Advertisement

ಶ್ರೀಶಾಂತ್‌ ಗುರಿ ವಿಶ್ವಕಪ್‌

03:21 PM Aug 09, 2017 | |

ಕೊಚ್ಚಿ: ಭಾರತ ತಂಡದಲ್ಲಿ ಪುನಃ ಅವಕಾಶ ಪಡೆಯಬೇಕು. 2019ರ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಆಡಬೇಕು ಎಂಬುದೇ ತನ್ನ ಗುರಿ ಎಂದು ಆಜೀವ ನಿಷೇಧದಿಂದ ಹೊರಬಂದ ವೇಗಿ ಶ್ರೀಶಾಂತ್‌ ಹೇಳಿದ್ದಾರೆ. 

Advertisement

“ಕೇರಳ ಹೈಕೋರ್ಟ್‌ ತೀರ್ಪು ತುಂಬಾ ಸಂತಸ ನೀಡಿದೆ. ನನ್ನ ಕುಟುಂಬ ಕೂಡ ಸಂತಸಪಡುತ್ತಿದೆ. ಈಗ ನನ್ನ ಗುರಿ ರಾಷ್ಟ್ರೀಯ ತಂಡದಲ್ಲಿ ಆಡುವುದು. ಆದರೆ ಬಿಸಿಸಿಐ ಮತ್ತು ಕೇರಳ ಕ್ರಿಕೆಟ್‌ ಸಂಸ್ಥೆಯ ಬೆಂಬಲ ಮಹತ್ವದ್ದಾಗಿದ್ದು, ಗ್ರೀನ್‌ ಸಿಗ್ನಲ್‌ಗಾಗಿ ಕಾಯುತ್ತಿದ್ದೇನೆ. ಇನ್ನು ಮುಂದೆ ನನ್ನ ಹೊಸ ಜೀವನ ಆರಂಭವಾಗಲಿದೆ’ ಎಂದರು.

“ನನಗೆ 34 ವರ್ಷವಷ್ಟೇ. ಸಚಿನ್‌ ತೆಂಡುಲ್ಕರ್‌, ಯೂನಿಸ್‌ ಖಾನ್‌, ಮಿಸ್ಬಾ ಉಲ್‌ ಹಕ್‌ ಅವರು 40 ವರ್ಷದವರೆಗೂ ಕ್ರಿಕೆಟ್‌ ಆಡಿದ್ದಾರೆ. ಅವರೇ ನನಗೆ ಸ್ಫೂರ್ತಿಯಾಗಿದ್ದಾರೆ. ಹೀಗಾಗಿ ರಾಷ್ಟ್ರೀಯ ತಂಡದಲ್ಲಿ ಆಡಲು ಮತ್ತೆ ಪ್ರಯತ್ನಿಸುತ್ತೇನೆ’ ಎಂದಿದ್ದಾರೆ. 2013ರಲ್ಲಿ ನಡೆದ ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಶ್ರೀಶಾಂತ್‌ ಮೇಲೆ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. ಶ್ರೀಶಾಂತ್‌ ಕೋರ್ಟ್‌ ಮೊರೆ ಹೋಗಿದ್ದರು. ಸೋಮವಾರ ಕೇರಳ ಹೈಕೋರ್ಟ್‌ ಶ್ರೀಶಾಂತ್‌ ಮೇಲಿನ ಆಜೀವ ನಿಷೇಧವನ್ನು ತೆರವುಗೊಳಿಸಿದೆ. ಕೇರಳ ಕ್ರಿಕೆಟ್‌ ಸಂಸ್ಥೆ ಕೂಡ ಈಗಾಗಲೇ ಶ್ರೀಶಾಂತ್‌ಗೆ ಬೆಂಬಲ ನೀಡುವುದಾಗಿ ತಿಳಿಸಿದೆ. ಆದರೆ ಬಿಸಿಸಿಐ ಕಾನೂನು ತಜ್ಞರ ಸಲಹೆ ಮೇಲೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next