Advertisement
ವಿದ್ಯಾರ್ಥಿ ನಿಲಯದಲ್ಲಿ ಕೊಳವೆ ಬಾವಿ ನೀರನ್ನು ಸ್ನಾನಕ್ಕೆ ಬಳಸಿದರೆ, ಗ್ರಾ.ಪಂ. ನೀರನ್ನು ಫಿಲ್ಟರ್ ಮಾಡಿ ಕುಡಿಯಲು ಬಳಸಲಾಗುತ್ತಿದೆ.
ವಿದ್ಯಾರ್ಥಿನಿಲಯದಲ್ಲಿ ಬಾವಿ ಇದ್ದು ಅದರ ನೀರು ಸಾಲದಾದ್ದರಿಂದ 4 ವರ್ಷ ಹಿಂದೆ ಬೋರ್‌ವೆಲ್ ತೋಡಲಾಗಿತ್ತು. ಈಗ ಇದಕ್ಕೆ ಸಂಪೂರ್ಣ ತುಕ್ಕು ಹಿಡಿದಿದ್ದು, 4 ತಿಂಗಳಿನಿಂದ ಬಾಲಕರಿಗೆ ತುರಿಕೆ ಕಂಡುಬಂದಿದೆ. ಕಾರಣಗಳೇನಿರಬಹುದು?
ತುಕ್ಕು ಹಿಡಿದ ಕೊಳವೆ ಬಾವಿ ಪೈಪ್, ಗಡಸು ನೀರಿನ ಕಾರಣಗಳು ಒಂದೆಡೆಯಾದರೆ, ಯಾವುದೋ ಬಾಲಕನಿಗೆ ಕಜ್ಜಿ ಉಂಟಾಗಿ ಹರಡುವ ಸಾಧ್ಯತೆ ಇದೆ ಎಂದುವೈದ್ಯರು ಹೇಳುತ್ತಿದ್ದಾರೆ. ಫಂಗಲ್ ಇನ್‌ಫೆಕ್ಷನ್‌ನಿಂದ ಈ ರೀತಿ ಆಗುವ ಸಾಧ್ಯತೆ ಇದ್ದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ.
Related Articles
4 ತಿಂಗಳಿನ ಹಿಂದೆ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ನೀರಿನಲ್ಲಿ ತೊಂದರೆ ಇರಲಿಲ್ಲ. ಕಜ್ಜಿ ಮುಂದುವರಿದಿದ್ದರೂ ಅದರ ನಿಖರ ಕಾರಣ ಪತ್ತೆ ಹಚ್ಚುವ ಗೋಜಿಗೆ ಸಂಬಂಧಪಟ್ಟವರು ಹೋಗಲಿಲ್ಲ. ಈಗ ಹಲವು ಮಕ್ಕಳಲ್ಲಿ ಕಜ್ಜಿ ಕಾಣಿಸಿಕೊಂಡಿದೆ.
Advertisement
ಕೊಳವೆ ಬಾವಿ ನೀರೇ ಕಾರಣತುಕ್ಕು ಹಿಡಿದ ಕೊಳವೆ ಬಾವಿಯ ನೀರಿನಲ್ಲಿ ಸ್ನಾನ ಮಾಡುವುದರಿಂದ ಹಲವರಲ್ಲಿ ತುರಿಕೆ ಕಾಣಿಸಿಕೊಂಡಿದೆ. ಒಂದೇ ರೀತಿಯಲ್ಲಿ ಕಜ್ಜಿ ಕಾಣಿಸಿದ್ದು ಭಯವಾಗುತ್ತದೆ. ನೀರಿನ ಸಮಸ್ಯೆ ಬಿಟ್ಟರೆ ಹಾಸ್ಟೆಲ್‌ನಲ್ಲಿ ಬೇರೆ ಏನೂ ಸಮಸ್ಯೆ ಇಲ್ಲ.
– ಹೆಸರು ಹೇಳಲಿಚ್ಛಿಸದ ಹಾಸ್ಟೆಲ್ ಬಾಲಕ ಮತ್ತೆ ಪರೀಕ್ಷೆಗೆ ಸೂಚನೆ
ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಕೊಳವೆ ಬಾವಿ ನೀರು ಕಾರಣವಾಗಿರುವ ಬಗ್ಗೆ ಮಾಹಿತಿ ಇದ್ದು ಮತ್ತೆ ನೀರು ಪರೀಕ್ಷೆ ಮಾಡಿಸಲು ವಾರ್ಡನ್‌ಗೆ ಸೂಚಿಸಲಾಗಿದೆ. ಬಾಲಕರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
-ಹಾಕಪ್ಪ ಲಮಾಣಿ,
ಜಿಲ್ಲಾ ಹಿಂ. ವರ್ಗಗಳ ಕಲ್ಯಾಣಾಧಿಕಾರಿ ಗ್ರಾ.ಪಂ. ಸಹಕಾರ ಬೇಕು
ಹಿಂದೆ ಹಾಸ್ಟೆಲ್ ವಾರ್ಡನ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. ನೂರು ಮಕ್ಕಳಿಗೆ ನೀರಿನ ಆವಶ್ಯಕತೆ ಇದ್ದು ಗ್ರಾ.ಪಂ. ಸಹಕಾರ ಅತ್ಯಗತ್ಯವಾಗಿದೆ. ಗ್ರಾ.ಪಂ. ಸಾಕಷ್ಟು ನೀರು ಪೂರೈಸಿದರೆ ಅಥವಾ ನೀರಿಗೆ ಬೇರೆ ವ್ಯವಸ್ಥೆ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ.
-ಗಿರಿಧರ್ ಗಾಣಿಗ,
ತಾ| ವಿಸ್ತರಣಾಧಿಕಾರಿ