ಉಡುಪಿ : ಅಸೆಟ್ ಮ್ಯಾನೇಜ್ಮೆಂಟ್ ಸೊಸೈಟಿ ಇಂಡಿಯಾದ ಅಧ್ಯಕ್ಷ ಮತ್ತು ಎಂಐಟಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ| ರಘುವೀರ್ ಪೈ ಅವರನ್ನು ಅಸೆಟ್ ಮ್ಯಾನೇಜ್ಮೆಂಟ್ ಕೌನ್ಸಿಲ್ ಆಸ್ಟ್ರೇಲಿಯಾ ಮತ್ತು ಗ್ಲೋಬಲ್ ಫೋರಂ ಫಾರ್ ಮೆಂಟೆನ್ಸ್ ಆ್ಯಂಡ್ ಅಸೆಟ್ ಮ್ಯಾನೇಜ್ಮೆಂಟ್ ವತಿಯಿಂದ ಮಾ. 30ರಿಂದ ಎ. 2ರ ವರೆಗೆ ಸ್ಟೀರಿಂಗ್ ಕಮಿಟಿ ಸಭೆಗಳಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಎ. 3ರಿಂದ 6ರ ತನಕ ನಡೆಯಲಿರುವ ಎಂಪೀಕ್ 2023 ಸಮ್ಮೇಳನ ಮತ್ತು ಎ. 6ರಿಂದ 8ರ ವರೆಗೆ ಜರಗಲಿರುವ ಆಸ್ತಿ ನಿರ್ವಹಣೆಯ ಕಾರ್ಯಾಗಾರಕ್ಕಾಗಿ ಆಸ್ಟ್ರೇಲಿಯಾ ಬಲ್ಲರತ್ ಫೆಡರೇಶನ್ ವಿ.ವಿ.ಯಿಂದ ಆಹ್ವಾನಿಸಲಾಗಿದೆ. ಪೈಯವರು ಭೇಟಿಯ ಸಮಯದಲ್ಲಿ ಫೆಡರೇಶನ್ ವಿ.ವಿ.ಯ ನಿರ್ವಹಣ ಶಾಸ್ತ್ರ ವಿಭಾಗದ ಹಿರಿಯರನ್ನು ಭೇಟಿ ಮಾಡಲಿದ್ದಾರೆ.