Advertisement
ಕುಂಜಾರುಗಿರಿ ದೇಗುಲದಲ್ಲಿ ಈ ಬಾರಿ ಸಿಂಹ ಮಾಸದ ಆ. 18, ಆ. 25, ಸೆ. 1, ಸೆ. 8 ಮತ್ತು ಸೆ. 15ರ ಶುಕ್ರವಾರಗಳಂದು ಸೋಣ ಶುಕ್ರವಾರವನ್ನು ಆಚರಿಸಲಾಗುತ್ತದೆ. ಸೋಣ ಶುಕ್ರವಾರಗಳಂದು ದೇಗುಲವನ್ನು ಸಂದರ್ಶಿಸುವ ಭಕ್ತಾದಿಗಳಿಗೆ ದೇಗುಲದ ವತಿಯಿಂದಲೇ ಮಧ್ಯಾಹ್ನ ಅನ್ನಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಏಕಾದಶಿ ಬಂದ ಶುಕ್ರವಾರದಂದು ಫಲಾಹಾರದ ವ್ಯವಸ್ಥೆಯಿರುತ್ತದೆ.
ಕುಂಜಾರು ಶ್ರೀ ದುರ್ಗಾ ದೇವಸ್ಥಾನದ ದಕ್ಷಿಣದ ಮಗ್ಗುಲಲ್ಲಿ ಶ್ರೀ ಪರಶುರಾಮರಿಂದ ಅಧಿಷ್ಠಿತವಾದ ಪರಶುರಾಮ ಬೆಟ್ಟ, ಪೂರ್ವ ದಿಕ್ಕಿನಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯರು ಅವತರಿಸಿರುವ ಮತ್ತು ತಮ್ಮ ಬಾಲ್ಯವನ್ನು ಕಳೆದಿರುವ ಪಾಜಕ ಕ್ಷೇತ್ರವಿದೆ. ಈ ಬಾರಿ ಪಲಿಮಾರು ಶೀÅಗಳಿಂದ ಪ್ರತಿಷ್ಠಾಪಿತಗೊಂಡಿರುವ 32 ಅಡಿ ಎತ್ತರದ ಆಚಾರ್ಯ ಮಧ್ವರ ಏಕಶಿಲಾ ವಿಗ್ರಹವೂ ಸಂದರ್ಶನ ಯೋಗ್ಯವಾಗಿದೆ.
Related Articles
ಭೂಮಟ್ಟಕ್ಕಿಂತ 100 ಅಡಿಗಳಿಗಿಂತಲೂ ಎತ್ತರದಲ್ಲಿರುವ ಕುಂಜಾರಿನ ದುರ್ಗಾದೇವಿ ದೇವಸ್ಥಾನವನ್ನು ಸಾಂಪ್ರದಾಯಿಕ ಶೈಲಿಯಲ್ಲಿ ತಲುಪಬೇಕಾದರೆ 257 ಮೆಟ್ಟಿಲುಗಳನ್ನು ಏರಿಕೊಂಡು ಬರಬೇಕಿದೆ. ಬೆಟ್ಟದ ನಾಲ್ಕು ಮಗ್ಗಲುಗಳಲ್ಲಿಯೂ ಮೇಲೆ ಬರಲು ದಾರಿಗಳಿವೆಯಾದರೂ ದಕ್ಷಿಣ ಬದಿಯಲ್ಲಿ ಕಾಲ್ನಡಿಗೆಯಿಂದ ಮೇಲೇರಲು ಅನುಕೂಲವಾಗುವಂತೆ ಮೆಟ್ಟಿಲುಗಳಿವೆ. ರಸ್ತೆ ಮೂಲಕ ಕ್ಷೇತ್ರ ಸಂದರ್ಶಿಲೂ ಅವಕಾಶಗಳಿವೆ.
Advertisement
ತೀರ್ಥ ಮತ್ತು ಗುಹಾ ಸನ್ನಿಹಿತವಾದ ಕ್ಷೇತ್ರ ಹಸಿರು ಮರಗಿಡಗಳಿಂದ ಕಂಗೊಳಿಸುತ್ತಾ ಭಕ್ತ ಜನರನ್ನು ಕೈ ಬೀಸಿ ಕರೆಯುವ ಈ ನಿಸರ್ಗ ರಮಣೀಯ ಬೆಟ್ಟದ ಸುತ್ತಲಿನ ನಾಲ್ಕು ದಿಕ್ಕುಗಳಲ್ಲಿ ಪರಶುರಾಮರಿಂದ ನಿರ್ಮಿತವಾದ ಪರಶು, ಧನು, ಬಾಣ, ಗದಾ ತೀರ್ಥಗಳಿದ್ದು, ಇವು ಸಕಲ ಪಾಪ ಪರಿಹಾರಕಗಳಾಗಿವೆ. ದುರ್ಗಾಬೆಟ್ಟದಿಂದ ಕೆಳಗೆ ಇರುವ ಪರಶುರಾಮ ಗುಹೆಯಲ್ಲಿ ಇಂದಿಗೂ ಶ್ರೀ ಪರಶುರಾಮರು ಸನ್ನಿಹಿತನಾಗಿರುವರೆಂಬ ನಂಬಿಕೆಯಿದೆ. ದುರ್ಗೆಯ ದರ್ಶನಕ್ಕೆ ಸೋಣ
ತಿಂಗಳು ಪ್ರಶಸ್ತ ಕಾಲ
ಜ್ಯೋತಿಷ್ಯ ಶಾಸ್ತ್ರದಲ್ಲಿ ರವಿಯು ಗ್ರಹರಾಜನಾಗಿ, ಆತ್ಮ ಸ್ವರೂಪಿಯಾಗಿ ಆರೋಗ್ಯ ಮತ್ತು ಸಂಪತ್ತು ಪ್ರದಾಯಕನಾಗಿ ಕೊಂಡಾಡಲ್ಪಡುತ್ತಾನೆ. ಸಿಂಹ ರಾಶಿಯು ಅವನಿಗೆ ಸ್ವ ಕ್ಷೇತ್ರವಾಗಿದ್ದು, ದೇವಾಲಯವು ಅವನ ಪುಣ್ಯ ಭೂಮಿಯೆನಿಸಲಿದೆ. ಗ್ರಹ ಶ್ರೇಷ್ಠನಾದ ರವಿಯು ಸಿಂಹ ರಾಶಿಯಲ್ಲಿ ಸಂಚರಿಸುವ ಈ ಸಮಯವು ಭಗವಂತನನ್ನು ಪೂಜಿಸಲು ಅತ್ಯಂತ ಪುಣ್ಯಪ್ರದವೆನಿಸಿದ್ದು, ಲಕ್ಷ್ಮೀ ದೇವಿಯು ಶುಕ್ರವಾರದ ಅಧಿಪತಿಯೂ ಆಗಿರುವುದರಿಂದ ದುರ್ಗಾಲಯಗಳ ಸಂದರ್ಶನಕ್ಕೆ ಸೋಣ ಶುಕ್ರವಾರ ಅತ್ಯಂತ ಪ್ರಾಶಸ್ತÂ ಕಾಲ ಎಂಬ ನಂಬಿಕೆಯೂ ಇದೆ. ಸೋಣ ಶುಕ್ರವಾರ
ಸೌಭಾಗ್ಯ ಬೇಡುವ ವಾರ
ಸಿಂಹ ಮಾಸದ ಶುಕ್ರವಾರಗಳಂದು ಕುಂಜಾರುಗಿರಿಗೆ ಭೇಟಿ ನೀಡುವ ಸಹಸ್ರಾರು ಭಕ್ತರು ದುರ್ಗೆಯ ದರ್ಶನ ಮತ್ತು ಸೇವೆೆಗೆ„ದು ಕೃತಾರ್ಥರೆನಿಸುವರು. ವಿಶೇಷವಾಗಿ ಸ್ತ್ರೀಯರು ದುರ್ಗೆಯ ಸನ್ನಿ ಧಿಯಲ್ಲಿ ಅರಶಿನ ಕುಂಕುಮ, ಬಳೆಗಳನ್ನು ಸಮರ್ಪಿಸುತ್ತಾರೆ. ತಮ್ಮ ಹಣೆಗೆ ಕುಂಕುಮ ಹಚ್ಚಿ, ಕೈಗಳನ್ನು ಬಳೆಗಳಿಂದ ಅಲಂಕರಿಸಿಕೊಂಡು ಸೌಭಾಗ್ಯವನ್ನು ಬೇಡಿಕೊಳ್ಳುತ್ತಾರೆ. ಪಡುವಣ ತೀರದಿಂದ ಹಿಡಿದು ಮೂಡಣದವರೆಗಿನ 16 ಮಾಗಣೆಯ ಭಕ್ತಾದಿಗಳು ಕುಂಜಾರಮ್ಮನನ್ನು ಆರಾಧ್ಯ ದೇವತೆಯನ್ನಾಗಿ ಪೂಜಿಸಿಕೊಂಡು ಬರುತ್ತಿದ್ದು, ಅದಮಾರು ಮಠಾಧೀಶರಾದ ಶೀÅ ವಿಶ್ವಪ್ರಿಯ ತೀರ್ಥ ಶೀÅಪಾದರ ನೇತೃತ್ವದಲ್ಲಿ ಕುಂಜಾರಮ್ಮನ ಸನ್ನಿಧಾನವು ಸಮಗ್ರ ಜೀರ್ಣೋದ್ಧಾರದೊಂದಿಗೆ ಕಂಗೊಳಿಸುತ್ತಿದೆ. ಭಕ್ತ ಜನರ ದುರಿತವನ್ನು ಪರಿಹರಿಸುವ, ಸೌಭಾಗ್ಯ, ಆರೋಗ್ಯ ಸಂಪದವನ್ನು ಕರುಣಿಸುವ, ಶರಣು ಬಂದವರನ್ನು ಪೊರೆಯುವ ಅಭಯ ಪ್ರದಾಯಕಳಾಗಿ, ಹರಿಯ ಆಜ್ಞೆಯಂತೆ ಮೋಕ್ಷ ಪ್ರದಾಯಕಿಯಾಗಿರುವ ಕುಂಜಾರಮ್ಮನ ಸನ್ನಿಧಾನದಲ್ಲಿ ಸೋಣ ತಿಂಗಳಲ್ಲಿ ಕ್ಷೇತ್ರ ಸಂದರ್ಶಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ಸಿದ್ಧತೆಗಳೂ ನಡೆದಿವೆ. ದುರ್ಗೆಗೆ ಸಮರ್ಪಿತವಾಗುವ ಸೇವೆಗಳು
ಕುಂಜಾರು ಬೆಟ್ಟದ ಮೆಟ್ಟಿಲುಗಳನ್ನೇರಿ ಬರುವ ಭಕ್ತಾದಿಗಳು ದುರ್ಗೆಗೆ ಕುಂಕುಮಾರ್ಚನೆ, ಕಾರ್ತಿಕ ಪೂಜೆ, ಹೂವಿನ ಪೂಜೆ ಇತ್ಯಾದಿ ಸೇವೆಗಳನ್ನು ಅರ್ಪಿಸಿ ಧನ್ಯತೆಯನ್ನು ಪಡೆಯುವರು. ಸೌಭಾಗ್ಯದ ಪ್ರತೀಕವಾಗಿ ಕರಿಮಣಿ – ತಾಳಿ ಸಮರ್ಪಣೆ, ಸಂತತಿಯ ಅಪೇಕ್ಷಯುಳ್ಳ ದಂಪತಿ ಮಗು ಸಹಿತ ಬೆಳ್ಳಿಯ ತೊಟ್ಟಿಲ ಸೇವೆ, ಉಬ್ಬಸ ಖಾಯಿಲೆ ನಿವಾರಣೆಗಾಗಿ ನಾರಿನ
ಹಗ್ಗಗಳ ಸಮರ್ಪಣೆ, ವಿಶೇಷ ವ್ಯಾ ಧಿಯುಳ್ಳವರು ತಮ್ಮಷ್ಟು ಉದ್ದದ ಬೆಳ್ಳಿಯ ಸರಿಗೆ ಸಮರ್ಪಣೆ, ವಿವಾಹಾಪೇಕ್ಷಿತರು ಪಟ್ಟೆ ಸೀರೆಗಳನ್ನು ಸಮರ್ಪಿಸುವುದರೊಂದಿಗೆ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಡುವಂತೆ ದುರ್ಗೆಗೆ ಮೊರೆಯಿಡುತ್ತಾರೆ. – ರಾಕೇಶ್ ಕುಂಜೂರು