Advertisement

ಚೆಂಡಿನಂತೆ ಪುಟಿದೇಳುವ ಶಕ್ತಿ ನನಗಿದೆ: ಸಚಿವ  ಶ್ರೀರಾಮುಲು

06:20 PM Feb 12, 2021 | Team Udayavani |

ಬಾಗಲಕೋಟೆ : ಬಳ್ಳಾರಿ ಜಿಲ್ಲೆ ವಿಭಜನೆಯಿಂದ ಶ್ರೀರಾಮುಲು ಮಂಕು ಆಗಿಲ್ಲ. ನಾನು ಹಿಂದೆ ಸರಿದಿದ್ದೇನೆ ಎಂದೂ ಅಲ್ಲ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಇಂದು ಆ ಪಕ್ಷವನ್ನು ಒಬ್ಬ ಶ್ರೀರಾಮುಲು ಎನ್ನುವ ಶಕ್ತಿ ನೆಲಸಮ ಮಾಡಿದ್ದಾನೆ. ಅದು ಬಿಜೆಪಿ ಶಕ್ತಿ. ಚೆಂಡಿನಂತೆ ಪುಟಿದೇಳುವ ಶಕ್ತಿ ಈ ಶ್ರೀರಾಮುಲುಗಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.

Advertisement

ಬಾದಾಮಿ ತಾಲೂಕು ಮುಷ್ಠಿಗೇರಿಯಲ್ಲಿ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ 19.33 ಕೋಟಿ ವೆಚ್ಚದ ಡಾ|ಅಂಬೇಡ್ಕರ್ ವಸತಿ ನಿಲಯ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನನ್ನನ್ನು ಯಾರೂ ಕುಗ್ಗಿಸಲು ಆಗಲ್ಲ. ನಾನು ಕೇವಲ ಒಂದು ತಾಲೂಕು, ಜಿಲ್ಲೆಯ ನಾಯಕನಲ್ಲ. ರಾಜ್ಯ ಮಟ್ಟದ ನಾಯಕ. ಚೆಂಡು ನೆಲಕ್ಕೆ ಒಗೆದಾಗ ಹೇಗೆ ಪುಟಿಯುತ್ತದೆಯೋ ಹಾಗೆಯೇ ಈ ಶ್ರೀರಾಮುಲು. ಚೆಂಡಿನಂತೆ ವೇಗವಾಗಿ ಜಿಗಿಯುವ ಶಕ್ತಿ ಆ ದೇವರು ನನಗೆ ಕೊಟ್ಟಿದ್ದಾನೆ. ನೆಲಕ್ಕೆ ಬಿದ್ದರೂ ಕೂಡ ಮೇಲೆ ಎದ್ದು ಬರುವ ಶಕ್ತಿ ದೇವರು-ನಾಡಿನ ಜನರು ಕೊಟ್ಟಿದ್ದಾರೆ ಎಂದರು.

ಮುಖ್ಯಮಂತ್ರಿ ಬದಲಾವಣೆ ಇಲ್ಲ

ಮುಖ್ಯಮಂತ್ರಿ ಬದಲಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿಗೆ ಬಿಜೆಪಿ ಶಾಸಕರು ಪತ್ರ ಬರೆದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಆಡಳಿತದಲ್ಲಿ ಸಿಎಂ ಪುತ್ರ ವಿಜಯೇಂದ್ರ ಅವರ ಹಸ್ತಕ್ಷೇಪವೂ ಇಲ್ಲ. ನಮ್ಮದು ಶಿಸ್ತಿನ ಪಕ್ಷ ಎಂದರು.

Advertisement

ಡಿಸಿಎಂ ಸ್ಥಾನ ಸಿಗುವ ವಿಶ್ವಾಸ

ಬಿಜೆಪಿಯಲ್ಲಿ ಕಾಲಕ್ಕೆ ತಕ್ಕಂತೆ ಅವಕಾಶ ದೊರೆಯುತ್ತವೆ. ನೋಡೋಣ ಮುಂದಿನ ದಿನಗಳಲ್ಲಿ ಏನಾಗುತ್ತದೆ. ನನಗೆ ಡಿಸಿಎಂ ಸ್ಥಾನ ಕೊಡಬಹುದೆಂಬ ವಿಶ್ವಾಸವಿದೆ. ನಮ್ಮನ್ನು ಪಕ್ಷದಲ್ಲಿ ಬಳಸಿಕೊಂಡು ನಂತರ ಕೈ ಬಿಡುತ್ತಾರೆ ಅಂತಿಲ್ಲ. ನಾವೆಲ್ಲ ತಳ ವರ್ಗದಿಂದ ಬಂದವರು. ನಾನು ಯಾವಾಗಲೂ ಪಕ್ಷ ಹೇಳಿದ ಹಾಗೆ ನಡೆದುಕೊಂಡಿದ್ದೇನೆ. ಸರ್ಕಾರದಲ್ಲಿ ವಾಲ್ಮೀಕಿ ಸಮಾಜಕ್ಕೆ ಎರಡು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ವಿಧಾನಪರಿಷತ್ ಗೆ ಮಾಧ್ಯಮದವರಿಗೆ ಪ್ರವೇಶ; ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸೂಚನೆ:ಹೊರಟ್ಟಿ

ಸಿದ್ದುಗೆ ಸಿಎಂ ಖುರ್ಚಿಗೆ ಹಾರಲು ಆಸಕ್ತಿ

ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದು, ಅವರಿಗೆ ಬರಿ ಸಿಎಂ ಖುರ್ಚಿ ಕಾಣುತ್ತಿದೆ. ಹೇಗಾದರೂ ಮಾಡಿ ಆ ಖುರ್ಚಿಗೆ ಹಾರಬೇಕು ಎಂದು ಕಾಯುತ್ತಿದ್ದಾರೆ. ಅಧಿಕಾರಕ್ಕೆ ಬರುವುದೇ ನಮ್ಮ ಗುರಿಯಲ್ಲ. ಜನರ ಹಿತದೃಷ್ಠಿಯಿಂದ ಬಡವರು, ರೈತರ ಹಿತದೃಷ್ಠಿಯಿಂದ ನಾವು ಕೆಲಸ ಮಾಡುತ್ತಿದ್ದಾರೆ. ಒಂದು ಉಪ ಚುನಾವಣೆ ಗೆದ್ದರೆ ಸಾಕು ಮುಖ್ಯಮಂತ್ರಿಯಾಗಬೇಕು ಎಂದು ಸಿದ್ದರಾಮಯ್ಯ ಬಯಸುತ್ತಾರೆ. ಆದರೆ, ಉಪ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಮುಂದಿನ ಉಪ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ. ಚಾಮುಂಡಿ ಕ್ಷೇತ್ರದ ಜನರ ವಿಶ್ವಾಸ ಕಳೆದುಕೊಂಡು ಬಾದಾಮಿಗೆ ಬಂದಿದ್ದಾರೆ. ಸೋಲಿನ ಹತಾಶೆಯಿಂದ ಭಯ-ಭೀತಿಯಿಂದ ಇಲ್ಲಿಗೆ ಬಂದಿದ್ದಾರೆ. ಕೆಲವೇ ಮತಗಳ ಅಂತರದಿಂದ ನನ್ನ ವಿರುದ್ಧ ಗೆಲುವು ಸಾಧಿಸಿದ್ದಾರೆ. ಕ್ಷೇತ್ರಕ್ಕೆ ಎಷ್ಟು ಅನುದಾನ ಕೊಟ್ಟಿದೆ ಎಂದು ನೋಡಿಕೊಳ್ಳಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next