Advertisement

Jagadish Shettar, ಬೊಮ್ಮಾಯಿಗೆ ಮಿಸ್‌: ಸೋಮಣ್ಣಗೆ ಲಕ್‌

01:25 AM Jun 10, 2024 | Team Udayavani |

ಬೆಂಗಳೂರು: ಕೇಂದ್ರ ಸಚಿವ ಸಂಪುಟದಲ್ಲಿ ಸೇರ್ಪ ಡೆಯಾಗುವ ಬಗ್ಗೆ ಅತೀವ ನಿರೀಕ್ಷೆ ಹೊಂದಿದ್ದ ಇಬ್ಬರು ಮಾಜಿ ಸಿಎಂಗಳಾದ ಜಗದೀಶ್‌ ಶೆಟ್ಟರ್‌ ಹಾಗೂ ಬಸವರಾಜ್‌ ಬೊಮ್ಮಾಯಿ ಅವರಿಗೆ ಸೋಮಣ್ಣ ಎಂಟ್ರಿಯಿಂದಾಗಿ ಆಶಾಭಂಗವಾಗಿದೆ.

Advertisement

ಲೋಕಸಭಾ ಟಿಕೆಟ್‌ ಹಂಚಿಕೆಯಾದ ಕ್ಷಣದಿಂ ದಲೂ ಶೆಟ್ಟರ್‌ ಹಾಗೂ ಬೊಮ್ಮಾಯಿ ಪೈಕಿ ಒಬ್ಬ ರಿಗೆ ಅದೃಷ್ಟ ಒಲಿಯುತ್ತದೆ ಎಂದೇ ವ್ಯಾಖ್ಯಾನಿ ಸಲಾಗುತ್ತಿತ್ತು. ಆದರೆ ಕಳೆದೆರಡು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇವರಿಬ್ಬರಿಗೆ ತಾವು ಕೇಂದ್ರ ಸಂಪುಟ ಸೇರ್ಪಡೆ ಸಾಧ್ಯತೆ ಕ್ಷೀಣಿ ಸಿದೆ ಎಂಬ ಅರಿವಾಗುತ್ತಿತ್ತು. ಆದರೆ ಲಿಂಗಾಯತ ಕೋಟಾದಲ್ಲಿ ಮೊದಲ ಬಾರಿಗೆ ಸಂಸತ್‌ ಪ್ರವೇಶ ಮಾಡುತ್ತಿರುವ ವಿ.ಸೋಮಣ್ಣ ಅವರಿಗೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆ ಇದ್ದಿರಲಿಲ್ಲ.

ಇವರಿಬ್ಬರಿಗೆ ಸಂಪುಟದಲ್ಲಿ ಅವಕಾಶ ಕೈ ತಪ್ಪುವುದಕ್ಕೆ ಪ್ರಾದೇಶಿಕ ವಿಚಾರವೂ ಕೆಲಸ ಮಾ ಡಿದೆ. ಕಿತ್ತೂರು ಕರ್ನಾಟಕ ಭಾಗದಿಂದ ಪ್ರಹ್ಲಾದ್‌ ಜೋಶಿ ಸಂಪುಟ ಸೇರ್ಪಡೆಯಾಗಿದ್ದರಿಂದ ಅಕ್ಕ-ಪಕ್ಕದ ಕ್ಷೇತ್ರಗಳಾದ ಬೆಳಗಾವಿ ಹಾಗೂ ಹಾವೇರಿಯಿಂದ ಶೆಟ್ಟರ್‌ ಹಾಗೂ ಬೊಮ್ಮಾಯಿಗೆ ಸಂಪುಟದಲ್ಲಿ ಅವಕಾಶ ಕೊಡುವ ಸಾಧ್ಯತೆ ಇದ್ದಿ ರಲಿಲ್ಲ. ಅದೇ ರೀತಿ ಪರಿಶಿಷ್ಟ ಜಾತಿ ಕೋಟಾದಲ್ಲಿ ರಮೇಶ್‌ ಜಿಗಜಿಣಗಿ ಹಾಗೂ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಸೇರ್ಪಡೆಯಾಗ ಬಹುದೆಂಬ ಲೆಕ್ಕಾಚಾರವೂ ಸುಳ್ಳಾಗಿದೆ.

ಲಿಂಗಾಯತ ಕೋಟಾದಲ್ಲಿ ವಿ.ಸೋಮಣ್ಣ ಅವರಿಗೆ ಅವಕಾಶ ಸಿಕ್ಕಿರುವುದರಿಂದ ಭವಿಷ್ಯದಲ್ಲಿ ಇವರಿಬ್ಬರಿಗೆ ಅದೃಷ್ಟ ಒಲಿಯುವ ಸಾಧ್ಯತೆಯೂ ಕ್ಷೀಣಿಸಿದೆ. ಅಕ್ಕಪಕ್ಕದ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಇವರಿಬ್ಬರು ವಿಫ‌ಲರಾಗಿರುವುದು ನಾಯಕತ್ವ ನಿರ್ಧರಿಸುವ ವಿಚಾರದಲ್ಲಿ ಮಹತ್ವ ಪಾತ್ರ ವಹಿಸಿದೆ ಎನ್ನಲಾಗುತ್ತಿದೆ.

ನಾಲ್ಕು ಬಾರಿ ಗೆದ್ದರೂ ಮಿಸ್‌
ಬೆಂಗಳೂರು ಕೇಂದ್ರ ಲೋಕಸಭಾ ಕೇಂದ್ರದಿಂದ ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿರುವ ಪಿ.ಸಿ.ಮೋಹನ್‌ ಅವರಿಗೆ ಓಬಿಸಿ ಕೋಟಾದಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ ಶೋಭಾ ಕರಂದ್ಲಾಜೆ ಅವ ಕಾಶ ಪಡೆದುಕೊಂಡಿದ್ದಾರೆ. ಒಕ್ಕಲಿಗ ಕೋಟಾ ಕ್ಕಿಂತ ಹೆಚ್ಚಾಗಿ ಮಹಿಳಾ ಪ್ರಾತಿನಿಧ್ಯ ಶೋಭಾ ಪರ ಅವಕಾಶ ಸೃಷ್ಟಿಸಿದೆ. ಎಲ್ಲ ಕ್ಕಿಂತ ಹೆಚ್ಚಾಗಿ ಕೃಷಿ ಇಲಾಖೆ ರಾಜ್ಯ ಖಾತೆಯನ್ನು ಶೋಭಾ ನಿಭಾಯಿಸಿದ ಪರಿ ದಿಲ್ಲಿ ನಾಯಕರ ಮೆಚ್ಚುಗೆಗೆ ಪಾತ್ರವಾಗಿತ್ತು ಎನ್ನಲಾಗಿದೆ.

Advertisement

ಹ್ಯಾಟ್ರಿಕ್‌ ವೀರನಿಗಿಲ್ಲ ಮನ್ನಣೆ
ಇದೆಲ್ಲದಕ್ಕಿಂತ ಹೆಚ್ಚಾಗಿ ರಾಜ್ಯದ ಸಕ್ರಿಯ ಸಂಸದರ ಪೈಕಿ ಮುಂಚೂಣಿಯಲ್ಲಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಹ್ಯಾಟ್ರಿಕ್‌ ಸಾಧನೆ ಮಾಡಿರುವ ಬಿ.ವೈ.ರಾಘ ವೇಂದ‌Å ಅವರ ಕೇಂದ್ರ ಸಂಪುಟ ಸೇರ್ಪಡೆ ಕನಸು ಕೂಡ ಭಗ್ನವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ರಾಗಿ ಸೋದರ ಬಿ.ವೈ.ವಿಜಯೇಂದ್ರ ಈಗಾಗಲೇ ಅಧಿಕಾರದಲ್ಲಿರುವುದು ರಾಘವೇಂದ್ರ ಅವರಿಗೆ ಅವಕಾಶ ತಪ್ಪುವುದಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next