Advertisement

ಸಿಡಿಲು ಬಡಿದು ಕಳಚಿ ಬಿದ್ದ ಗೋಪುರ ಕಳಶ

03:03 AM Apr 20, 2019 | Team Udayavani |

ಮಡಿಕೇರಿ: ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯ ವಿವಿಧೆಡೆ ಸುರಿಯುತ್ತಿರುವ ಗುಡುಗು, ಸಿಡಿಲು ಸಹಿತ ಮಳೆ ಆತಂಕವನ್ನು ಸೃಷ್ಟಿಸಿದೆ. ಮಾತ್ರವಲ್ಲದೆ ಅಪಾರ ಹಾನಿಯನ್ನುಂಟು ಮಾಡುತ್ತಿದೆ. ಗುರುವಾರ ರಾತ್ರಿ 8.30ರ ಸುಮಾರಿಗೆ ಸಿಡಿಲು ಬಡಿದ ಪರಿಣಾಮ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಪ್ರವೇಶದ್ವಾರದ ಗೋಪುರದ ಕಳಶ ಕಳಚಿ ಬಿದ್ದಿದೆ.

Advertisement

ಗೋಪುರದ ಮೇಲೆ ಐದು ಕಳಶಗಳಿದ್ದು, ಅವುಗಳಲ್ಲಿ ಬಲಭಾಗದ ಮೊದಲ ಕಳಶಕ್ಕೆ ಸಿಡಿಲು ಬಡಿದಿದೆ. ಸಿಡಿಲಬ್ಬರಕ್ಕೆ ಕಳಶ ಕೆಳಗೆ ಬಿದ್ದಿದ್ದು, ಉಳಿದ ನಾಲ್ಕು ಕಳಶಗಳಿಗೆ ಯಾವುದೇ ಹಾನಿಯಾಗಿಲ್ಲ. ಪ್ರಕೃತಿಯ ಪ್ರಭಾವದಿಂದ ಆಗಿರುವ ಈ ಘಟನೆಯ ಬಗ್ಗೆ ಜನರು ಚರ್ಚೆಯಲ್ಲಿ ನಿರತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next