ಬಾಗಲಕೋಟೆ: ಕಳೆದ ಚುನಾವಣೆ ವೇಳೆ ಇದು ನನ್ನ ಕೊನೆಯ ಚುನಾವಣೆ, ಮುಂದಿನ ಬಾರಿ ಪರಿಷತ್‌ಸ್ಪರ್ಧಿಸಲ್ಲ ಎಂದಿದ್ದ ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಎಸ್.ಆರ್. ಪಾಟೀಲ ಬದಲಾದ ರಾಜಕೀಯ ವಿದ್ಯಮಾನಗಳಿಂದ ಮತ್ತೂಂದು ಬಾರಿ ಚುನಾವಣಾ ಕಣಕ್ಕಿಳಿಯಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ವಿಜಯಪುರ-ಬಾಗಲಕೋಟೆ ಸ್ಥಳೀಯಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಸತತ ನಾಲ್ಕುಬಾರಿ ಆಯ್ಕೆಯಾಗಿರುವ ಅವರು ಇನ್ನೊಮ್ಮೆ ಅಖಾಡಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.
ಹೌದು. ಕಳೆದ 2015-16ರಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಾಟೀಲರು ವಿಜಯಪುರ ಮತ್ತು ಬಾಗಲಕೋಟೆ ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ (ಜಿಪಂ, ತಾಪಂ, ಗ್ರಾಪಂ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸದಸ್ಯರಿಂದ ಆಯ್ಕೆ) ಸ್ಪರ್ಧಿಸಿದ್ದರು. ಆಗ ರಾಜ್ಯದ ಐಟಿ-ಬಿಟಿ ಸಚಿವರೂ ಆಗಿದ್ದ ಅವರು ಇದು ನನ್ನ ಕೊನೆಯ ಚುನಾವಣೆ. ಇದೊಂದು ಬಾರಿ ಆಯ್ಕೆ ಮಾಡಿ, ಮುಂದೆ ನಾನುಪರಿಷತ್ ಚುನಾವಣೆಗೆ ಸ್ಪರ್ಧಿಸಲ್ಲ. ರಾಜಕೀಯರಂಗದಲ್ಲಿ ಎಲ್ಲ ರೀತಿಯ ಸೇವೆ ಮಾಡಿದ್ದೇನೆಂದುಹೇಳಿದ್ದರು. ಆದರೀಗ ಇದೇ ಕ್ಷೇತ್ರದಿಂದ ಮತ್ತೂಮ್ಮೆಸ್ಪರ್ಧಿಸಲಿದ್ದಾರೆಂಬ ಮಾತು ಕೇಳಿ ಬರುತ್ತಿದೆ.
ಹಲವು ಅವಕಾಶ: ವಕೀಲರಾಗಿ, ಸಹಕಾರಿ ಧುರೀಣರಾಗಿ, ಶಿಕ್ಷಣ ಪ್ರೇಮಿಯಾಗಿ ಗುರುತಿಸಿಕೊಂಡಿರುವ ಎಸ್.ಆರ್. ಪಾಟೀಲರಿಗೆರಾಜಕೀಯ ರಂಗದ ಎಲ್ಲಾ ಅವಕಾಶಗಳು ದೊರೆತಿವೆ.ಜಿಲ್ಲಾ ಪಂಚಾಯಿತಿಗೂ ಮುಂಚೆ ಜಿಲ್ಲಾ ಪರಿಷತ್‌ನಸದಸ್ಯರಾಗಿ, ಅಖಂಡ ವಿಜಯಪುರದ ಜಿಲ್ಲಾ ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿ, ಮುಂದೆಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರಾಗಿ,ಅದೇ ಪರಿಷತ್‌ನ ವಿರೋಧ ಪಕ್ಷದ ಉಪನಾಯಕ,ನಾಯಕರಾಗಿ, ಬಳಿಕ ವಿಧಾನ ಪರಿಷತ್‌ನ ಸಭಾನಾಯಕರಾಗಿ, ಐಟಿ-ಬಿಟಿ ಸಚಿವರಾಗಿ, ಜಿಲ್ಲಾಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಇದೀಗವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಹುದ್ದೆಯೂ ಅವರಿಗೆ ಒಲಿದಿದೆ. ವಿಧಾನ ಪರಿಷತ್‌ನ ಆಡಳಿತ ಮತ್ತು ವಿರೋಧ ಪಕ್ಷದ ವ್ಯವಸ್ಥೆಯಲ್ಲಿರುವ ಎರಡೂ ಹಂತದಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡ ಅವರುತಮ್ಮದೇ ಆದ ಶೈಲಿಯ ರಾಜಕಾರಣದಿಂದ ಗುರುತಿಸಿಕೊಂಡಿದ್ದಾರೆ.
ಪಕ್ಷಾತೀತ ಬೆಂಬಲ: ಕಾಂಗ್ರೆಸ್ ಪಕ್ಷದ ಉತ್ತರ ಕರ್ನಾಟಕದ ಕಾರ್ಯಾಧ್ಯಕ್ಷರಾಗಿಯೂ ಕೆಲ ವರ್ಷಕೆಲಸ ಮಾಡಿದ ಪಾಟೀಲರು, ಪಕ್ಷ ಅಥವಾ ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಕುರ್ಚಿಗೆ ಅಂಟಿಕೊಂಡವರಲ್ಲಎಂಬ ಹೆಸರು ಪಡೆದಿದ್ದಾರೆ. ವಿಧಾನಸಭೆ ಚುನಾವಣೆವೇಳೆ ಪಕ್ಷಕ್ಕೆ ಹಿನ್ನಡೆಯಾದಾಗ ಕೆಪಿಸಿಸಿ ಕಾರ್ಯಾಧ್ಯಕ್ಷಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದರು. ಸಿದ್ದರಾಮಯ್ಯಸರ್ಕಾರದಲ್ಲಿ ಸಚಿವ ಸ್ಥಾನದಿಂದ ಕೈಬಿಟ್ಟು,ಪಕ್ಷದ ಜವಾಬ್ದಾರಿ ಕೊಟ್ಟಾಗಲೂ ಅಷ್ಟೇ ಸಮಾನಮನಸ್ಸಿನಿಂದ ಒಪ್ಪಿದ್ದರು. ನಾಲ್ಕು ಬಾರಿ ವಿಧಾನಪರಿಷತ್‌ಗೆ ಸ್ಪರ್ಧಿಸಿದಾಗ ತಮ್ಮ ಮಾತೃಪಕ್ಷದ ಜತೆಗೆಇತರೆ ಪಕ್ಷಗಳ ಪ್ರಮುಖರು, ನಾಯಕರಿಗೆ ಪರೋಕ್ಷ ಬೆಂಬಲ ನೀಡಿರುವುದು ಅವರ ರಾಜಕೀಯ ಜಾಣ್ಮೆಎಂದೇ ಹೇಳಬಹುದು.
ಮತ್ತೆ ಸ್ಪರ್ಧೆ: ಕಳೆದ ಬಾರಿ ವಿಧಾನ ಪರಿಷತ್ ಚುನಾವಣೆ ವೇಳೆ ಮತ್ತೂಮ್ಮೆ ಸ್ಪರ್ಧಿಸಲ್ಲ ಎಂದಿದ್ದ ಪಾಟೀಲರು ಮುಂದೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆಂಬ ಮಾತು ಎಲ್ಲೆಡೆ ಕೇಳಿ ಬಂದಿತ್ತು. ಜಿ.ಪಂ ಹಾಗೂ ವಿಧಾನ ಪರಿಷತ್‌ನಲ್ಲಿ ಎಲ್ಲ ರೀತಿಯ ಅಧಿಕಾರ ಅನುಭವಿಸಿರುವ ಅವರು ಒಮ್ಮೆಯಾದರೂ ವಿಧಾನಸಭೆಗೆ ಆಯ್ಕೆಯಾಗಬೇಕೆಂಬ ಹಂಬಲಅವರ ಬೆಂಬಲಿಗರದ್ದು. ಹೀಗಾಗಿ ಪರಿಷತ್‌ಚುನಾವಣೆಯಿಂದ ದೂರ ಉಳಿದು ವಿಧಾನಸಭೆಗೆ ಸ್ಪರ್ಧಿಸುತ್ತಾರೆಂಬ ಮಾತು ಪ್ರಚಲಿತದಲ್ಲಿದೆ.
ಈ ಭಾಗದ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಬೇಕು. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು.
ವಿರೋಧ ಪಕ್ಷದಲ್ಲಿದ್ದಾಗ ಆಡಳಿತ ಪಕ್ಷದ ಕಿವಿ ಹಿಂಡಿ ಜನರ ಕೆಲಸ ಮಾಡಿಸಬೇಕು, ಆಡಳಿತ ಪಕ್ಷದಲ್ಲಿದ್ದಾಗಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ಹೀಗಾಗಿಚುನಾವಣೆಯಲ್ಲಿ ಸ್ಪರ್ಧಿಸಿ, ಜನರ ಧ್ವನಿಯಾಗಬೇಕು.ಅದಕ್ಕಾಗಿ ಸ್ಪರ್ಧೆ ಅನಿವಾರ್ಯ ಎಂದು ರವಿವಾರಹೇಳಿಕೊಂಡಿದ್ದಾರೆ. ಇದರಿಂದ ಅವರು ಮತ್ತೂಮ್ಮೆಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತವಾದರೂ ಅದುವಿಧಾನಸಭೆಗೋ ಅಥವಾ ವಿಧಾನ ಪರಿಷತ್‌ಗೊà ಎಂಬುದು ಇನ್ನೂ ನಿಗೂಢವಾಗಿದೆ.
ನಾನು ಪ್ರತಿನಿಧಿಸುವ ವಿಜಯಪುರ- ಬಾಗಲಕೋಟೆ ಜಿಲ್ಲೆಗಳ ಜ್ವಲಂತ ಸಮಸ್ಯೆಗಳಿಗೆಧ್ವನಿಯಾಗಬೇಕು. ದಾರಿಯಲ್ಲಿ ನಿಂತು ಮಾತನಾಡಿದರೆ ಅದಕ್ಕೆಆದ್ಯತೆ ಸಿಗಲ್ಲ. ಹೀಗಾಗಿ ವಿಧಾನಸಭೆಯೇ ಇರಲಿ, ವಿಧಾನ ಪರಿಷತ್ ಇರಲಿ ಅಲ್ಲಿ ನಮ್ಮ ಭಾಗದ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿ, ಜನರ ಕಷ್ಟಕ್ಕೆ ಸ್ಪಂದಿಸಬೇಕೆಂಬುದು ನನ್ನ ಗುರಿ.
– ಎಸ್.ಆರ್. ಪಾಟೀಲ, ವಿರೋಧ ಪಕ್ಷದ ನಾಯಕ, ವಿಧಾನ ಪರಿಷತ್
-ಶ್ರೀಶೈಲ ಕೆ. ಬಿರಾದಾರ