Advertisement

ರಾವಲ್ಪಾಡಾದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಧಾರ್ಮಿಕ ಸಭೆ

03:30 PM Feb 13, 2018 | |

ಮುಂಬಯಿ: ನೈತಿಕ, ಸಿದ್ಧಾಂತ, ಸನ್ನಡೆಯಿಂದ ಬಾಳಲು ದೇವಸ್ಥಾನಗಳ ಪಾತ್ರ ಮಹತ್ವದ್ದಾಗಿದೆ. ಇಲ್ಲಿ ಜರಗುವ ಪೂಜಾ ಕೈಂಕರ್ಯ, ಪ್ರವಚನ, ಭಜನೆ ಇತ್ಯಾದಿಗಳು ಆತ್ಮಸ್ಥೈರ್ಯವನ್ನು ಹೆಚ್ಚಿಸಿ ಧನಾತ್ಮಕ ಚಿಂತನೆಯನ್ನು ಮೂಡಿಸುತ್ತವೆ. ದೇವಸ್ಥಾನಗಳು ಊರಿನ ಅಭಿವೃದ್ಧಿಯನ್ನು ಪ್ರೇರೇಪಿಸುತ್ತದೆ ಎಂದು ದಹಿಸರ್‌ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಜಿ. ಶೆಟ್ಟಿ ನುಡಿದರು.

Advertisement

ಫೆ. 3ರಂದು ದಹಿಸರ್‌ ಪೂರ್ವದ ರಾವಲ್ಪಾಡಾದ ಶ್ರೀ ದುರ್ಗಾಪರಮೇಶ್ವರಿ, ಶ್ರೀ ಶನೀಶ್ವರ ದೇವಸ್ಥಾನದ 32ನೇ ವಾರ್ಷಿಕ ಮಹಾಪೂಜೆ, ಬಲಿ ಉತ್ಸವ, ಕಟ್ಟೆಪೂಜೆ, ಧಾರ್ಮಿಕ ಸಭೆ, ಸಮ್ಮಾನ-ಸಾಂಸ್ಕೃತಿಕ ಕಾರ್ಯ

ಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಅವರು, ಧಾರ್ಮಿಕ ಸೇವಾ ಕಾರ್ಯದೊಂದಿಗೆ ಪರಿಸರದ ಮಕ್ಕಳ ಶಿಕ್ಷಣಕ್ಕಾಗಿ ನೆರವು ನೀಡಿ ಗೌರವಿಸುತ್ತಿರುವುದು ಶ್ಲಾಘನೀಯವಾಗಿದೆ. ದೇವರ ಹಾಗೂ ಮಾತಾಪಿತರ ಸೇವೆಯಿಂದ ನಮ್ಮ ಜೀವನವನ್ನು ಸಾರ್ಥಕಗೊಳಿಸಿ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ ವಿನಂತಿಸಿದರು.

ಇದೇ ಸಂದರ್ಭದಲ್ಲಿ ದೇವಸ್ಥಾನದ ಪ್ರಗತಿಗಾಗಿ ಸಹಕರಿಸಿದ ಕೃಷ್ಣ ಆಚಾರ್ಯ, ದಂಪತಿ ಮತ್ತು ರಾಜ್‌ಕುಮಾರ್‌ ಎ. ಪೂಜಾರಿ ಅವರನ್ನು ಗಣ್ಯರು ಸಮ್ಮಾನಿಸಿದರು. ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್‌ ಅಂಧೇರಿ ಸ್ಥಳೀಯ ಕಚೇರಿಯ ಕಾರ್ಯದರ್ಶಿ ಹರೀಶ್‌ ಶಾಂತಿ, ಭಾರತ್‌ ಬ್ಯಾಂಕ್‌ನ ನಿರ್ದೇಶಕ ದಾಮೋದರ್‌ ಕುಂದರ್‌, ಜಯಲಕ್ಷ್ಮೀ ಕೋ. ಆಪರೇಟಿವ್‌ ಸೊಸೈಟಿಯ ಕಾರ್ಯಾಧ್ಯಕ್ಷ ರಂಗಪ್ಪ ಗೌಡ ಅವರು ಮಾತನಾಡಿ ಶುಭ ಹಾರೈಸಿದರು.

ಸಮಾಜ ಸೇವಕ, ಮಲಾಡ್‌ ಶ್ರೀ ದುರ್ಗಾ ಪರಮೇಶ್ವರಿ ಮಂದಿರದ ಅಧ್ಯಕ್ಷ ಶೇಖರ್‌ ಕೆ. ಪೂಜಾರಿ, ಸಮಿತಿಯ ಅಧ್ಯಕ್ಷ ಸಿ. ಎನ್‌. ಪೂಜಾರಿ, ಕಾರ್ಯ ದರ್ಶಿ ಜಯರಾಮ್‌ ಎನ್‌. ಮೆಂಡನ್‌, ಕೋಶಾಧಿಕಾರಿ ದೀಪಕ್‌ ಕೆ. ಪೂಜಾರಿ ಅವರು ಉಪಸ್ಥಿತರಿದ್ದರು. ಪದಾಧಿಕಾರಿಗಳಾದ ಚಂದ್ರ ಶೇಖರ ಪೂಜಾರಿ, ಪ್ರಕಾಶ್‌ ಅಮೀನ್‌, ರವಿ ಎಂ. ಅಮೀನ್‌ ಅವರನ್ನು ಗಣ್ಯರನ್ನು ಗೌರವಿಸಿದರು. ಲಕ್ಷ್ಮಣ್‌ ಪೂಜಾರಿ ಸಮ್ಮಾನಿತರನ್ನು ಪರಿಚಯಿಸಿ ದರು. ಚಲನಚಿತ್ರ ಮತ್ತು ರಂಗನಟ ಜಿ. ಕೆ. ಕೆಂಚನಕೆರೆ ಅವರು ನಿರ್ವಹಿಸಿ ವಂದಿಸಿದರು. ಬ್ರಹ್ಮಶ್ರೀ ಶಂಕರ ನಾರಾಯಣ ತಂತ್ರಿ, ಗುರು ಶಂಕರ್‌ ಭಟ್‌, ಶಂಕರ್‌ ಗುರು ಭಟ್‌ ಅವರ ಪೌರೋಹಿತ್ಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು. ಸುರೇಶ್‌ ಭಟ್‌ ಕುಂಟಾಡಿ ಇವರಿಂದ ದೇವರ ಬಲಿ ಉತ್ಸವ  ಮೂರ್ತಿಯೊಂದಿಗೆ ಕಟ್ಟೆಪೂಜೆ ನಡೆಯಿತು. ದೇವಿ ಪಾತ್ರಿ ಸಿ.ಎನ್‌. ಪೂಜಾರಿ ಅವರಿಂದ ದೇವಿ ಆವೇಶ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಕ್ಕಳಿಂದ ನೃತ್ಯ ವೈಭವ, ಸಿ. ಎನ್‌. ಪೂಜಾರಿ ಅವರ ಸೇವಾರ್ಥಕವಾಗಿ ಗುರುನಾರಾಯಣ ಯಕ್ಷಗಾನ ಮಂಡಳಿಯವರಿಂದ ಶಬರಿಮಲೆ ಶ್ರೀ ಅಯ್ಯಪ್ಪ ಯಕ್ಷಗಾನ ಬಯಲಾಟ ಪ್ರದರ್ಶನ ಗೊಂಡಿತು. ಅಪರಾಹ್ನ ಹಾಗೂ ರಾತ್ರಿ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನೆರವೇರಿತು. ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 

Advertisement

ಚಿತ್ರ-ವರದಿ : ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next