Advertisement

ದೋಟಿಹಾಳ : ವೈಭವದ ಶ್ರೀ ಬನಶಂಕರಿದೇವಿಯ ರಥೋತ್ಸವ

08:42 PM Feb 21, 2022 | Team Udayavani |

ದೋಟಿಹಾಳ: ಗ್ರಾಮದ ಆದಿಶಕ್ತಿ ಶ್ರೀ ಬನಶಂಕರಿದೇವಿಯ ಪಲ್ಲಕಿ, ರಥೋತ್ಸವವು ಸಾಯಂಕಾಲ 6 ಗಂಟೆಗೆ ನೂರಾರು ಭಕ್ತರ ಹರ್ಷೋದ್ಘಾರ ನಡುವೆ ಜಾತ್ರೆ ನೆರವೇರಿತು.

Advertisement

ಜಾತ್ರೆಯ ಅಂಗವಾಗಿ ಸೋಮವಾರ ಬೆಳಗ್ಗೆ ದೇವಿಗೆ ವಿಷೇಶ ಪೂಜೆ, ಮಹಾಭಿಷೇಕ ಮತ್ತು ರಥದ ಮುಂದೆ ಹೋಮ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರತಿವರ್ಷದಂತೆ ಭರತ ಹುಣ್ಣಿಮೆ ಆದ ಐದು ದಿನಗಳ ನಂತರದ “ಮಾಘ,ಬ, ಪಂಚಮಿ” ನಕ್ಷತ್ರದ ಶುಭಗಳಿಗೆಯಲ್ಲಿ ದೇವಿಯ ಪಲ್ಲಕಿ ಮತ್ತು ರಥೋತ್ಸವದೊಂದಿಗೆ ಜಾತ್ರೆ ಜರುಗಿತು. ಈ ಜಾತ್ರೆಯಲ್ಲಿ ಸುತ್ತ ಮುತ್ತಲಿನ ಕೇಸೂರು, ಮಾಟುರ, ಜಾಲಿಹಾಳ, ಕ್ಯಾದಗುಂಪಿ, ಗೋತಗಿ, ತೋನಸಿಹಾಳ, ಕಲಕೇರಿ, ಕಡೇಕೊಪ್ಪ ಮತ್ತು ಹೆಸರೂರು ಗ್ರಾಮಗಳ ಭಕ್ತರು ಸೇರಿ ಸುಮಾರು ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.

ಗ್ರಾಮದಲ್ಲಿ ದೇವಿಯ ಭಕ್ತರು ಬೆಳಗಿನ ಪವಿತ್ರ ಸ್ನಾನ ಮಾಡಿ ದೇವಸ್ಥಾನದವರಗೆ ಮಡಿ ಬಟ್ಟೆಯಲ್ಲೇ ಆಗಮಿಸಿ ಪೂಜೆ ಸಲ್ಲಿಸಿದರು. ಇನ್ನೂ ಕೆಲವು ಭಕ್ತರು ದೀರ್ಘದಂಡ ನಮಸ್ಕಾರಗಳೊಂದಿಗೆ ತಮ್ಮ ಭಕ್ತಿ ಸೇವೆ ಸಲ್ಲಿಸಿದರು. ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕಾಗಿ ಭಕ್ತರು ಬೆಳಗಿನಿಂದಲೇ ಸಾಲುಗಟ್ಟಿ ನಿಂತಿರುವುದು ಕಂಡುಬಂತು.

ಭಕ್ತರಿಂದ ‘ಬನಶಂಕರಿ ನಿನ್ನ ಪಾದಕ ಶಂಭೂಕೋ, ಹತ್ತಿಗಿಡದ ಸತ್ಯಮ್ಮ ನಿನ್ನ ಪಾದಕ ಶಂಭೂಕೋ, ಆದಿ ಶಕ್ತಿ ಪರಮೇಶ್ವರಿ ನಿನ್ನ ಪಾದಕ ಶಂಭೂಕೋ’. ಎಂಬ ಘೋಷಣೆಗಳು ರಥೋತ್ಸವದ ಸಮಯದಲ್ಲಿ ಭಕ್ತಿಭಾವದಿಂದ ಮೊಳಗಿದವು.

ಇದನ್ನೂ ಓದಿ : ನಾಳೆ ಸಂಜೆ ಕಾಂಗ್ರೆಸ್ ನಾಯಕರಿಂದ ವಿಧಾನಸೌಧದಿಂದ ರಾಜಭವನದ ವರೆಗೆ ಪಾದಯಾತ್ರೆ

Advertisement

ಸಾವಿರಾರೂ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವ ಸಮಯದಲ್ಲಿ ಮಾಜಿ ಶಾಸಕರಾದ ಹಸನಸಾಬ ದೋಟಿಹಾಳ, ಮಾಜಿ ಜಿಪಂ ಸದಸ್ಯರಾದ ಸದಸ್ಯ ಕೆ.ಮಹೇಶ, ಮಾಜಿ ತಾಪಂ ಸದಸ್ಯರಾದ ಮಹಾಂತೇಶ ಬಾದಾವಿ, ಯಂಕಪ್ಪ ಚವ್ಹಾಣ, ದೋಟಿಹಾಳ ಮತ್ತು ಕೇಸೂರ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಪಂ ಸದಸ್ಯರು, ಪಿಡಿಒಗಳು ಸೇರಿದ್ದಂತೆ ಇತರರ ರಾಜಕೀಯ ಮುಖಂಡರು, ದೇವಾಂಗ ಸಮಾಜದ ಹಿರಿಯರು, ಮುಖಂಡರು ಹಾಗೂ ಗ್ರಾಮದ ಮುಖಂಡರು, ಗ್ರಾಮಸ್ಥರು ಉಪಸ್ಥಿತಿರಿದ್ದರು.

ರಥೋತ್ಸವದ ಸಮಯದಲ್ಲಿ ಕುಷ್ಕಗಿ ಸಿಪಿಐ ನಿಂಗಪ್ಪ ರುದ್ರಗೊಳ ಮತ್ತು ಕ್ರೆöÊಂ ಪಿಎಸ್‌ಐ ಮಾನಪ್ಪ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತು.

Advertisement

Udayavani is now on Telegram. Click here to join our channel and stay updated with the latest news.

Next