Advertisement
ಒಂದು ಹಂತದಲ್ಲಿ ಸಂಪೂರ್ಣ ಹೈದರಾಬಾದ್ ಕಡೆಗೆ ತಿರುಗಿದ್ದ ಪಂದ್ಯವನ್ನು ಕೊನೆಯ ಓವರ್ ನಲ್ಲಿ ಕೆಕೆಆರ್ ಯುವ ಬೌಲರ್ ಹರ್ಷಿತ್ ರಾಣಾ ಅದ್ಭುತ ಓವರ್ ಎಸೆದು ತಂಡಕ್ಕೆ ಗೆಲುವು ತಂದಿದ್ದರು. ಕೊನೆಯ ಓವರ್ ನಲ್ಲಿ ಹೈದರಾಬಾದ್ ಗೆ 13 ರನ್ ಬೇಕಿತ್ತು, ಕ್ಲಾಸನ್ ಮತ್ತು ಶಹಬಾಜ್ ಅಹಮದ್ ಕ್ರೀಸ್ ನಲ್ಲಿದ್ದರು. ಮೊದಲ ಎಸೆತದಲ್ಲಿ ಸಿಕ್ಸರ್ ಹೋದರೂ ನಂತರ ಎರಡು ವಿಕೆಟ್ ಕಿತ್ತ ಹರ್ಷಿತ್ ತಂಡಕ್ಕೆ ಜಯ ತಂದಿತ್ತರು.
Related Articles
Advertisement
ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ಹರ್ಷಿತ್ ಎರಡು ಲೆವೆಲ್ 1 ಅಪರಾಧಗಳನ್ನು ಎಸಗಿದ್ದಾರೆ. ಕ್ರಮವಾಗಿ ಅವರ ಪಂದ್ಯ ಶುಲ್ಕದ 10 ಮತ್ತು 50 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿದೆ ಎಂದು ಐಪಿಎಲ್ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಮ್ಯಾಚ್ ರೆಫ್ರಿಯ ನಿರ್ಬಂಧಗಳನ್ನು ವೇಗಿ ಒಪ್ಪಿಕೊಂಡಿದ್ದಾರೆ ಎಂದೂ ಹೇಳಿಕೆ ತಿಳಿಸಿದೆ.
“ಮಾರ್ಚ್ 23 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತಮ್ಮ ತಂಡದ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಪಂದ್ಯದ ಸಂದರ್ಭದಲ್ಲಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಬೌಲರ್ ಹರ್ಷಿತ್ ರಾಣಾ ಅವರ ಒಟ್ಟು ಪಂದ್ಯ ಶುಲ್ಕದ ಒಟ್ಟು 60 ಪ್ರತಿಶತವನ್ನು ದಂಡ ವಿಧಿಸಲಾಗಿದೆ “ಎಂದಿದೆ.