Advertisement

ಗೋಲ್ಡನ್ ಪೀಸ್‌ ಮೇಕರ್‌ ಸ್ಟಾರ್ ಪ್ರಶಸ್ತಿಗೆ ಎಸ್‌.ಆರ್‌.ವಿಶ್ವನಾಥ್ ಆಯ್ಕೆ

01:18 PM Jun 03, 2021 | Team Udayavani |

ಬೆಂಗಳೂರು: ಯಲಹಂಕ ಶಾಸಕ ಮತ್ತುಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಅವರನ್ನು ರಷ್ಯಾ ಸರ್ಕಾರದ ಪ್ರತಿಷ್ಠಿತ ಗೋಲ್ಡನ್‌ಪೀಸ್‌ ಮೇಕರ್‌ ಸ್ಟಾರ್‌ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

Advertisement

ವಿಶ್ವನಾಥ್‌ ಅವರೊಂದಿಗೆ ವಿಡಿಯೊಕಾನ್ಫರೆನ್ಸ್ ಮೂಲಕ ಮಾರಿಷಸ್‌ನಮಿನಿಸ್ಟರ್‌ಕೌನ್ಸೆಲರ್‌ ಜೆ.ಬಿಸ್ಸೊಂಡೊಯಾಲ್‌ ಅವರುಈ ಪ್ರಶಸ್ತಿ ಘೋಷಣೆ ಮಾಡಿದರು. ಈಸಂದರ್ಭದಲ್ಲಿ ಏಷ್ಯನ್‌ ಅಕಾಡೆಮಿ ಆಫ್‌ಫಿಲ್ಮ… ಅಂಡ್‌ ಟೆಲಿವಿಷನ್‌ನ ಅಧ್ಯಕ್ಷ ಸಂದೀಪ್‌ ಮಾರ್ವ ಹಾಗೂ ರಷ್ಯಾಸರ್ಕಾರದ ಸಚಿವ ಗಾಡಿlಮುರಾಡ್‌ ಒಮರೊವ್‌ ಅವರು ಹಾಜರಿದ್ದು, ವಿಶ್ವನಾಥ್‌ಅವರಿಗೆ ಅಭಿನಂದನೆ ಸಲ್ಲಿಸಿದರು.

ಸಮಾಜಸೇವೆಯಲ್ಲಿಮತ್ತುಸಮಾಜದಲ್ಲಿಶಾಂತಿ ಕಾಪಾಡುವ ನಿಟ್ಟಿನಲ್ಲಿ ಗಣನೀಯಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಈಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.ಕೋವಿಡ್‌-19 ಬಿಕ್ಕಟ್ಟು ಶಮನವಾದನಂತರ ವಿಶ್ವನಾಥ್‌ ಅವರನ್ನು ರಷ್ಯಾಗೆಆಮಂತ್ರಿಸಿ ಅಲ್ಲಿನ ಸಂಸತ್ತಿನಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನುಪ್ರದಾನ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next