Advertisement
ಸಮುದ್ರ ಮಟ್ಟಕ್ಕಿಂತ 5 ಸಾವಿರಕ್ಕಿಂತಲೂ ಹೆಚ್ಚು ಎತ್ತರದಲ್ಲಿರುವ ಬಿಳಿಗಿರಿರಂಗನಬೆಟ್ಟದ ದೇಗುಲ ದೊಡ್ಡ ಬಿಳಿಕಲ್ಲು ಗುಡ್ಡದ ಮೇಲಿರುವ ಕಮರಿಯಲ್ಲಿ ಸ್ಥಾಪಿತವಾಗಿದೆ. ದೇಗುಲವನ್ನು ಹೊಸದಾಗಿ ಜೀರ್ಣೋದ್ಧಾರ ಮಾಡಲಾಗಿದೆ. ದೇಗುಲದ ಬಳಿಪಕ್ಕದಲ್ಲಿರುವ ಕಮರಿಯಲ್ಲಿ ಪ್ರಾಕೃತಿಕ ಸೊಬಗನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಬರುವ ಪ್ರತಿಭಕ್ತರು ಹಾತೊರೆಯುತ್ತಾರೆ. ಏಕೆಂದರೆ ಇದರ ಮೇಲೆ ನಿಂತರೆ ಇಡೀ ಕಾನನದ ಸೌಂದರ್ಯವನ್ನು ಸವಿಯಬಹುದು. ಈ ನಿಟ್ಟಿನಲ್ಲಿ ಇಲ್ಲಿಗೆ ಬರುವ ಪ್ರತಿ ಪ್ರವಾಸಿಗರ ಮೊದಲ ಆಯ್ಕೆ ಕಮರಿಯಾಗಿರುತ್ತದೆ. ಆದರೆ, ಇಲ್ಲಿಗೆ ಮೂಲ ಸೌಲಭ್ಯವನ್ನು ನೀಡುವಲ್ಲಿ ಸಂಬಂಧಪಟ್ಟ ಇಲಾಖೆ ಸೋತಿದೆ.
Related Articles
Advertisement
ಬೆಟ್ಟಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ದೇಗುಲ ದರ್ಶನ, ಪ್ರಾಕೃತಿಕ ಸೊಬಗನ್ನು ಸವಿಯಲು ಬರುತ್ತಾರೆ. ಇಲ್ಲಿಗೆ ಭಕ್ತರು ಬರುವುದರಿಂದ ದೇಗುಲಕ್ಕೆ ಆದಾಯವೂ ಬರುತ್ತದೆ. ಆದರೆ, ಇಲ್ಲಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸಂಬಂಧಪಟ್ಟ ಇಲಾಖೆ ಸೋತಿದೆ. ಈಗಲಾದರೂ ಇಲ್ಲಿಗೆ ಮೂಲ ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕು. ● ಶ್ವೇತಾ, ಪ್ರವಾಸಿಗರು, ಮೈಸೂರು.
ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶ ಪ್ರಸಿದ್ಧ ಪ್ರವಾಸಿತಾಣವಾಗಿದೆ. ಕಮರಿ ಮೇಲೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಬೇಕು, ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಕೂಡಲೇ ಕ್ರಮ ವಹಿಸಬೇಕು. ● ಮನು, ಭಕ್ತ, ಯಳಂದೂರು.
ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಸಂಬಂಧಪಟ್ಟ ಇಲಾಖೆಗೆ ಪತ್ರವನ್ನು ಬರೆಯಲಾಗಿದೆ. ಇಲ್ಲಿಗೆ ಭಕ್ತರು ಕೊಡುಗೆಯ ರೂಪದಲ್ಲಿ ಕಾಂಕ್ರೀಟ್ ಬೆಂಚ್‌ಗಳನ್ನು ನೀಡಿದ್ದಾರೆ. ಆದಷ್ಟು ಬೇಗ ಇದನ್ನು ಅಳವಡಿಸಿ ಪ್ರವಾಸಿಗರು ಕುಳಿತುಕೊಳ್ಳಲು ಅನುವು ಮಾಡಿಕೊಡಲಾಗುವುದು. ● ಮೋಹನ್‌ಕುಮಾರ್, ಇಒ, ಬಿಳಿಗಿರಿರಂಗನಾಥಸ್ವಾಮಿ ದೇಗುಲ.
– ಫೈರೋಜ್ ಖಾನ್