Advertisement

20ಕ್ಕೆ ಶ್ರೀ ಬನಶಂಕರಿ ದೇವಸ್ಥಾನ ಉದ್ಘಾಟನೆ

03:04 PM Aug 14, 2018 | |

ದಾವಣಗೆರೆ: ಹಳೇ ಬೇತೂರು ರಸ್ತೆ ಶಾಸ್ತ್ರಿ ಕಣದಲ್ಲಿ ಪುನರ್‌ ನಿರ್ಮಾಣಗೊಳಿಸಿರುವ ಶ್ರೀ ಬನಶಂಕರಿ ದೇವಸ್ಥಾನದ ಉದ್ಘಾಟನೆ, ದೇವಿ ಪ್ರತಿಷ್ಠಾಪನೆ ಹಾಗೂ ರಜತ ಮಹೋತ್ಸವ ಸಮಾರಂಭ ಆ. 20 ರಂದು ನಡೆಯಲಿದೆ ಎಂದು ಶ್ರೀ ಬನಶಂಕರಿ ದೇವಿ ದೇವಾಂಗ ಸಮಾಜದ ಗೌರವ ಅಧ್ಯಕ್ಷ ಬಸವರಾಜಪ್ಪ ಸಿದ್ದಪ್ಪ ಮಂಡಕ್ಕಿ ತಿಳಿಸಿದ್ದಾರೆ.

Advertisement

ಬಹಳಷ್ಟು ಶಿಥಿಲವಾಗಿದ್ದ ದೇವಸ್ಥಾನವನ್ನು 1993ರ ಜ. 29ರಂದು ಕೆಡವಲಾಗಿತ್ತು. 40-45 ಲಕ್ಷ ವೆಚ್ಚದಲ್ಲಿ ದೇವಸ್ಥಾನವನ್ನು ಪುನರ್‌ ನಿರ್ಮಿಸಲಾಗಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ದೇವಸ್ಥಾನ ಉದ್ಘಾಟನೆ ನೆರವೇರಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆ. 17ರಂದು ಬೆಳಗ್ಗೆ 7.30ಕ್ಕೆ ರೇಣುಕ ಮಂದಿರದಿಂದ ದೇವಸ್ಥಾನದವರೆಗೆ ಕುಂಭಮೇಳದೊಂದಿಗೆ ಶ್ರೀ ಬನಶಂಕರಿ
ದೇವಿ ಮೆರವಣಿಗೆ, 18ರಂದು ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಹೋಮ-ಹವನ ಜರುಗಲಿದೆ. 19ರಂದು ಭಾನುವಾರ ಬೆಳಗ್ಗೆ 8 ರಿಂದ ಹಂಪಿ ಹೇಮಕೂಟ ಗಾಯತ್ರಿ ಪೀಠದ ಶ್ರೀ ದಯಾನಂದಪುರಿ ಸ್ವಾಮೀಜಿ ಶ್ರೀ ಬನಶಂಕರಿ ದೇವಿ ಮೂರ್ತಿ ಪ್ರತಿಷ್ಠಾಪಿಸುವರು. 

ತುಮ್ಮಿನಕಟ್ಟೆಯ ಗುರು ಮಾರ್ಕಂಡೇಶ್ವರ ಪದ್ಮಶಾಲಿ ಗುರುಮಠ ಮಹಾಸಂಸ್ಥಾನದ ಶ್ರೀ ಪ್ರಭುಲಿಂಗ ಸ್ವಾಮೀಜಿ
ಕಳಸಾರೋಹಣ ನೆರವೇರಿಸುವರು ಎಂದು ತಿಳಿಸಿದರು. ಸೋಮವಾರ ಬೆಳಗ್ಗೆ 9.30ಕ್ಕೆ ದೇವಾಂಗ ಸಮಾಜದ ಮಕ್ಕಳಿಗೆ ಸಾಮೂಹಿಕ ಉಪನಯನ ನಡೆಯಲಿದೆ. ಬೆಳಗ್ಗೆ 11ಕ್ಕೆ ಧರ್ಮಸಭೆಯಲ್ಲಿ ಶ್ರೀ ದಯಾನಂದಪುರಿ ಸ್ವಾಮೀಜಿ , ಶ್ರೀ ಪ್ರಭುಲಿಂಗ ಸ್ವಾಮೀಜಿ, ಶ್ರೀ ನಾಲ್ಮಡಿ ನೀಲಕಂಠ ಪಟ್ಟದಾರ್ಯ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ
ಜಡೇಸಿದ್ದೇಶ್ವರ ಸ್ವಾಮೀಜಿ ಇತರರು ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌,
ನೇಕಾರ ಒಕ್ಕೂಟದ ರಾಜ್ಯ ಅಧ್ಯಕ್ಷ ಎಂ.ಡಿ. ಲಕೀನಾರಾಯಣ, ದೇವಾಂಗ ಸಮಾಜದ ರಾಜ್ಯ ಅಧ್ಯಕ್ಷ ಡಾ| ಈ. ರಮೇಶ್‌, ಮೇಯರ್‌ ಶೋಭಾ ಪಲ್ಲಾಗಟ್ಟೆ, ಡೆಪ್ಯುಟಿ ಮೇಯರ್‌ ಕೆ. ಚಮನ್‌ಸಾಬ್‌, ಸದಸ್ಯ ಅಲ್ತಾಫ್‌ ಹುಸೇನ್‌, ಇತರರು ಭಾಗವಹಿಸುವರು ಎಂದು ತಿಳಿಸಿದರು.

Advertisement

ಸಂಘದ ಅಧ್ಯಕ್ಷ ಸೋಮಪ್ಪ ಬಿದಿರಿ, ನಾಗರಾಜಪ್ಪ ಚಂದ್ರಪ್ಪ ರಿತ್ತಿ, ಪ್ರಕಾಶ್‌ ಮಲ್ಲಪ್ಪ ಕಮಲಾಪುರ, ಕೃಷ್ಣಪ್ಪ ಮಹಾದೇವಪ್ಪ ಕರ್ಜಗಿ, ಶಂಕ್ರಪ್ಪ ಪಂಪಣ್ಣ ಜವಳಿ ಸುದ್ದಿಗೋಷ್ಠಿಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next