Advertisement
ಗದ್ದುಗೆಯೇ ಪ್ರಧಾನವಾಗಿರುವ ಮಾರಿಗುಡಿಯಲ್ಲಿ ಶ್ರೀ ಮಾರಿಯಮ್ಮ ದೇವಿ ಮತ್ತು ಶ್ರೀ ಉಚ್ಚಂಗಿ ದೇವಿಗೆ ದಕ್ಷಿಣ ಭಾರತದಲ್ಲೇ ಅತ್ಯಪೂರ್ವವೆಂಬಂತೆ ಇಳಕಲ್ ಕೆಂಪು ಶಿಲೆಯಲ್ಲಿ ಗರ್ಭಗುಡಿಯನ್ನು ನಿರ್ಮಿಸಲಾಗಿದೆ.
ಭಕ್ತರಿಗೆ ಅವಕಾಶ
ಮಾರಿಯಮ್ಮ ದೇವಿ ಮತ್ತು ಉಚ್ಚಂಗಿ ದೇವಿಗೆ ಸುಮಾರು 20 ಕೆಜಿ ಚಿನ್ನದಿಂದ ಸ್ವರ್ಣ ಗದ್ದುಗೆಯನ್ನು ಸಮರ್ಪಿಸಬೇಕೆಂಬ ಸಮಿತಿಯ ಆಶಯಕ್ಕೆ ದೇವಿಯ ಭಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.ತಮ್ಮ ಶಕ್ತಾನುಸಾರವಾಗಿ ಸ್ವರ್ಣ ಸಮರ್ಪಣೆಗೆ ಮುಂದಾಗಿದ್ದು ಮುಂದಿನ ದಿನಗಳಲ್ಲಿ ಸಾಮೂಹಿಕವಾಗಿ ಸ್ವರ್ಣ ಸಮರ್ಪಣೆಗೆ ಅವಕಾಶ ನೀಡಲು ಸಮಿತಿಯ ಉದ್ದೇಶಿಸಿದೆ.
Related Articles
ಸಮರ್ಪಣೆ ಸಮಿತಿ
ರವಿ ಸುಂದರ್ ಶೆಟ್ಟಿ ಮುಂಬಯಿ (ಅಧ್ಯಕ್ಷ), ಐಕಳಬಾವ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು (ಪ್ರಧಾನ ಕಾರ್ಯಾಧ್ಯಕ್ಷ), ಕಾಪು ದಿವಾಕರ ಶೆಟ್ಟಿ ಕೋತ್ವಾಲಗುತ್ತು (ಪ್ರಧಾನ ಕಾರ್ಯದರ್ಶಿ), ಹರಿಯಪ್ಪ ಕೋಟ್ಯಾನ್ ಮಲ್ಪೆ, ಬಿ.ಎನ್. ಶಂಕರ್ ಪೂಜಾರಿ ಬ್ರಹ್ಮಾವರ, ರತ್ನಾಕರ ಶೆಟ್ಟಿ ನಡಿಕೆರೆ, ಪ್ರಸನ್ನ ಆಚಾರ್ಯ ಕಾಪು (ಕಾರ್ಯಾಧ್ಯಕ್ಷರು), ರವಿ ಭಟ್ ಮಂದಾರ (ಕಾರ್ಯದರ್ಶಿ), ಎರ್ಮಾಳು ಚಂದ್ರಹಾಸ ಶೆಟ್ಟಿ ಪುಣೆ (ಕೋಶಾಧಿಕಾರಿ) ಅವರನ್ನೊಳಗೊಂಡ ಸ್ವರ್ಣ ಗದ್ದುಗೆ ಸಮರ್ಪಣ ಸಮಿತಿಯನ್ನು ರಚಿಸಲಾಗಿದೆ.
Advertisement
ನವ ನಿರ್ಮಾಣಕ್ಕೆಒಂಬತ್ತರ ನಂಟು
ನವದುರ್ಗಾ ಐಕ್ಯ ಸ್ವರೂಪಿಣೀ ಕಾಪು ಮಾರಿಯಮ್ಮನ ಸನ್ನಿಧಿಯ ನವ ನಿರ್ಮಾಣ ಕಾರ್ಯದಲ್ಲಿ ಒಂಬತ್ತರ ನಂಟನ್ನು ಜೋಡಿಸಿಕೊಳ್ಳಲಾಗಿದೆ. ಮಾರಿಗುಡಿ ನಿರ್ಮಾಣ ಕಾರ್ಯದಲ್ಲಿ 9, 99, 999, 9999, 99999 ಮತ್ತು ಅದಕ್ಕಿಂತ ಹೆಚ್ಚಿನ ಶಿಲಾಸೇವೆ ಸಮರ್ಪಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಇದೀಗ ಸ್ವರ್ಣ ಗದ್ದುಗೆ ನಿರ್ಮಾಣ ಯೋಜನೆಯಲ್ಲೂ ಭಕ್ತರಿಗೆ 9 ಗ್ರಾಂ, 18 ಗ್ರಾಂ, 99 ಗ್ರಾಂ, 243 ಗ್ರಾಂ, 450 ಗ್ರಾಂ, 999 ಗ್ರಾಂ ಸ್ವರ್ಣ ಸಮರ್ಪಣೆಗೆ ಅವಕಾಶ ನೀಡಲಾಗುವುದು. ಮಾ. 2: ಮಾರಿಯಮ್ಮ
ದೇವಿಯ ಪ್ರತಿಷ್ಠೆ
2025ರ ಮಾ. 2ರಂದು ಮಾರಿಯಮ್ಮ ದೇವಿಯ ಗದ್ದುಗೆ ಪ್ರತಿಷ್ಠೆಗೆ ದಿನ ನಿಗದಿ ಪಡಿಸಲಾಗಿದೆ. ದೇಗುಲ ಸಮರ್ಪಣೆ, ಗದ್ದುಗೆ ಪ್ರತಿಷ್ಠೆ, ಬ್ರಹ್ಮಕಲಶೋತ್ಸವಕ್ಕೆ ಪೂರ್ವದಲ್ಲಿ ಮಾರಿಗುಡಿಯ ಸಮಗ್ರ ಜೀರ್ಣೋದ್ಧಾರದ ಯೋಜನೆಗಳನ್ನು ಪೂರ್ಣಗೊಳಿಸಬೇಕೆನ್ನುವುದು ನಮ್ಮ ಆಶಯ ಎಂದು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾರ್ಯಾಧ್ಯಕ್ಷ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಪ್ರಧಾನ ಕೋಶಾಧಿಕಾರಿ ರವಿಕಿರಣ್, ತಂತ್ರಿಗಳು, ಅರ್ಚಕರು ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ತಿಳಿಸಿದ್ದಾರೆ.