ಮುಂಬಯಿ: ಜೈ ಭವಾನಿ ಶನೀಶ್ವರ ಮಂದಿರ ಘಾಟ್‌ಕೋಪರ್ ಕಳೆದ 38 ವರ್ಷಗಳಿಂದ ನಡೆಸುತ್ತಿರುವ ಧಾರ್ಮಿಕ ಸೇವೆಯಿಂದ ಪರಿಸರದಲ್ಲಿ ಆಧ್ಯಾತ್ಮಿಕ ವಾತಾವರಣ ಸೃಷ್ಟಿಯಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಪೂಜೆ, ಪುನಸ್ಕಾರಗಳೊಂದಿಗೆ ಪರಸ್ಪರ ಒಗ್ಗಟ್ಟು, ಪ್ರೀತಿ, ಬಾಂಧವ್ಯ ಕೂಡಾ ಮುಖ್ಯವಾಗಿದೆ. ಜೀವನದಲ್ಲಿ ಮದ, ಮೋಹ, ಮತ್ಸರ, ಅಹಂ ಭಾವನೆಗಳು ಜೀವನಕ್ಕೆ ಮಾರಕವಾಗಿದೆ. ಜಾತಿ, ಮತ, ಭೇದ-ಭಾವವಿಲ್ಲದೆ ಎಲ್ಲರ ಜೊತೆ ಸೇರಿ ಇಂತಹ ದೇವತಾ ಕಾರ್ಯಗಳನ್ನು ಮಾಡಿ, ಅದರಲ್ಲಿ ಪಾಲ್ಗೊಂಡಾಗ ಬದುಕು ಬಂಗಾರವಾಗುತ್ತದೆ. ಧಾರ್ಮಿಕ ಕ್ಷೇತ್ರಗಳು ಕೇವಲ ಧಾರ್ಮಿಕವಾಗಿ ಬೆಳೆಯದೆ ಸಮಾಜ ಮಖೀಯಾಗಿ ಬೆಳೆಯಬೇಕು. ಆಗ ಮಾತ್ರ ದೇವರ ಅನುಗ್ರಹ ಲಭಿಸುತ್ತದೆ ಎಂದು ಪೊವಾಯಿ ಶ್ರೀ ಮಹಾಶೇಷ ರುಂಡಮಾಲಿನಿ ದೇವಸ್ಥಾನದ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ಅವರು ನುಡಿದರು.
ಡಿ. 9 ರಂದು ಘಾಟ್‌ಕೋಪರ್ ಪಶ್ಚಿಮದ ರೈಫಲ್‌ರೇಂಜ್ ಜಗದುಶಾ ನಗರದ, ಶಿಲ್ಪಾ ಬಿಲ್ಡಿಂಗ್ ಸಮೀಪದ ಜೈಭವಾನಿ ಶನೀಶ್ವರ ಸೇವಾ ಸಮಿತಿ ಸಂಚಾಲಕತ್ವದ ಶ್ರೀ ಜೈ ಭವಾನಿ ಶನೀಶ್ವರ ಮಂದಿರದ 38 ನೇವಾರ್ಷಿಕ ಶ್ರೀ ಸತ್ಯನಾರಾಯಣ ಹಾಗೂ ಶ್ರೀ ಶನಿಮಹಾಪೂಜೆಯಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಅವರು, ಶ್ರೀ ಕ್ಷೇತ್ರವು ಇನ್ನಷ್ಟು ಬೆಳಗಲಿ. ಭಕ್ತರನ್ನು ಅಕರ್ಷಿಸುವ ಮಂದಿರವಾಗಿ ಕಂಗೊಳಿಸಲಿ. ನಿಮ್ಮ ಇಂತಹ ಸೇವೆಯು ನಿರಂತರವಾಗಿ ನಡೆದು ಭಕ್ತಾದಿಗಳ ಇಷ್ಟಾರ್ಥಗಳು ಸಿದ್ಧಿಯಾಗಲಿ ಎಂದು ನುಡಿದು ಎಲ್ಲರಿಗೂ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ಸುವರ್ಣ ಬಾಬಾ ಅವರನ್ನು ಹಾಗೂ ಘಾಟ್‌ಕೋಪರ್ ದೀಪ ಹೊಟೇಲ್‌ನ ಹರೀಶ್ ಶೆಟ್ಟಿ ಅವರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು. ಹರೀಶ್ ಶೆಟ್ಟಿ ಅವರ ಸಮ್ಮಾನ ಪತ್ರವನ್ನು ಶಿಕ್ಷಕ ಸನತ್ ಕುಮಾರ್ ಜೈನ್ ಅವರು ವಾಚಿಸಿದರು. ಸಂಘಟಕ ವಸಂತ ಸುವರ್ಣ ಅವರು ಕಾರ್ಯಕ್ರಮ ನಿರ್ವಹಿಸಿದರು. ಮಂದಿರದ ಪ್ರಧಾನ ಅರ್ಚಕ ರಮೇಶ್ ಶಾಂತಿ ಹಾಗೂ ಹರೀಶ್ ಶಾಂತಿ ಅವರ ಪೌರೋಹಿತ್ಯದಲ್ಲಿ 38 ನೇ ವಾರ್ಷಿಕೋತ್ಸವದ ನಿಮಿತ್ತ ಸ್ವಸ್ತಿ ಪುಣ್ಯಾಹ ವಾಚನ, ನಿತ್ಯ ಸೇವೆ, ನವಕ ಕಲಶಪೂಜೆ, ಗಣಹೋಮ, ನವಗ್ರಹ ಶಾಂತಿ, ಕಲಶಾಭಿಷೇಕ, ಶ್ರೀ ಸತ್ಯನಾರಾಯಣ ಮಹಾಪೂಜೆ, ಮಧ್ಯಾಹ್ನ ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಬಳಿಕ ಶ್ರೀ ಜೈ ಭವಾನಿ ಶ್ರೀ ಶನೀಶ್ವರ ಸೇವಾ ಸಮಿತಿಯವರು ಹಾಗೂ ಮಕ್ಕಳಿಂದ ಮಹಿಳಾ ಮಂಡಳಿಯವರಿಂದ ಹಾಗೂ ನಗರದ ವಿವಿಧ ಭಜನ ಮಂಡಳಿಯವರಿಂದ ಭಜನ ಕಾರ್ಯಕ್ರಮ ನಡೆಯಿತು.
ಸಂಜೆ ಕಲಶ ಪ್ರತಿಷ್ಠೆಯ ಬಳಿಕ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಅಹೋರಾತ್ರಿ ಶನಿಗ್ರಂಥ ಪಾರಾಯಣ ಜರಗಿತು. ಶನಿಗ್ರಂಥ ಪಾರಾಯಣದಲ್ಲಿ ಸಮಿತಿಯ ನಿರಂಜನ್ ಶ್ಯಾನ್‌ಭಾಗ್, ರಮಣಿ ಸುವರ್ಣ, ಕಾಶಿನಾಥ್ ಬಂಗೇರ, ಜಯಂತಿ ಬಂಗೇರ, ವೇಣು ಪೂಜಾರಿ, ಶಂಕರ ಪೂಜಾರಿ, ರಾಮದಾಸ್ ಕೋಟ್ಯಾನ್, ಗೀತಾ ಮೆಂಡನ್, ಯಶೋಧರ ಪೂಜಾರಿ, ಸುರೇಶ್ ಶೆಟ್ಟಿ, ನವೀನ್ ಅಂಚನ್, ರಾಜೇಶ್ ಕೋಟ್ಯಾನ್, ನಾರಾಯಣ ಸುವರ್ಣ ಅವರು ಸಹಕರಿಸಿದರು.
ಅರ್ಥಗಾರಿಕೆಯಲ್ಲಿ ಬಾಲಚಂದ್ರ ಸಾಲ್ಯಾನ್, ರಾಘು ಅಂಚನ್, ಶೇಖರ ಮೆಂಡನ್, ಬಿ. ಎಂ. ಸುವರ್ಣ, ಮೋಹನ್ ಶೆಟ್ಟಿಗಾರ್, ಸೋಮನಾಥ ಪೂಜಾರಿ, ನಾಗೇಶ್ ಸುವರ್ಣ, ಕಿಶೋರ್ ಸಾಲ್ಯಾನ್, ಕೇಶವ ಸುವರ್ಣ, ಭಾಗವತರಾಗಿ ಪ್ರೇಮಾವತಿ ಅಮೀನ್, ನಾಗೇಶ್ ಅಮೀನ್, ರವಿ ಆಚಾರ್ಯ, ಜಯಲಕ್ಷಿ¾à ಅವರು ಸಹಕರಿಸಿದರು. ಚೆಂಡೆಯಲ್ಲಿ ಪ್ರದೀಪ್ ಸುವರ್ಣ, ಪ್ರವೀಣ್ ಶೆಟ್ಟಿ, ಮದ್ದಳೆಯಲ್ಲಿ ಹರೀಶ್ ಸಾಲ್ಯಾನ್, ಆನಂದ ಶೆಟ್ಟಿ, ಹಾರ್ಮೋನಿಯಂನಲ್ಲಿ ಸದಾನಂದ ಶೆಟ್ಟಿ ಕಿನ್ನಿಗೋಳಿ, ವಾದ್ಯ-ವಾಲಗದಲ್ಲಿ ರಾಮದಾಸ್ ಕೋಟ್ಯಾನ್ ಬಳಗ ಸಹಕರಿಸಿದರು.
ಡಿ. 10ರಂದು ಬೆಳಗ್ಗೆ ಭಜನೆ, ಮಹಾ ಮಂಗಳಾರತಿಯೊಂದಿಗೆ 38ನೇ ವಾರ್ಷಿಕ ಮಹೋತ್ಸವ ಸಮಾಪ್ತಿಗೊಂಡಿತು.
ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಮಹಾಪೂಜೆ, ಅನ್ನಸಂತರ್ಪಣೆಯಲ್ಲಿ ಭಾಗಿಯಾದರು.
ಮಹೋತ್ಸವದ ಯಶಸ್ಸಿಗೆ ಬಿಲ್ಲವರ ಸೇವಾದಳ ಹಾಗೂ ಆಡಳಿತ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಬಿ. ಸಾಬ್ಲೆ, ಅಧ್ಯಕ್ಷ ಹರೀಶ್ ಸುವರ್ಣ, ಉಪ ಕಾರ್ಯಾಧ್ಯಕ್ಷ ಬಪ್ಪನಾಡು ಕೂಸಪ್ಪ, ಉಪಾಧ್ಯಕ್ಷ ಅನಿಲ್ ಕೆ. ಕುಕ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಕೆ. ಸಾಲ್ಯಾನ್, ಗೌರವ ಕೋಶಾಧಿಕಾರಿ ಕರುಣಾಕರ ಸಿ. ಬಂಗೇರ, ಜತೆ ಕಾರ್ಯದರ್ಶಿ ಪ್ರಮೋದ್ ಪೂಜಾರಿ, ಜೊತೆ ಕೋಶಾಧಿಕಾರಿ ಅಮಯ್ ಎ. ಮಯೇಕರ್, ಮಾಜಿ ಸಲಹೆಗಾರರುಗಳಾದ ಶೇಖರ್ ಅಮೀನ್, ಮಾಜಿ ಅಧ್ಯಕ್ಷ ಬಾಲಚಂದ್ರ ಸಾಲ್ಯಾನ್ ಹಾಗೂ ಸರ್ವ ಸದಸ್ಯರು ಸಹಕರಿಸಿದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಶ್ರೀ ಜೈ ಭವಾನಿ ಶನೀಶ್ವರ ಮಂದಿರದ 38 ನೇ ವಾರ್ಷಿಕ ಮಹೋತ್ಸವ