Advertisement

ವಿದೇಶದಲ್ಲಿ ಆಡುವ ಶ್ರೀಶಾಂತ್‌ ಕನಸಿಗೆ ಬಿಸಿಸಿಐ ಚೆಕ್‌ಮೇಟ್ !

07:35 AM Oct 22, 2017 | |

ನವದೆಹಲಿ: ಬಿಸಿಸಿಐ ನಿಷೇಧ ಮಾಡಿದರೆ ಏನಂತೆ ತಾನು ಬೇರೆ ರಾಷ್ಟ್ರದ ಪರ ಆಡಲು ಉತ್ಸುಕನಾಗಿದ್ದೇನೆ ಎಂದು ಹೇಳಿಕೆ ನೀಡಿದ್ದ ಕ್ರಿಕೆಟಿಗ ಶ್ರೀಶಾಂತ್‌ಗೆ ಈಗ ಚೆಕ್‌ಮೇಟ್ ಗೊಳಗಾಗಿದ್ದಾರೆ. ಐಸಿಸಿ ನನ್ನನ್ನು ನಿಷೇಧಿಸಿಲ್ಲ, ಆದ್ದರಿಂದ ತಾನು ವಿದೇಶದಲ್ಲಿ ಆಡಲು ತಯಾರು ಎಂದ ಶ್ರೀಗೆ ಐಸಿಸಿ ನಿಯಮಗಳನ್ನೇ ಉಲ್ಲೇಖೀಸಿ ಬಿಸಿಸಿಐ ತಿರುಗೇಟು ನೀಡಿದೆ.

Advertisement

ಶ್ರೀಕಾಂತ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್‌ ಚೌಧರಿ, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ(ಐಸಿಸಿ) ನಿಯಮದ ಪ್ರಕಾರ ಯಾವುದೇ ರಾಷ್ಟ್ರದ ಕ್ರಿಕೆಟ್‌ ಮಂಡಳಿಯಿಂದ ನಿಷೇಧಕ್ಕೆ ತುತ್ತಾಗಿರುವ ಆಟಗಾರನಿಗೆ ಬೇರೆ ರಾಷ್ಟ್ರದ ಪರ ಆಡುವ ಹಕ್ಕು ಇಲ್ಲ. ಐಸಿಸಿ ಪೂರ್ಣ ಸದಸ್ಯ ರಾಷ್ಟ್ರ ಅಥವಾ ಇತರೆ ತಂಡಗಳಲ್ಲಿಯೂ ಅಂತಹ ಅವಕಾಶ ಇರುವುದಿಲ್ಲ. ಇದನ್ನು ಐಸಿಸಿ ನಿಯಮದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಆರೋಪಿ ಶ್ರೀಶಾಂತ್‌ ಮೇಲಿನ ಆಜೀವ ನಿಷೇಧದ ಶಿಕ್ಷೆಯನ್ನು ಕೇರಳ ಹೈಕೋರ್ಟ್‌ ಕೂಡ ಎತ್ತಿ ಹಿಡಿದಿತ್ತು. ಇದರಿಂದ ವಿಚಲಿತರಾದ ಶ್ರೀಶಾಂತ್‌ ತನ್ನ ಮೇಲೆ ಬಿಸಿಸಿಐ ನಿಷೇಧ ಹೇರಿದೆ. ಆದರೆ ಐಸಿಸಿ ಅಲ್ಲ. ಹೀಗಾಗಿ ಬೇರೆ ರಾಷ್ಟ್ರದ ಪರ ಆಡುತ್ತೇನೆ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next