Advertisement
ಅವರು ಸೆ. 10 ರಂದು ಪುಣೆ ಕನ್ನಡ ಸಂಘದ ಡಾ| ಶಾಮರಾವ್ ಕಲ್ಮಾಡಿ ಕನ್ನಡ ಮಾಧ್ಯಮ ಹೈಸ್ಕೂಲಿನ ಸಭಾಂಗಣದಲ್ಲಿ ನಡೆದ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಯಕ್ಷಗಾನ ರಂಗದ ಬೆಳವಣಿಗೆಗೆ, ಉಳಿವಿಗೆ ಕೊಡುಗೆ ನೀಡುವ ಯಾವುದೇ ಸಂಸ್ಥೆಗೆ ಪುಣೆ ಬಂಟರ ಸಂಘದಿಂದ ನಿರ್ಮಾಣಗೊಂಡ ಸಾಂಸ್ಕೃಕ ಬಂಟರ ಭವನವನ್ನು ಕಾರ್ಯಕ್ರಮ ಆಯೋಜಿಸಲು ಉಚಿತವಾಗಿ ನೀಡಲಾಗುವುದು. ನಮ್ಮ ನಾಡಿನ ಕಲಾ ಪ್ರಕಾರಗಳಿಗೆ ಆದ್ಯತೆ ನೀಡುವುದು ನಮ್ಮೆಲ್ಲರ ಕರ್ತವ್ಯವೆಂದು ಭಾವಿಸುವೆ. ಇಂದು ಆರಂಭಗೊಂಡ ಈ ಸಂಸ್ಥೆ ಭವಿಷ್ಯದಲ್ಲಿ ಪುಣೆಯಲ್ಲಿ ಆದರ್ಶ ಸಂಸ್ಥೆಯಾಗಿ ರೂಪುಗೊಳ್ಳಲಿ ಎಂದು ನುಡಿದು ಶುಭ ಹಾರೈಸಿದರು.
Related Articles
Advertisement
ಸಂಘದ ಪ್ರಧಾನ ಕಾರ್ಯದರ್ಶಿ ಆನಂದ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘ ಸ್ಥಾಪನೆಯಾಗಿಸಿದ ಉದ್ದೇಶ, ಆಶಯ ಹಾಗೂ ಭವಿಷ್ಯದ ರೂಪರೇಷೆಗಳನ್ನು ವಿವರಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಪ್ರಕಾಶ್ ಹೆಗ್ಡೆ ಮಟ್ಟಾರ್ ಉಪಸ್ಥಿತರಿದ್ದರು. ಯಕ್ಷಗಾನ ರಂಗದ ಸಾಧಕ, ಹಿರಿಯ ಭಾಗವತ, ಸಾಹಿತಿ ಹಾಗೂ ಯಕ್ಷಗುರುಗಳಾದ ವಿಶ್ವವಿನೋದ ಬನಾರಿ ಇವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು. ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಗೌರವಿಸಲಾಯಿತು.
ವಾಸು ಕುಲಾಲ್ ವಿಟ್ಲ, ಮದಂಗಲ್ಲು ಅಶೋಕ್ ಭಟ್, ನಯನಾ ಶೆಟ್ಟಿ, ಕಲ್ಲಾಡಿ ಶ್ರೀಧರ ಶೆಟ್ಟಿ, ಸಂತೋಷ್ ಶೆಟ್ಟಿ ಎಣ್ಣೆಹೊಳೆ, ವಿಕೇಶ್ ರೈ ಶೇಣಿ, ಸುಕೇಶ್ ಶೆಟ್ಟಿ ಎಣ್ಣೆಹೊಳೆ, ಚೇತನ್ ಶೆಟ್ಟಿ ಎಲಿಯಾಳ, ಸುದರ್ಶನ್, ಯಾದವ ಬಂಗೇರ, ಸುಭಾಷ್ ರೈ ಕಾಟುಕುಕ್ಕೆ, ಯೋಗೀಶ್ ಗೌಡ ಬಂಟ್ವಾಳ ಅವರು ಅತಿಥಿಗಳನ್ನು ಸತ್ಕರಿಸಿದರು. ಊರಿನ ಹೆಸರಾಂತ ಕಲಾವಿದರು ಹಾಗೂ ಮಂಡಳಿಯ ಕಲಾವಿದರ ಸಮ್ಮಿಲನದೊಂದಿಗೆ ಕಾವ್ಯಶ್ರೀ ಅಜೇರು ಭಾವತಿಕೆಯಲ್ಲಿ ರತಿ ಮನ್ಮಥ ಪರಿಣಯ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು. ಪ್ರಕಾಶ್ ಹೆಗ್ಡೆ ಮಟ್ಟಾರ್ ಸ್ವಾಗತಿಸಿದರು. ಸಂಘದ ಸದಸ್ಯೆ ವರ್ಷಾ ಯೋಗೇಶ್ ಗೌಡ ಸಮ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಕಲಾಭಿಮಾನಿಗಳು ಉಪಸ್ಥಿತರಿದ್ದರು.
ಇಂದಿನ ಈ ಕಾರ್ಯಕ್ರಮದ ಅಂಗವಾಗಿರಲು ಅಭಿಮಾನವೆನಿಸುತ್ತಿದೆ. ನಮ್ಮ ನಾಡಿನ ಗಂಡು ಕಲೆಯಾದ ಯಕ್ಷಗಾನದಂತಹ ಶ್ರೇಷ್ಠ ಕಲೆ ನಾಶವಾಗದಂತೆ ಕಾಳಜಿವಹಿಸಿ ಅದರ ಬೆಳವಣಿಗೆಯ ಹಿತದೃಷ್ಟಿಯ ಉದ್ದೇಶದಿಂದ ಕಲಾರಂಗವನ್ನು ಸ್ಥಾಪಿಸುವಲ್ಲಿ ಉತ್ಸಾಹ ತೋರಿದ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಕಾರ್ಯತತ್ಪರತೆ ಪ್ರಶಂಸನೀಯ. ಈ ಸಂಘಟನೆ ಕಲಾಪೋಷಕರ ಸಹಕಾರದೊಂದಿಗೆ ಭವಿಷ್ಯದಲ್ಲಿ ಉತ್ತಮವಾದ ಯಶಸ್ಸನ್ನು ಗಳಿಸಲಿ – ವಿಶ್ವನಾಥ ಡಿ. ಶೆಟ್ಟಿ (ಮಾಜಿ ಅಧ್ಯಕ್ಷರು : ಪಿಂಪ್ರಿ-ಚಿಂಚಾÌಡ್ ಬಂಟರ ಸಂಘ). ನಮ್ಮ ಬಾಲ್ಯದಿಂದಲೇ ನಮ್ಮ ನಾಡಿನ ಹೆಮ್ಮೆಯ ಕಲೆಯನ್ನು ಸಾಂಸ್ಕೃತಿಕ ಶ್ರೀಮಂತಿಕೆ ಎಂಬಂತೆ ಆಸ್ವಾದಿಸಿಕೊಂಡು ಬಂದವರು ನಾವು. ಎಷ್ಟೋ ವರ್ಷಗಳ ಕಲಾವಿದರುಗಳ ತಪಸ್ಸಿನ ಫಲವೆಂಬಂತೆ ಇಂದಿಗೂ ಯಕ್ಷಗಾನ ಕಲೆಯು ಬೆಳೆದು ಬಂದದ್ದಲ್ಲದೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಸಿದ್ಧಿಯನ್ನು ಗಳಿಸಿದೆ. ಇಂತಹ ಕಲೆಯ ಬಗ್ಗೆ ಒಲವುಳ್ಳ ಪುಣೆಯಲ್ಲಿರುವ ಕಲಾವಿದರ ಗಡಣ ಸಂಘಟನೆ ಸ್ಥಾಪಿಸುವುದರ ಮೂಲಕ ಕಲಾಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ
– ನಾರಾಯಣ ಕೆ. ಶೆಟ್ಟಿ (ಅಧ್ಯಕ್ಷರು : ಬಂಟ್ಸ್ ಅಸೋಸಿಯೇಶನ್ ಪುಣೆ). ನಾಡಿನ ಕಲಾಸೇವೆಯ ಹೆಸರಿನ ಈ ಸಂಸ್ಥೆ ಇಂದು ಉತ್ತಮವಾದ ಉದ್ದೇಶದಿಂದ ಇಂದಿನ ದಿನ ಆರಂಭಗೊಂಡಿರುವುದು ಕಲಾರಂಗಕ್ಕೆ ಸಂದ ಕೊಡುಗೆಯಾಗಿದೆ. ಯಕ್ಷಗಾನದ ಅಳಿವು ಉಳಿವಿನ ಸಂದಿಗª ಪರಿಸ್ಥಿತಿಯಲ್ಲಿ ನಮ್ಮ ಸಂಸ್ಕೃತಿಯ ಜೀವಾಳದಂತಿರುವ ಯಕ್ಷಗಾನದ ಕಂಪನ್ನು ಹರಡುವ ಕಾರ್ಯ ಆಗುತ್ತಿರುವುದು ಹೆಮ್ಮೆಯೆನಿಸುತ್ತಿದೆ. ಈ ಸಂಸ್ಥೆ ಭವಿಷ್ಯದಲ್ಲಿ ಪುಣೆಯಲ್ಲಿ ಯಕ್ಷಗಾನದ ಭದ್ರ ಬುನಾದಿಯನ್ನು ನಿರ್ಮಿಸುತ್ತಾ ಸಾಂಸ್ಕೃತಿಕ ಕಲಾಸೇವೆಯ ರಾಯಭಾರಿಯಾಗಿ ಮುನ್ನಡೆಯಲಿ. ಪುಣೆ ತುಳುಕೂಟದ ಸಹಕಾರ ಕಲೆಯ ಉಳಿವಿಗೆ ಸದಾ ಇದೆ
– ತಾರಾನಾಥ ಕೆ. ರೈ ಮೇಗಿನಗುತ್ತು (ಅಧ್ಯಕ್ಷರು : ತುಳುಕೂಟ ಪುಣೆ). ನಾನು ಯಕ್ಷಗಾನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ನೀಡಿರುವ ಈ ಗೌರವವನ್ನು ಹೊಣೆಗಾರಿಕೆಯ ಪ್ರಜ್ಞೆಯಿಂದ ಎಚ್ಚರದಿಂದ, ಪುಣೆಯ ಕಲಾಭಿಮಾನಿಗಳ ಮೇಲಿನ ಪ್ರೀತಿಯಿಂದ ಸ್ವೀಕರಿಸುತ್ತಿದ್ದೇನೆ. ಯಕ್ಷಗಾನ ಎನ್ನುವ ಮಹಾನ್ ವೃಕ್ಷಕ್ಕೆ ಯಕ್ಷಗಾನ ಕಲಾಸಂಘಗಳು ತಾಯಿ ಬೇರು ಇದ್ದಂತೆ. ಕಲಾಸೆಳೆತ, ಪ್ರೀತಿ, ಬದ್ಧತೆ ಎಲ್ಲವೂ ಒಟ್ಟಾಗಿ ಉದ್ಘಾಟನೆಗೊಂಡಿರುವ ಈ ಸಂಘ ಚಿರಕಾಲ ಬಾಳಲಿ ವಿಶ್ವ ವಿನೋದ ಬನಾರಿ (ಸಮ್ಮಾನಿತರು).