ತೆಕ್ಕಟ್ಟೆ: ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇಗುಲದಲ್ಲಿ ಲೋಕ ಕಲ್ಯಾಣಾರ್ಥವಾಗಿ ಡಿ.28 ಶತಚಂಡಿಕಾ ಯಾಗವು ಸಕಲ ಧಾರ್ಮಿಕ ವಿಧಿ ವಿಧಾನಗಳು ಶೃಂಗೇರಿ ಶ್ರೀಗಳವರ ಮಾರ್ಗದರ್ಶನದೊಂದಿಗೆ ಶ್ರೀ ಕೆ.ಎಸ್.ಲಕ್ಷ್ಮೀನಾರಾಯಣ ಸೋಮಯಾಜಿ ಕಮ್ಮರಡಿ ಹಾಗೂ ಅರ್ಚಕರ ನೇತೃತ್ವದಲ್ಲಿ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಕೇರಳ ಪಯ್ಯನ್ನೂರಿನ ಪ್ರಸಿದ್ಧ ಜೋಯಿಸರಾದ ಮಾಧವನ್ ಪೊದುವಾಳರು, ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇಗುಲ ಧರ್ಮದರ್ಶಿ ದೇವರಾಯ ಮಂಜುನಾಥ ಶೇರೆಗಾರ , ಅನಿತಾ ಶೇರೆಗಾರ, ಪುರುಷೋತ್ತಮ್ ಭಟ್ ಮುಂಬಯಿ, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ದೇವಳದ ಹಿರಿಯ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ, ಪ್ರಧಾನ ಅರ್ಚಕ ಅನಂತ ಪುರಾಣಿಕ್ , ದೇಗುಲದ ವ್ಯವಸ್ಥಾಪಕ ರಾಜಶೇಖರ ಹೆಗ್ಡೆ , ಗಂಗೊಳ್ಳಿ ಹೊಸಮನೆ ಕುಟುಂಬಸ್ಥರು, ಕೀರ್ತಿಶೇಷ ಗೌರಮ್ಮ ಮತ್ತು ಮಂಜುನಾಥ ಶೇರೆಗಾರ ಕುಟುಂಬಿಕರು ಹಾಗೂ ಅಪಾರ ಭಕ್ತರು ಉಪಸ್ಥಿತರಿದ್ದರು.