವಜ್ಞರು ನುಡಿದಿದ್ದರು. ಕೆಲವು ವರ್ಷಗಳ ಹಿಂದೆ ಭಕ್ತರು ನೂತನ ರಥ ನಿರ್ಮಾಣಕ್ಕೆ ಸಂಕಲ್ಪಿಸಿದ್ದರು. ಕಳೆದ ಮೂರ್‍ನಾಲ್ಕು ವರ್ಷಗಳಿಂದ ರಥ ನಿರ್ಮಾಣದ ಕುರಿತು ಪ್ರಯತ್ನಗಳು ವೇಗ ಪಡೆದುಕೊಂಡಿತ್ತು. ಭಕ್ತರ ಸಂಕಲ್ಪ ಇದೀಗ ಈಡೇರುತ್ತಿದೆ.

15 ದಾರು ಶಿಲ್ಪಿಗಳ ಶ್ರಮ
ರಥ ನಿರ್ಮಾಣ ಕೆಲಸ ವರ್ಷದ ಹಿಂದೆ ಪೂರ್ಣಗೊಳ್ಳಬೇಕಿತ್ತು. ಕೋವಿಡ್‌ ಕಾರಣ ನಿರ್ಮಾಣ ಕೆಲಸ ನಿಧಾನವಾಗಿತ್ತು. ಇದುವರೆಗೆ ಹಲವಾರು ರಥಗಳನ್ನು ನಿರ್ಮಿಸಿರುವ ಶಿಲ್ಪಿ ಪದ್ಮನಾಭ ಆಚಾರ್ಯ ಅವರ ಕೈ ಚಳಕದಲ್ಲಿ 35ನೇ ರಥವಾಗಿ, 15 ಮಂದಿ ಶಿಲ್ಪ ಕೆಲಸಗಾರರ ಶ್ರಮದಿಂದ ಆಕರ್ಷಕ ರಥ ದೇವಸ್ಥಾನದದ ಆವರಣದಲ್ಲಿ ಸಿದ್ಧಗೊಳ್ಳುತ್ತಿದೆ. ಇನ್ನು ಕೆಲ ದಿನಗಳಲ್ಲಿ ಜೋಡಣೆ ಕಾರ್ಯ ಅಂತಿಮಗೊಳ್ಳಲಿದೆ.

2019ರ ಅಕ್ಟೋಬರ್‌ ತಿಂಗಳಲ್ಲಿ ರಥ ನಿರ್ಮಾಣ ಕೆಲಸಗಳು ಆರಂಭಗೊಂಡಿತ್ತು. ಹೆಬ್ಬಲಸು, ಕಿರಾಲ್‌ಬೋಗಿ ಮರಗಳನ್ನು ಬಳಸಿಕೊಳ್ಳಲಾಗಿದೆ. ನಾಲ್ಕು ಚಕ್ರಗಳಿದ್ದು, ಪ್ರತಿ ಚಕ್ರದ ಎತ್ತರ 5.4 ಇಂಚು ಇದೆ. ಶಿಲ್ಪ ಶಾಸ್ತ್ರದ ಪ್ರಕಾರ ರಥ ನಿರ್ಮಾಣವಾಗಿದೆ.

ದೇವರ ಅನುಗ್ರಹ
ದೇಗುಲದಲ್ಲಿ ಸಣ್ಣ ರಥವಿತ್ತು. ಪ್ರಶ್ನೆಯಲ್ಲಿ ಪುಷ್ಕರಿಣಿ, ರಥದ ಪ್ರಸ್ತಾವವಾಗಿತ್ತು. ದೊಡ್ಡ ರಥಕ್ಕೆ ಅಷ್ಟು ದೊಡ್ಡ ಮೊತ್ತ ಸಂಗ್ರಹಿಸುವುದು ಕಷ್ಟವಾಗಿತ್ತು. ದಾನಿಗಳು, ಭಕ್ತರ ಸಹಕಾರದಿಂದ ಸಾಧ್ಯವಾಗಿದೆ. ಅಂದಾಜು 1 ಕೋ.ರೂ. ತಗಲಬಹುದು. ದೇವತಾನುಗ್ರಹದಿಂದ ಇದು ಸಾಧ್ಯವಾಗಿದೆ.

Advertisement

-ಕೆ. ಕಿಶೋರ್‌, ಅಧ್ಯಕ್ಷರು, ರಥ ನಿರ್ಮಾಣ ಸಮಿತಿ

ಬಣ್ಣದ ಲೇಪವಿಲ್ಲ. ರಥದ ವೈಶಿಷ್ಟ್ಯ
ರಥವು ಯಾವುದೇ ಬಣ್ಣಗಳ ಬಳಕೆಯಿಲ್ಲದೆ ನೈಸರ್ಗಿಕವಾಗಿ ಇರಲಿದೆ. 4 ವೇದ ಹಂತಗಳು, ಪಂಚಗೋತ್ರ, ವಿಶ್ವಕರ್ಮ ರೂಪ, ಆನೆಕಾಲು, ಸಿಂಹಗಳು, ದ್ವಾರಪಾಲಕರು, ದ್ವಾದಶ ರಾಶಿ ಆತ್ಮ ದೇವತೆಗಳು, ಅಷ್ಟ ದಿಕಾ³ಲಕರು, ರಥದ ಮಕರ ಕೀರ್ತಿಮುಖಗಳು ಕೆತ್ತನೆಯಲ್ಲಿ ಆಕರ್ಷಕವಾಗಿ ಮೂಡಿ ಬಂದಿವೆ. ಮುಂದಿನ ವಾರ್ಷಿಕ ಉತ್ಸವದ ಸಂದರ್ಭ ರಥದ ಸಮರ್ಪಣೆಯಾಗಿ ದೇವರ ಆರೋಹಣವಾಗಿ ತೇರನ್ನು ಎಳೆಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next