ಮುಂಬಯಿ: ಶ್ರೀ ದುರ್ಗಾಪರಮೇಶ್ವರಿ ಭಕ್ತವೃಂದ ಚಾರಿಟೆಬಲ್ ಟ್ರಸ್ಟ್ ಇದರ ನವರಾತ್ರಿ ಉತ್ಸವವು ಭಾಯಂದರ್ ಪೂರ್ವದ ಇಂದ್ರಲೋಕ ಫೇಸ್-2 ರ ಶ್ರೀ ವಿಜಯ ಅಪಾರ್ಟ್‌ಮೆಂಟ್‌ನಲ್ಲಿರುವ ಮಂದಿರದಲ್ಲಿ ಸೆ. 21ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡಿತು.
ಸೆ. 24ರಂದು ನಡೆದ ಸಾಂಸ್ಕೃತಿಕ, ಸಮ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಡಹಾಣೂ ಬಂಟ್ಸ್‌ನ ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ ಅವರು ವಹಿಸಿ ಮಾತನಾಡಿ, ಪ್ರಕೃತಿಯ ಪ್ರತಿಯೊಂದು ಚರಾಚರ ವಸ್ತುಗಳು ಭಗವಂತನಿಗೆ ಸೇರಿದ್ದು, ಆತನ ವಸ್ತುವನ್ನು ಆತನೆಂದೂ ಸ್ವೀಕರಿಸಲಾರ. ಧನ ಕನಕಾದಿಗಳ ಆವಶ್ಯಕತೆ ಬೇಕಾಗಿಲ್ಲ. ಯಾವುದೇ ಕಂಡಿಶನ್ ಮೇಲೆ ಭಗವಂತನನ್ನು ಪೂಜಿಸದೆ ನಿರ್ಮಲ ಹೃದಯದಿಂದ ಆರಾಧಿಸಿ ಎಂದು ನುಡಿದು ಶುಭ ಹಾರೈಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಾಧವ ಸುವರ್ಣ, ಸದಾಶಿವ ಎ. ಕರ್ಕೇರ ದಂಪತಿ ಮತ್ತು ಸಂಪತ್ ಶೆಟ್ಟಿ ಅವರನ್ನು ಕ್ಷೇತ್ರದ ಧರ್ಮದರ್ಶಿ ಹರೀಶ್ ಎಂ. ಸಾಲ್ಯಾನ್, ವಿರಾರ್ ಶಂಕರ್ ಶೆಟ್ಟಿ, ಭಾಸ್ಕರ ಶೆಟ್ಟಿ, ದೇವಕಿ ಸಾಲ್ಯಾನ್ ಕೆರಮ ಮಾಗಂದಡಿ ದಯಾನಂದ ಶೆಟ್ಟಿ, ಮನೋಹರ ಕರ್ಕೇರ ಅವರು ಸಮ್ಮಾನಿಸಿದರು.
ಚಂದ್ರಶೇಖರ ಶೆಟ್ಟಿ ಅವರು ಸಮ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಪದಾಧಿಕಾರಿಗಳಾದ ವಾಸುದೇವ ಪೂಜಾರಿ, ಲೀಲಾಧರ ಸನಿಲ್ ಸಾಂತೂರು, ಸದಾನಂದ ಕುಮಾರ್ ಸಾಲ್ಯಾನ್, ಜಯಪ್ರಕಾಶ್ ಕರ್ಕೇರ, ಗಣೇಶ್ ದೇವಾಡಿಗ, ರವಿ ಡಿ. ಪೂಜಾರಿ, ಕರುಣಾಕರ ಎಂ. ಸಾಲ್ಯಾನ್, ಲಕ್ಷ್ಮೀ ಎಚ್. ಸಾಲ್ಯಾನ್, ಚಂದ್ರಶೇಖರ ಕುಲಾಲ್, ಮಹಿಳಾ ಸದಸ್ಯೆಯರು, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಭಜನ ಮಂಡಳಿ, ಯುವ ವಿಭಾಗ, ಶ್ರೀ ಅಯ್ಯಪ್ಪ ಭಕ್ತವೃಂದದ ಸದಸ್ಯರು ಸಹಕರಿಸಿದರು.
ಟ್ರಸ್ಟಿ ಹಾಗೂ ಧರ್ಮದರ್ಶಿ ಹರೀಶ್ ಎಂ. ಸಾಲ್ಯಾನ್ ಅವರ ಪೌರೋಹಿತ್ಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು, ಶ್ರೀದೇವಿ ಆವೇಶ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ಸಾಂತಾಕ್ರೂಜ್ ಇದರ ಕಲಾವಿದರಿಂದ ವೈಷ್ಣವಿ ದೇವಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಚಿತ್ರ-ವರದಿ: ರಮೇಶ್ ಅಮೀನ್