Advertisement
ಸೇವಂತಿಗೆ ಪ್ರಿಯ ಬ್ರಹ್ಮಲಿಂಗೇಶ್ವರ ಮಾರಣಕಟ್ಟೆ ಮಕರ ಸಂಕ್ರಮಣ ದಂದು ಇಲ್ಲಿಗೆ ಆಗಮಿಸುವ ಭಕ್ತರು ಹೊರೆ ಕಾಣಿಕೆಯಾಗಿ ಬುಟ್ಟಿಯಲ್ಲಿ ಸೇವಂತಿಗೆ ಹಾಗೂ ಸಿಂಗಾರ ಹೂವನ್ನು ಶ್ರೀ ದೇವರಿಗೆ ಸಮರ್ಪಿಸುವ ಪದ್ಧತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಸರತಿ ಸಾಲಿನಲ್ಲಿ ತಲೆಯಲ್ಲಿ ಸೇವಂತಿಗೆ ಬುಟ್ಟಿ ಹೊತ್ತ ಮಹಿಳೆಯರು ಹಾಗೂ ಪುರುಷರ ಸಾಲು ಈ ವರ್ಷವೂ ಕೂಡ ಉದ್ದಕ್ಕೂ ಕಂಡುಬಂತು.
18 ಸಾವಿರಕ್ಕೂ ಮಿಕ್ಕಿ ಭಕ್ತರು ಈ ದಿನ ಅನ್ನಪ್ರಸಾದ ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಿರುತ್ತಾರೆ. ವಕೀಲ ಕುಸುಮಾಕರ ಶೆಟ್ಟಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಸಹಿತ ಗ್ರಾಮಸ್ಥರು ದೂರ ದೂರಿನ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಸೇವಂತಿಗೆ ಹೆಚ್ಚಿದ ಬೇಡಿಕೆ
ಜಾತ್ರೆಯಲ್ಲಿ ಬ್ರಹ್ಮಲಿಂಗೇಶ್ವರನಿಗೆ ಅತ್ಯಂತ ಪ್ರಿಯವಾಗಿರುವ ಸೇವಂತಿಗೆ ಹೂವು ಹಾಗೂ ಸಿಂಗಾರದ ಹೂವಿಗೆ ಬೇಡಿಕೆ ಹೆಚ್ಚಿದ್ದು ಹೂವಿನ ಅಂಗಡಿಗಳ ಎದುರು ಭಕ್ತರ ದೊಡ್ಡ ಸಾಲು ಕಂಡುಬಂತು.
Related Articles
ಚಿಕ್ಕು ಅಮ್ಮನವರು ಮಕರ ಸಂಕ್ರಮಣದ ಹಿಂದಿನ ಧನು ಸಂಕ್ರಮಣದ ಅನಂತರ ನದಿ ದಾಟಿ ತೆಂಕು ದಿಕ್ಕಿಗೆ ಸಾಗಿ (ಉಡುಪಿ ತಾಲೂಕು) ಆ ಭಾಗದ ಗ್ರಾಮಸ್ಥರನ್ನು ಮಕರ ಸಂಕ್ರಮಣಕ್ಕೆ ಆಹ್ವಾನಿಸುವ ಪದ್ದತಿಯು ಇಂದಿಗೂ ರೂಢಿಯಲ್ಲಿದೆ.
Advertisement
ಮಕರ ಸಂಕ್ರಮಣದ ದಿನ ಪೂರ್ವಾಹ್ನ 11 ಗಂಟೆಗೆ ನದಿ ದಾಟಿ ಪುರ ಪ್ರವೇಶ ಮಾಡಿದ ಚಿಕ್ಕು ದೇವರ ಪಾತ್ರಿಯನ್ನು ಧಾರ್ಮಿಕ ಪರಂಪರೆಯಂತೆ ಹೊತ್ತು ನದಿ ದಾಟಿಸಿ ಪುರ ಪ್ರವೇಶ ಮಾಡಿದ ಅನಂತರ ಮಕರ ಸಂಕ್ರಮಣ ಉತ್ಸವದ ಧಾರ್ಮಿಕ ಕಾರ್ಯಗಳು ಆರಂಭಗೊಂಡಿತು.