ತಿ.ನರಸೀಪುರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕಾಶಿಗಿಂತ ಗುಲಗಂಜಿ ತೂಕದಷ್ಟು ಪುಣ್ಯ ಕ್ಷೇತ್ರವಾಗಿರುವ ತಿರಮಕೂಡಲು ನರಸೀಪುರ ಪಟ್ಟಣದಲ್ಲಿ ಶ್ರೀಮಹಾಲಕ್ಷ್ಮೀ ಸಮೇತ ಶ್ರೀ ಗುಂಜಾ ನರಸಿಂಹಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸರಳವಾಗಿ ನಡೆದಿತ್ತು. ಕೋವಿಡ್ ಸೋಂಕಿನ ಕಡಿಮೆ ಇದ್ದ ಕಾರಣ ಈ ಬಾರಿ ವಿಜೃಂಭಣೆಯಿಂದ ನಡೆಯಿತು. ಪಟ್ಟಣದ ತ್ರಿವೇಣಿ ಸಂಗಮದ ದಂಡೆಯಲ್ಲಿನ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದ ರಥೋತ್ಸವಕ್ಕೆ ಶಾಸಕ ಎಂ. ಅಶ್ವಿನ್ ಕುಮಾರ್ ಹಾಗೂ ತಾಲೂಕು ದಂಡಾಧಿಕಾರಿ ಬಿ. ಗಿರಿಜಾ ಮಧ್ಯಾಹ್ನ ನಿಗದಿತ ಶುಭ ಸಮಯಕ್ಕೆ ಚಾಲನೆ ನೀಡಿದರು.
ನಂತರ ರಥವು ದೇವಾಲಯ ದಿಂದ ವಿಶ್ವಕರ್ಮ ಬೀದಿ, ಪ್ರಾಥಮಿಕ ಶಾಲಾ ರಸ್ತೆ ಮೂಲಕ ತೇರಿನ ಬೀದಿಯಲ್ಲಿ ಸಾಗಿ ಸ್ವಸ್ಥಾನಕ್ಕೆ ತಲುಪಿತು. ಇದಕ್ಕೂ ಮುನ್ನಾ ದೇವಾಲಯದಲ್ಲಿ ಮಹಾಲಕ್ಷ್ಮೀ ಸಮೇತ ನರಸಿಂಹ ಸ್ವಾಮಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಬಳಿಕ ರಥ ಸಾಗುವ ಬೀದಿಗಳಲ್ಲಿ ಅಲ್ಲಲ್ಲಿ ಮಂಟಪೋ ತ್ಸವ ನಡೆಯಿತು. ಮಂಟಪದಲ್ಲಿ ಉತ್ಸವ ಮೂರ್ತಿ ಯನ್ನು ಕುಳ್ಳಿರಿಸಿ ಪೂಜೆ ಸಲ್ಲಿಸಲಾಯಿತು.
ಭಕ್ತರು ಅಲ್ಲಲ್ಲಿ ದೇವರಿಗೆ ಪೂಜಾ ಸಾಮಾಗ್ರಿಗಳನ್ನು ತಂದು ಪೂಜೆ ಸಲ್ಲಿಸಿದರು. ರಥೋತ್ಸವ ಸಂದರ್ಭದಲ್ಲಿ ಭಕ್ತಾದಿಗಳಿಗೆ ನೀರು ಮಜ್ಜಿಗೆ, ಪಾನಕ ಹಾಗೂ ಅನ್ನ ಸಂತರ್ಪಣೆಯನ್ನು ಮಾಡ ಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿ ಸಿದ್ದ ಭಕ್ತರು ರಥೋತ್ಸವ ಚಲಿಸುತ್ತಿದ್ದಂತೆ ಭಕ್ತರ ಹಷೋದ್ಘಾರ ಮುಗಿಲು ಮುಟ್ಟಿತ್ತು.
ರಥೋತ್ಸವ ಕಾರ್ಯಕ್ರಮಕ್ಕೆ ಆಲಗೂಡು, ಗೋಪಾಲಪುರ, ವ್ಯಾಸರಾಜಪುರ ಹಾಗೂ ಪಟ್ಟಣದ ಯಜಮಾನರು, ಗ್ರಾಮಸ್ಥರು ಭಾಗವಹಿಸಿದ್ದರು. ಶಾಸಕ ಎಂ.ಅಶ್ವಿನ್ ಕುಮಾರ್ ಅಭಿಮಾನಿಗಳ ಕೋರಿಕೆ ಮೇರೆಗೆ ಪುನಿತ್ ರಾಜ್‌ಕುಮಾರ್ ಭಾವ ಚಿತ್ರವನ್ನು ಎತ್ತಿ ಹಿಡಿದು ಅಭಿಮಾನಿಗಳಿಗೆ ಮುದ ನೀಡಿದರು.
ಮಾಜಿ ಶಾಸಕ ಸಿ.ರಮೇಶ್, ಪುರಸಭೆ ಅಧ್ಯಕ್ಷ ಎಸ್.ಮದನ್‌ರಾಜ್, ಉಪಾಧ್ಯಕ್ಷೆ ಪ್ರೇಮಾ, ಸದಸ್ಯ ರಾದ ಆರ್.ಅರ್ಜುನ್, ಎಸ್.ಕೆ.ಕಿರಣ್, ಮಂಜು (ಬಾದಾಮಿ) ಆರೋಗ್ಯಾಧಿಕಾರಿ ಚೇತನ್ ಕುಮಾರ್, ಸಹಾಯಕ ಆರೋಗ್ಯಾಧಿಕಾರಿ ಮಹೇಂದ್ರ ಇದ್ದರು. ರಥೋತ್ಸವದ ವೇಳೆ ಅಹಿತಕರ ಘಟನೆ ನಡೆಯ ದಂತೆ ಪೊಲೀಸ್ ನಿರೀಕ್ಷಕ ಕೃಷ್ಣಪ್ಪ ನೇತೃತ್ವದಲ್ಲಿ ಬಿಗಿ ಬಂದೋಬÓ¤… ಏರ್ಪಡಿಸಲಾಗಿತ್ತು.